ಸಿನಿಮಾ

ಟಗರು ತ್ರಿವಳಿಯರು ಮತ್ತೊಮ್ಮೆ ಒಂದಾಗಲಿದ್ದಾರಾ.

ಸೂರಿ ನಿರ್ದೇಶನದ ಟಗರು ಚಿತ್ರ ಭರಪೂರ ಗೆಲುವನ್ನು ತನ್ನದಾಗಿಸಿಕೊಂಡಿದೆ. ನಮ್ಮ ನಡುವಿನವೆ ಅನ್ನಿಸುವಂಥಾ ಪಾತ್ರಗಳು, ಭಿನ್ನವದ ನಿರೂಪಣಾ ಶೈಲಿ, ಅಚ್ಚರಿಯಾಗುವಂಥಾ ಪಾತ್ರಗಳಿಂದ ಕನ್ನಡದ ಗಡಿಯಾಚೆಗೂ ಟಗರಿನ ಖದರ್ ಹರಡಿಕೊಂಡಿದೆ. ಶಿವಣ್ಣನ ಎನರ್ಜಿಟಿಕ್ ನಟನೆ, ಮಾನ್ವಿತಾ, ಧನಂಜಯ್, ವಸಿಷ್ಠರಂತಹ ಮನೋಜ್ಞ ಅಭಿನಯ, ಸೂರಿಯ ಪಾತ್ರಕಟ್ಟುವ ಕುಸುರಿಗೆ ಪ್ರೇಕ್ಷಕರು ಮನಸೋತಿದ್ದಾರೆ. ಅಭಿಮಾನದಾಚೆಗೆ ನೋಡಿಸಿಕೊಳ್ಳುತ್ತಿರುವ ಟಗರು ಇದೀಗ ಯಶಸ್ವಿ 75 ದಿನಗಳನ್ನು ಕಂಪ್ಲೀಟ್ ಮಾಡಿ ನೂರನೇ ದಿನದತ್ತ ದಾಪುಗಾಲಿಡುತ್ತಿದೆ.

 

 

ಟಗರು ಸಿನಿಮಾ ಬಳಿಕವೂ ನಟ ಧನಂಜಯ್ ಜೊತೆಗಿನ ಸಂಬಂಧ ಹಾಗು ಕೆಲಸವನ್ನು ಮುಂದುವರಿಸುವುದಾಗಿ ನಿರ್ದೇಶಕ ಸೂರಿ ಈ ಹಿಂದೆ ತಿಳಿಸಿದ್ದರು. ಈಗ ತಮ್ಮ ಮಾತನ್ನು ಉಳಿಸಿಕೊಂಡಿರುವ ಸೂರಿ ಇನ್ನೂ ಹೆಸರಿಡದ ಸಿನಿಮಾ ಒಂದಕ್ಕೆ ಮತ್ತೆ ಇಬ್ಬರೂ ಜೊತೆಯಾಗಲಿದ್ದಾರೆ. ಚಿತ್ರದ ಕಥೆ, ಸಂಭಾಷಣೆ ಸಿದ್ಧವಾಗುತ್ತಿದೆ. ಶಿವರಾಜ್ ಕುಮಾರ್ ಅಭಿನಯದ ಯಶಸ್ವಿ ಚಿತ್ರ ಟಗರುವಿನಲ್ಲಿ ಡಾಲಿ ಪಾತ್ರದಲ್ಲಿ ಮಿಂಚಿದ್ದ ಧನಂಜಯ್ ನೆಗೆಟಿವ್ ಪಾತ್ರದ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗಿದ್ದರು.

 

 

ಮೂಲಗಳ ಪ್ರಕಾರ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಟಗರುವಿನ ನಂತರ ಮತ್ತೊಂದು ಯಶಸ್ವಿ ಚಿತ್ರವನ್ನು ನೀಡಲು ಸಿದ್ಧವಾಗಿದೆ ಈ ಜೋಡಿ. ಸಿನಿಮಾ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top