ಸಮಾಚಾರ

ಟೈಗರ್ ಶ್ರಾಫ್ ಮಾಡುವ ಸ್ಟಂಟ್ ನೋಡಿದ್ರೆ ನೀವು ಬೆಚ್ಚಿಬೀಳುವುದು ಖಂಡಿತ

ಬಾಲಿವುಡ್ ಚಿತ್ರರಂಗದ ನಟ ಟೈಗರ್ ಶ್ರಾಫ್ ಮತ್ತು ದಿಶಾ ಪಠಾನಿ ನಟನೆಯ ಬಹುನಿರೀಕ್ಷಿತ ಬಾಗಿ 2 ಬಿಡುಗಡೆಯಾಗಿ ದೊಡ್ಡ ಸದ್ದು ಮಾಡಿತ್ತು. ಟೈಗರ್ ಶ್ರಾಫ್ ಅವರು ತಮ್ಮ ಸ್ಟಂಟ್ ಹಾಗೂ ಮೈಕಟ್ಟಿನ ಮೂಲಕ ಅಪಾರ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈಗ ಇವರ ವಿಡಿಯೋವೊಂದು ಸಖತ್ ಸದ್ದು ಮಾಡುತ್ತಿದೆ ಎನ್ನಲಾಗಿದೆ.

 

 

ಟೈಗರ್ ಶ್ರಾಫ್ ಕೆಲವು ದಿನಗಳ ಹಿಂದೆ ಟೇಕ್ವಾಂಡೋದ ಬ್ಯಾಕ್ ಬೆಲ್ಟ್‍ನಲ್ಲಿ ಐದನೇ ಪದವಿಯನ್ನು ಮುಗಿಸಿದ್ದಾರೆ. ಈ ವೇಳೆ ಪ್ರದರ್ಶನ ಮಾಡಿದ ತಮ್ಮ ಸಾಹಸದ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋವನ್ನು 30 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

ಈ ವಿಡಿಯೋ ನೋಡಿ:

 

I beleive i can fly….#almosttttttt

A post shared by Tiger Shroff (@tigerjackieshroff) on

ಟೈಗರ್ ಶ್ರಾಫ್ ಅಭಿನಯದ ಬಾಗಿ ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಬಾಲಿವುಡ್ ನಟ ಹೃತಿಕ್ ರೋಷನ್ ಟೈಗರ್ ಶ್ರಾಫ್ ಬೆಸ್ಟ್ ಆ್ಯಕ್ಷನ್ ಹೀರೋ ಎಂದು ಕರೆದಿದ್ದಾರೆ. ಈ ಹಿಂದೆ ಮತ್ತೊರ್ವ ನಟ ಅಕ್ಷಯ್ ಕುಮಾರ್ ಸಹ ಟೈಗರ್ ಶ್ರಾಫ್ ರನ್ನು ಟೋನಿ ಝಾ ಎಂದು ಹೇಳಿದ್ದರು. ಬಾಗಿ 2 ಸಿನೆಮಾವನ್ನು ಅಹಮದ್ ಖಾನ್ ನಿರ್ದೇಶಿಸಿದ್ದಾರೆ. ಈ ಸಿನೆಮಾಗೆ ಸಾಜಿದ್ ನಡಿಯವಾಲ ಬಂಡವಾಳ ಹೂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top