ಸಮಾಚಾರ

ಡ್ವೇನ್ ಬ್ರಾವೋ ಹಾಡಿಗೆ ಹೆಜ್ಜೆ ಹಾಕಿದ ಧೋನಿ ಪುತ್ರಿ ಜಿವಾ ವಿಡಿಯೋ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಚೆನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿಯಷ್ಟೇ ಅವರ ಮಗಳು ಜೀವಾ ಕೂಡಾ ಖ್ಯಾತಿ ಪಡೆದಿದ್ದಾಳೆ. ಈಗ ಜೀವಾ ಮತ್ತೊಮ್ಮೆ ತನ್ನ ಪ್ರತಿಭೆ ತೋರಿಸಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿ ಹರಿದಾಡುತ್ತಿದೆ.

 

 

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಬ್ರಾವೋ ಹಾಡಿಗೆ ಎಂಎಸ್ ಧೋನಿ ಮಗಳಾದ ಜಿವಾ ಡಾನ್ಸ್ ಮಾಡಿರುವ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದೆ. ಬ್ರಾವೋ ಕ್ರೀಡಾಂಗಣದಲ್ಲಿ ಉತ್ತಮ ಬೌಲರ್ ಎಂಬುವುದರೊಂದಿಗೆ ಉತ್ತಮ ಹಾಡುಗಾರ ಎಂಬುವುದು ಎಲ್ಲರಿಗೂ ತಿಳಿದ ಸಂಗತಿ. 2016 ರಲ್ಲಿ ಬಿಡುಗಡೆಯಾದ ಬ್ರಾವೋ ರ `ಚಾಂಪಿಯನ್’ ಹಾಡು ಹಿಟ್ ಆಗಿತ್ತು. ಈ ಹಾಡಿಗೆ ಧೋನಿ ಮಗಳು ಡಾನ್ಸ್ ಮಾಡಿದ್ದಾಳೆ.

ಈ ವಿಡಿಯೋ ನೋಡಿ:

Cutest visuals for ‘Champion’ you’ll ever see! #whistlepodu @djbravo47 @royalnavghan @asif_km_24 #Gracia #Ziva 🦁💛

A post shared by Chennai Super Kings (@chennaiipl) on

ಇತ್ತೀಚಿಗೆ ಹಾಲಿವುಡ್ ಹಾಡಿಗೆ ಜೀವಾ ಹೆಜ್ಜೆ ಹಾಕಿದ ವಿಡಿಯೋವನ್ನು ಮಹೇಂದ್ರ ಸಿಂಗ್ ಧೋನಿ ಇನ್ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ರು. ಇದಕ್ಕೂ ಕೂಡಾ ಸಿಕ್ಕಾಪಟ್ಟೆ ಲೈಕ್ಸ್ ಬಂದಿತ್ತು. ಅಲ್ಲದೆ ಜೀವಾ ಹಾಡಿದ ಹಾಡು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top