ದೇವರು

ಸರ್ಪದೋಷ ನಿವಾರಣೆಗೆ ಪ್ರಸಿದ್ದಿಯಾದ ಶ್ರೀ ಕಾಳಹಸ್ತೀಶ್ವರ ದೇವಾಲಯದ ಬಗ್ಗೆ ತಿಳ್ಕೊಳ್ಳೆಬೇಕಾದ 12 ಆಶ್ಚರ್ಯಕಾರಿಯಾದ ವಿಷಯಗಳು

ಶ್ರೀ ಕಾಳಹಸ್ತೀಶ್ವರ ದೇವಾಲಯದ ಬಗ್ಗೆ ನಿಮಗೆ ತಿಳಿಯದೇ ಇರುವ ಆಶ್ಚರ್ಯಕಾರಿ ವಿಷಯಗಳು

 

ಶ್ರೀ ಕಾಳಹಸ್ತಿ ದೇವಾಲಯದ ವಿಶೇಷತೆಗಳು ನಿಮಗೆ ಗೊತ್ತಾದರೆ, ತಪ್ಪದೇ ನೀವು ಈ ದೇವಾಲಯವನ್ನು ದರ್ಶನ ಮಾಡದೆ ಇರುವುದಿಲ್ಲ. ಪರಮ ಪವಿತ್ರವಾದ ಶ್ರೀ ಕಾಳಹಸ್ತಿ ಈ ಭೂಮಿಯ ಸ್ವರ್ಗವೇ ಆಗಿದೆ. ಇಲ್ಲಿಗೆ ಹೋದರೆ ಸಾಕು ಗುಹೆಯೊಳಗೆ ಪ್ರವೇಶಿಸಿದ ಅನುಭವ ಆಗುತ್ತದೆ. ಹಳೆ ಕಾಲದ ಈ ದೇವಾಲಯದಲ್ಲಿ ಪಡಿಮೂಡಿರುವ  ಶಿಲ್ಪಕಲೆಯ ದಿವ್ಯತೆ ನಮ್ಮನ್ನು ಅವ್ಯಕ್ತ ಆನಂದದ ಕಡೆಗೆ ಕೊಂಡೊಯ್ಯುತ್ತದೆ.

 

 

1. ಬೃಹತ್ ಗಾತ್ರದಲ್ಲಿ ಸಾಲಾಗಿ ಜೋಡಿಸಿರುವ ಕಂಬಗಳ ಹಾಗೆ ಇರುವ ಈ ಕಂಬಗಳನ್ನು ನೋಡಿದರೆ ನಮ್ಮನ್ನು ಮೋಡಿ ಮಾಡಿ ಹತ್ತಿರ ಸೆಳೆಯುತ್ತವೆ. ಈ ಪ್ರದೇಶದಲ್ಲಿ ನಾವು ದೇವಾಲಯದ ಒಳಗೆ ಪ್ರವೇಶ ಮಾಡಿದರೆ ಕೈಲಾಸಗಿರಿಗೆ ಪ್ರವೇಶ ಮಾಡಿದಂತೆಯೇ, ಪರಮೇಶ್ವರನನ್ನು ದರ್ಶನ ಮಾಡಿದಂತೆಯೇ ಆಗುತ್ತದೆ. ದಕ್ಷಿಣ ಕಾಶಿಗಳು ಸಾಕಷ್ಟು ಇವೆ. ಆದರೆ ದಕ್ಷಿಣ ಕೈಲಾಸ ಮಾತ್ರ ಒಂದೇ ಒಂದು ಇದೆ. ಅದೇ ಶ್ರೀ ಕಾಳಹಸ್ತಿ ಎಂದು ಹೇಳಲಾಗುತ್ತದೆ.

2. ಶ್ರೀ ಕಾಳಹಸ್ತಿ ವಾಯು ಲಿಂಗ ಕ್ಷೇತ್ರ. ವಾಯು ಲಿಂಗ ಎಂದರೆ ಜೀವ ಅಥವಾ ಪ್ರಾಣ ಎಂದರ್ಥ. ವಾಯು ಇದ್ದರೇನೇ ಪ್ರಾಣ ಇರುತ್ತದೆ, ಪ್ರಾಣ ಇದ್ದರೇನೇ ವಾಯು  ಇರುತ್ತದೆ. ಪರಮ ಪವಿತ್ರ ಕ್ಷೇತ್ರ ಇದಾಗಿದೆ. ಈ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ಜ್ಞಾನ ಪ್ರಸನ್ನಾ ಅಂಭಿಕೆ ಅಮ್ಮನವರು ಸಾಕ್ಷಾತ್ ಇಂದ್ರನಿಗೆ ಜ್ಞಾನವನ್ನು ಕರುಣಿಸಿದ್ದಾರೆ ಎಂದು ಹೇಳಲಾಗುತ್ತದೆ.

3. ಈ ಕ್ಷೇತ್ರದಲ್ಲಿ ಪರಮೇಶ್ವರ ಕೈಲಾಸ ಗಿರಿಗಳಲ್ಲಿ ನೆಲೆಸಿರುವ ದಕ್ಷಿಣ ಕಾಶಿಗಳು ಸಾಕಷ್ಟು ಇವೆ. ಆದರೆ ಈ ಸೃಷ್ಟಿಯಲ್ಲಿ ಕೈಲಾಸ ಮಾತ್ರ ಒಂದೇ ಒಂದು ಇದೆ. ಆದೇ ರೀತಿ  ದಕ್ಷಿಣ ಕೈಲಾಸ ಕೂಡ ಒಂದೇ  ಬಂದು ಶ್ರೀ ಕಾಳಹಸ್ತಿ. ಶ್ರೀ ಕಾಳಹಸ್ತಿಶ್ವರನ  ಹೆಸರಿನಲ್ಲಿ ಪೂಜೆ ಮಾಡುವ ಮುಖ್ಯವಾದ ದೇವರು ಪರಮೇಶ್ವರ . ಜ್ಞಾನ ಪ್ರಸನ್ನಾ ಅಂಭಿಕೆಯ ಹೆಸರಿನಲ್ಲಿ ಸಾಕ್ಷಾತ್ ಪಾರ್ವತಿಯೇ ಇಲ್ಲಿ ನೆಲೆಸಿದ್ದಾಳೆ. ದಕ್ಷಿಣಾಮೂರ್ತಿ, ಸುಬ್ರಹ್ಮಣ್ಯ, ಗಣಪತಿ ದೇಗುಲಗಳು ಕೂಡ ಇಲ್ಲಿ ನೆಲೆಸಿದೆ.

 

 

4. ಇಂತಹ ಪರಮ ಪವಿತ್ರ ಕ್ಷೇತ್ರ ಮತ್ತೆಲ್ಲೂ ಇಲ್ಲ. ಶ್ರೀ ಕಾಳಹಸ್ತಿಯ ಗೋಪುರವನ್ನು ದರ್ಶನ ಮಾಡಿಕೊಂಡರೆ ಸಾಕು. ಕೈಲಾಸವನ್ನು ದರ್ಶನ ಮಾಡಿದಂತೆಯೇ ಆಗುತ್ತದೆ. ಭಕ್ತರ ಭಕ್ತಿಗೆ ಮೊದಲ ಆದ್ಯತೆ ಈ ಕ್ಷೇತ್ರದಲ್ಲಿ ನೀಡಲಾಗಿದೆ. ಜೇಡ ಶ್ರೀ, ಕಾಳ ,ಸರ್ಪ,ಆನೆ,ಹಸ್ತಿ  ಇವರು ಒಟ್ಟಾಗಿ ಸೇರಿ ಪರಮೇಶ್ವರನನ್ನು ಆರಾಧಿಸಿದ್ದೇ,  ಈ ವಿಶಿಷ್ಟ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಆವರ ಭಕ್ತಿಗೆ ಮೆಚ್ಚಿದ ಶಿವ ಅವರಿಗೆ ಇಲ್ಲಿ ಮೋಕ್ಷ ಪ್ರಾಪ್ತಿಗೆ ರಚನೆ ಮಾಡಿದ ಸ್ಥಳವಾಗಿದೆ. ಇಲ್ಲಿ ಆ ಮೂವರ ಹೆಸರನ್ನು ಇಟ್ಟುಕೊಂಡು ಶ್ರೀ ಕಾಳಹಸ್ತಿ ಎಂದು ಅವತರಿಸಲಾಗಿದೆ. ಈ ಮೂರು ಜೀವಿಗಳು ಒಟ್ಟಾಗಿರುವ ಪ್ರತಿಮೆ ಮುಖ್ಯ ದೇವಾಲಯದ ಮುಂಭಾಗದಲ್ಲಿ ಇದೆ. ಆದ್ದರಿಂದ ಇದನ್ನು ಜನಮಾನಸದಲ್ಲಿ ದಕ್ಷಿಣ ಕಾಶಿ ಎಂದೇ ಹೆಸರು ಮಾಡಿದೆ.

5. ಮಹಾಶಿವರಾತ್ರಿಯ ಸಂದರ್ಭದಲ್ಲಿ ಪರಮೇಶ್ವರನ ಪರಮ ಭಕ್ತನಾದ ಬೇಡರ ಕಣ್ಣಪ್ಪನ ಮೊದಲ ಪೂಜೆ ಇಲ್ಲಿ ಮಾಡಲಾಗುತ್ತದೆ. ದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಭಗವಂತನಿಗೆ ಜಗನ್ಮಾತೆಗೆ ಸವ್ಯ ರೀತಿಯಲ್ಲಿ ಪ್ರದಕ್ಷಿಣಾದಿಗಳನ್ನು ಮಾಡಿದರೆ, ಆದರೆ ಇಲ್ಲಿ ಶ್ರೀ ಕಾಳಹಸ್ತಿಯಲ್ಲಿ ಅಪಸವ್ಯ ರೀತಿಯಲ್ಲಿ ದರ್ಶಿಸಿ ಪರಮೇಶ್ವರನನ್ನು ಜ್ಞಾನ ಪ್ರಸನ್ನ ಅಂಭಿಕೆಯನ್ನು ದರ್ಶನ ಮಾಡುತ್ತಾರೆ. ಅದೇ ಇಲ್ಲಿನ ಪ್ರತ್ಯೇಕತೆಯಾಗಿದೆ. ಅದಕ್ಕೆ ಇಲ್ಲಿ ರಾಹು, ಕೇತುಗಳು ಶಾಂತವಾಗಿ ಪ್ರಸನ್ನವದನರಾಗಿ ನೆಲೆಸಿದ್ದಾರೆ.

6. ಶ್ರೀ ಕಾಳಹಸ್ತಿಯೂ   ಪಶ್ಚಿಮಾಭಿಮುಖವಾಗಿ ಸ್ವಾಮಿಯ ದೇವಾಲಯದಲ್ಲಿ ಇರುವುದರಿಂದ ಶ್ರೀಕಾಳಹಸ್ತಿ ಅಷ್ಟೊಂದು ಖ್ಯಾತಿಯನ್ನು ಪಡೆದುಕೊಂಡು ದಶ ದಿಕ್ಕುಗಳಿಗೂ ವ್ಯಾಪಿಸಿದೆ ಎಂದು ಪುರಾಣಗಳಲ್ಲಿ ಪ್ರಖ್ಯಾತಿಯಾಗಿದೆ. ಶ್ರೀ ಕಾಳಹಸ್ತಿಯನ್ನು ಪೂರ್ವದ್ವಾರದ ಮೂಲಕ ಪ್ರವೇಶ ಮಾಡಿ ಪಾತಾಳದ ವಿನಾಯಕನನ್ನು ದರ್ಶನ ಮಾಡಿದ ನಂತರ ಶ್ರೀ ಕಾಳಹಸ್ತೀಶ್ವರನನ್ನು ದರ್ಶನ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ.

 

 

7. ನಕೀರ  ಎಂಬ ಭಕ್ತನು ಕುಷ್ಠ ರೋಗದಿಂದ ಬಳಲುತ್ತ ಇರುವಾಗ ತನ್ನ ಚರ್ಮಾಂಕದಲ್ಲಿ ಶಿವನನ್ನು ದರ್ಶನ ಮಾಡಿ ಮೋಕ್ಷ ಹೊಂದುವ ಬಯಕೆಯನ್ನು ಹೊತ್ತು ಕೈಲಾಸಕ್ಕೆ ಹೇಗೆ ಹೋಗಬೇಕು ಎನ್ನುವ ಗೊಂದಲದಲ್ಲಿ ಇದ್ದಾಗ, ಶ್ರೀ ಕಾಳಹಸ್ತಿ ಕ್ಷೇತ್ರಕ್ಕೆ ಸೇರಿ ಪರಮೇಶ್ವರನನ್ನು ದರ್ಶನ ಮಾಡಿದ ನಂತರ ಶಿಖರ ದರ್ಶನ ಮಾಡು, ಎನ್ನುವ ಅದೃಶ್ಯವಾಣಿಯಂತೆ, ಅಶರೀರ ವಾಣಿಯ  ಮಾತಿನಂತೆ ನೆಡೆದುಕೊಳ್ಳುತ್ತಾನೆ ನಕೀರನು. ಆಗ ತನ್ನ ಸಮಸ್ತ ರೋಗರುಜಿನಗಳಿಂದ ಮುಕ್ತಿಯನ್ನು ಹೊಂದುತ್ತಾನೆ.

8. ಪಾತಾಳ ವಿನಾಯಕನ ಸ್ವಾಮಿಯ ಸನ್ನಿಧಿಯಲ್ಲಿ ನಿಂತುಕೊಂಡು ಐದು  ಬಾರಿ ವಿಜ್ಞ ವಿನಾಯಕನನ್ನು ಪ್ರಾರ್ಥಿಸಿ ಕೊಂಡರೆ ಸಾಕು ಮೋಕ್ಷ ಪ್ರಾಪ್ತಿಯಾಗುತ್ತದೆ. ಶ್ರೀ ಕಾಳಹಸ್ತೀಶ್ವರ ಕ್ಷೇತ್ರದಲ್ಲಿ ವಾಯು ಲಿಂಗೇಶ್ವರನು  ನವಗ್ರಹಗಳನ್ನು ಕವಚವಾಗಿ ಧರಿಸಿರುವನು . ಹೀಗೆ ಎಲ್ಲಾ ನವಗ್ರಹಗಳನ್ನು ಶಿವನು ತನ್ನ ಅಧೀನದಲ್ಲಿ ಇಟ್ಟುಕೊಂಡು ಶ್ರೀ ಕಾಳಹಸ್ತಿಯಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ.

9. ಜ್ಞಾನ ಪ್ರಸನ್ನಾ ಆಂಭಿಕೆಯು ಭಕ್ತರಿಗೆ ಪರಿಪೂರ್ಣ ಜ್ಞಾನ ಪ್ರಧಾನಿಯಾಗಿ ಭಕ್ತರ ಮೊರೆ ಆಲಿಸುವಂತೆ ತಲೆಯನ್ನು ಒಂದು ಕಡೆ ವಾಲಿಸಿಕೊಂಡು ಅಭಯವನ್ನು ನೀಡುವಂತೆ ಇರುತ್ತಾಳೆ. ಇಂತಹ ಭಂಗಿಯಲ್ಲಿ ಜಗನ್ಮಾತೆಯು ಯಾವ ಕ್ಷೇತ್ರದಲ್ಲಿಯೂ ಇಲ್ಲ ಎನ್ನುವುದು ಅಷ್ಟೇ ಸತ್ಯ, ಅಷ್ಟೇ ಅಲ್ಲದೇ ಇಲ್ಲಿ ಮೃತ್ಯುವನ್ನು ಜಯಿಸಿದ ಗುರು ದಕ್ಷಿಣಾಮೂರ್ತಿಯು ಸಹ ದಕ್ಷಿಣಾಭಿಮುಖವಾಗಿ ನೆಲೆಸಿರುತ್ತಾನೆ. ಇದೆ ಈ ದೇವಾಲಯದ ಪ್ರತ್ಯೇಕತೆಯಾಗಿದೆ.

 

 

10. ಶ್ರೀ ಗುರು ದಕ್ಷಿಣ ಮೂರ್ತಿಯೂ ಸಾಕ್ಷತ್ ಪಾರ್ವತಿ ದೇವಿಯ ಅವತಾರ ಆತನ ಸಾನ್ನಿಧಾನದಲ್ಲಿ   ಕಣ್ಣು ಮುಚ್ಚಿಕೊಂಡು ಕೆಲವು ನಿಮಿಷಗಳ ಕಾಲ ಧ್ಯಾನ ಮಗ್ನರಾಗಿ ಭಕ್ತಿಯಿಂದ ಪ್ರಾರ್ಥಿಸಿದರೆ ಸಾಕು ಸಾಕ್ಷಾತ್ ಸರಸ್ವತಿಯ ಕೃಪಾಕಟಾಕ್ಷ ನಿಮಗೆ ದೊರೆಯುತ್ತದೆ. ಹೀಗಾಗಿ ಇಲ್ಲಿ ಸಾಕಷ್ಟು ಜನ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮತ್ತು ಗುರುದಕ್ಷಿಣೆಯನ್ನು ಗುರು ಸಾನಿಧ್ಯದಲ್ಲಿ ಜರುಗಿಸುವುದನ್ನು ನೋಡುತ್ತೇವೆ.

11.ಹೀಗೆ ಈ ಶ್ರೀ ಕಾಳಹಸ್ತಿ ಕ್ಷೇತ್ರವು ಪರಮ ಪವಿತ್ರವಾದ ಕ್ಷೇತ್ರವಾಗಿದ್ದು ಯಾತ್ರಾರ್ಥಿಗಳನ್ನು ಸೂಜಿಗಲ್ಲಿನಂತೆ ಸೆಳೆಯುವ ದೇವಾಲಯಗಳ ನೆಲೆಬೀಡು ಎಂದೇ ಖ್ಯಾತಿಯನ್ನು ಪಡೆದುಕೊಂಡಿದೆ. ಹೀಗೆ ಶ್ರೀಕಾಳಹಸ್ತಿ ಕ್ಷೇತ್ರ ಪರಮ ಪವಿತ್ರ ಕ್ಷೇತ್ರವಾಗಿ ಪರಮೇಶ್ವರನ ಸಾಕ್ಷಾತ್ ಕೈಲಾಸವಾಗಿ ಸಾಕ್ಷಾತ್ ಭಕ್ತ ವೃಂದದವರಿಗೆ ಅಭಯವನ್ನು ನೀಡುತ್ತಾ ಆಂಧ್ರಪ್ರದೇಶದ ಚಿತ್ತೂರ  ಜಿಲ್ಲೆಯಲ್ಲಿ ನೆಲೆಸಿದೆ. ರಾಹು ಕೇತು ಪೂಜೆಗಳು ಸರ್ಪದೋಷ ಪೂಜೆಗಳು ಇಲ್ಲಿ ಮಾಡಿಸಲಾಗುತ್ತದೆ.

12. ಹೀಗೆ ಒಂದು ಜೇಡರ ಹುಳು ಶಿವಲಿಂಗದ ಸುತ್ತಲೂ ಜೇಡರ ಬಲೆ ಎಳೆದು ಶಿವಲಿಂಗವನ್ನು ಪೂಜಿಸಿ ಕೊಂಡಿದ್ದು ಒಂದು ಕಾಳಸರ್ಪ ಲಿಂಗದ ಮೇಲೆ ರತ್ನಗಳನ್ನು ಇಟ್ಟು ಪೂಜಿಸಿದ್ದು ಮತ್ತು ಆನೆ ತನ್ನ ಸೊಂಡಲಿನಲ್ಲಿ ನೀರನ್ನು ತಂದು ಅಭಿಷೇಕ ಮಾಡಿ ಪವಿತ್ರ ಪುಷ್ಪಗಳಿಂದ ಪೂಜೆಸಿತ್ತು ಎಂದು ಈ ಮೂರು ಪ್ರಾಣಿಗಳು ತಮ್ಮ ಭಕ್ತಿ ಮತ್ತು ಸೇವೆಗಳಿಂದ ಮೋಕ್ಷ ಪಡೆದರು ಎಂದು ಇಲ್ಲಿನ ಸ್ಥಳ ಪುರಾಣವು ತಿಳಿಸುತ್ತದೆ. ನೀವು ಒಂದು ಬಾರಿ ಈ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಕಾಳಹಸ್ತಿಶ್ವರನ ಅನುಗ್ರಹವನ್ನು ಪಡೆದುಕೊಳ್ಳಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top