ಧರ್ಮ

ರಂಜಾನ್ ಪವಿತ್ರ ಮಾಸದಲ್ಲಿ ಇಂತಹ ಜನರು ಉಪವಾಸ ಸೇರಿದಂತೆ ಈ ಕೆಲಸಗಳನ್ನ ಮಾಡಿದ್ರೆ ಮಹಾಪಾಪ

ಪವಿತ್ರ ರಂಜಾನ್ ಮಾಸದಲ್ಲಿ ಕಟ್ಟುನಿಟ್ಟಿನ ವ್ರತ ಮಾಡಿ ಉಪವಾಸ ಮಾಡಿದರೆ ಸ್ವರ್ಗಕ್ಕೆ ಹೋಗುತ್ತಾರೆ ಎನ್ನುವ ನಂಬಿಕೆ ಇದೆ , ಈ ಸಮಯದಲ್ಲಿ ರಾಗ ದೇಶಗಳನ್ನು ಹೊರತು ಎಲ್ಲರೊಂದಿಗೆ ಪ್ರೀತಿಯಿಂದ ಇರುವುದು ಹಾಗೆಯೇ ದಾನ ಧರ್ಮ ವ್ರತ ಉಪವಾಸ ಈ ರೀತಿಯ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡರೆ ನಮ್ಮ ಆತ್ಮ ಶುದ್ಧಿ ಯಾಗುತ್ತದೆ ಎಂದು ಹೇಳಲಾಗುತ್ತದೆ.

 

 

ಉಪವಾಸ ಆರೋಗ್ಯಕ್ಕೆ ಒಳ್ಳೆಯದು ಮತ್ತು ಆತ್ಮೀಯ ಜೀವನವನ್ನು ಹೆಚ್ಚಿಸುತ್ತದೆ, ಮನುಷ್ಯನ ಅಂತರ್‌ಶುದ್ಧಿಗೆ ಹಾಗೂ ಪಾಪ ಪರಿಹಾರಕ್ಕೆ ಉಪವಾಸ ಉತ್ತಮ ಮಾರ್ಗವಾಗಿದೆ, ಸಂಜೆಯ ಏಳು ಗಂಟೆಯವರೆಗೆ ಅನ್ನಾಹಾರಗಳನ್ನು ತ್ಯಜಿಸುವುದೇ ಉಪವಾಸವಲ್ಲ, ಬದಲಿಗೆ ಈ ಅವಧಿಯಲ್ಲಿ ಮನಸ್ಸಿನಲ್ಲಿ ಏಳುವ ಬಯಕೆಗಳನ್ನು ನಿಗ್ರಹ ಮಾಡಿಕೊಂಡು ತಮ್ಮನ್ನು ತಾವು ಹತೋಟಿಯಲ್ಲಿ ಇಟ್ಟುಕೊಳ್ಳುವುದಲ್ಲದೆ ಒಳ್ಳೆಯ ಆಲೋಚನೆಗಳನ್ನು ಮಾಡಬೇಕಾಗುತ್ತದೆ

ಈ ಒಂದು ತಿಂಗಳ ಕಠಿಣ ವೃತಾಚರಣೆಗಳ ಬಳಿಕ ಈದ್-ಉಲ್-ಫಿತ್ರ ಬರುತ್ತದೆ , ಈ ಬಾರಿಯ ರಂಜಾನ್ 16 ಮೇ ಸಂಜೆ ಶುರುವಾಗಿ ಜೂನ್ 14 ರ ಸಂಜೆ ಮುಗಿಯುತ್ತದೆ . ನಮಾಜ್, ರೋಜಾ, ಕುರಾನ್ ಪಠಣ ಇತ್ಯಾದಿಗಳ ಮೂಲಕ ಸ್ವರ್ಗ ಸೇರಲು ಸಿದ್ಧತೆ ಮಾಡಿಕೊಳ್ಳುತ್ತಾರೆ.

ಆದರೆ ರಂಜಾನ್ ಉಪವಾಸ ಸಮಯದಲ್ಲಿ ಯಾರ್ಯಾರು ಉಪವಾಸ ಆಚರಣೆ ಮಾಡಬಾರದು ಗೊತ್ತೇ ?

ರಂಜಾನ್ ಸಮಯದಲ್ಲಿ ದಾನವು ಸಹ ಮಹತ್ವವನ್ನು ಪಡೆದುಕೊಳ್ಳುತ್ತದೆ ಫಿಡಿಯಾ ಕಫಾರಾ ಎಂಬ ಎರಡು ನಿಯಮಗಳಲ್ಲಿ ಉಪವಾಸ ವ್ರತವನ್ನು ಪಾಲಿಸದೆ ಇರುವವರು ಆಹಾರ ದಾನ , ಹಾಗೂ ವಸ್ತುಗಳು ಹಣದ ರೂಪದಲ್ಲಿ ಬಡವರಿಗೆ ನಿರ್ಗತಿಕರಿಗೆ ಸಹಾಯ ಮಾಡಿದರೆ ಪುಣ್ಯ ದೊರಕುತ್ತದೆ ಎಂದು ಹೇಳಲಾಗುತ್ತದೆ .

ಆರೋಗ್ಯದಿಂದ ಇರುವವರು ಯಾರಾದರೂ ಸರಿ ರಂಜಾನ್ ಉಪವಾಸವನ್ನು ಕೈಗೊಳ್ಳಬಹುದಾಗಿದೆ

ದೂರದ ಊರುಗಳಿಗೆ ಬಹಳ ಗಂಟೆಗಳ ಕಾಲ ಪ್ರಯಾಣ ಕೈಗೊಳ್ಳುತ್ತಿದ್ದರೆ ಅಂತ ಅವರು ರಂಜಾನ್ ಉಪವಾಸದಿಂದ ದೂರವಿರ ಬೇಕಾಗುತ್ತದೆ .

 

 

ಇನ್ನು ಹೆಣ್ಣು ಮಕ್ಕಳ ವಿಷಯಕ್ಕೆ ಬಂದರೆ ತಿಂಗಳ ಋತುಚಕ್ರದಿಂದ ಬಳಲುತ್ತಿರುವವರು ಹಾಗೆಯೇ ಋತುಮತಿಯಾಗಿರುವವರು ಹೆರಿಗೆಯ ನಂತರದ ಬಾಣಂತಿಯರು ಉಪವಾಸ ಮಾಡಕೂಡದು .ಏಕೆಂದರೆ ತೀವ್ರವಾದ ರಕ್ತಸ್ರಾವದಿಂದ ಬಳಲುತ್ತಿರುವಾಗ ಉಪವಾಸ ಮಾಡಿದರೆ ನಿಶ್ಯಕ್ತಿ ಉಂಟಾಗುತ್ತದೆ ಈ ಕಾರಣದಿಂದ ಇಂಥವರಿಗೆ ಉಪವಾಸ ಮಾಡದಿರಲು ಸೂಚಿಸಲಾಗುತ್ತದೆ .

ಅನಾರೋಗ್ಯದಿಂದ ಬಳಲುತ್ತಿರುವವರು ಸಹ ಉಪವಾಸ ಮಾಡುವುದನ್ನು ನಿಷೇಧಿಸಲಾಗಿದೆ ಅಂತ ಅವರು ಒಳ್ಳೆಯ ಫಲಗಳನ್ನು ಪಡೆಯಲು ಬಡ ಬಗ್ಗರಿಗೆ ದಾನ ಮಾಡಬಹುದು ಹಾಗೆಯೇ ಅನ್ನದಾನ ಸಹ ಮಾಡಬಹುದು ಇದು ಸಹ ಪುಣ್ಯದ ಕಾರ್ಯ ಎಂದು ಪರಿಗಣಿಸಲಾಗುತ್ತದೆ .

ಗರ್ಭಿಣಿಯರು ಹಾಗೂ ಮೊಲೆ ಹಾಲನ್ನು ಉಣಿಸುತ್ತಿರುವ ತಾಯಂದಿರು ಸಹ ಉಪವಾಸವನ್ನು ಮಾಡಬಾರದು ಏಕೆಂದರೆ ಉಪವಾಸ ಮಾಡಿದರೆ ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಬೀರುತ್ತವೆ ಇದು
ಪಾಪದ ಕೆಲಸ ಎಂದು ಪರಿಗಣಿಸಲಾಗುತ್ತದೆ .

ರಂಜಾನ್ ಸಮಯದಲ್ಲಿ ಇನ್ಯಾವ ಕೆಲಸಗಳನ್ನು ಮಾಡಬಾರದು ?

 

 

ಸೂರ್ಯೋದಯದ ನಂತರ ಹಾಗೂ ಸೂರ್ಯಾಸ್ತಮಾನದ ಒಳಗೆ ನೀರನ್ನು ಸೇವನೆ ಮಾಡಬಾರದು ಒಂದು ವೇಳೆ ಆಹಾರವನ್ನು ಸೇವನೆ ಮಾಡಿದರೆ ಹಾಗೆಯೇ ನೀರನ್ನು ಕುಡಿದರೆ ಅಂಥವರ ವ್ರತ ಫಲಿಸುವುದಿಲ್ಲ ಎಂದು ಹೇಳಲಾಗುತ್ತದೆ .

ಇಷ್ಟವಿಲ್ಲದಿದ್ದರೂ ಬಲವಂತವಾಗಿ ಉಪವಾಸ ಮಾಡಲು ಪ್ರಯತ್ನ ಮಾಡುವುದು ಸಹ ಪಾಪದ ಕೆಲಸ .

ಮದ್ಯಪಾನ ಹಾಗೂ ಧೂಮಪಾನದಂತಹ ದುಶ್ಚಟಗಳಲ್ಲಿ ಭಾಗಿಯಾಗಬಾರದು .

ವ್ರತದಲ್ಲಿ ಭಾಗಿಯಾಗಿರುವವರು ಲೈಂಗಿಕ ಕ್ರಿಯೆ ನಡೆಸುವಂತಿಲ್ಲ ಒಂದು ವೇಳೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾದರೆ ಅಂಥವರು ಅರುವತ್ತು ದಿನಗಳ ಕಾಲ ಕಟ್ಟುನಿಟ್ಟಿನ ವ್ರತವನ್ನು ಪಾಲಿಸಬೇಕಾಗುತ್ತದೆ ಹಾಗೆಯೇ ಬಡಬಗ್ಗರಿಗೆ ಹಣ ಹಾಗೂ ಆಹಾರದ ದಾನವನ್ನು ಮಾಡಬೇಕಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top