ಸಮಾಚಾರ

ಬಿಜೆಪಿ ಪಕ್ಷದ ಮುಂದಿರುವ ಆಯ್ಕೆಗಳೇನು

ಪ್ರಸ್ತುತ ರಾಜಕೀಯ ಕ್ಷಣ ಕ್ಷಣಕ್ಕೂ ರೋಚಕತೆ ಮೂಡಿಸುತ್ತಿದೆ. ಬಿಜೆಪಿ ಮುಂದೆ ಈಗ ಎರಡು ಮಾರ್ಗಗಳಿವೆ ಎನ್ನಲಾಗುತ್ತಿದೆ.

 

 

ಮಾರ್ಗ 1:

8 ಜನ ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರನ್ನು ತಮ್ಮ ಪರ ಮತ ಚಲಾವಣೆ ಮಾಡುವಂತೆ ನೋಡಿಕೊಳ್ಳಬೇಕು. ಆದರೆ ಪಕ್ಷ ಬಾಹಿರ ಚಟುವಟಿಕೆಯಿಂದಾಗಿ ಆ ಶಾಸಕರು ಅನರ್ಹ ಗೊಳ್ಳುವ ಸಾಧ್ಯತೆ ಇರುವುದರಿಂದ ಈ ಮಾರ್ಗ ಅಷ್ಟು ಸುಲಭದಾಯಕವಲ್ಲ ಎಂದು ತಿಳಿದು ಬಂದಿದೆ.

 

ಮಾರ್ಗ 2:

14 ಜನ ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರು ಗೈರು ಹಾಜರಾಗುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಈ ಮಾರ್ಗದಲ್ಲಿ ಬಿಜೆಪಿ ಸಫಲದಾರರೇ ಈಗಿರುವ ಮ್ಯಾಜಿಕ್ ನಂಬರ್ ಕಡಿಮೆಯಾಗಿ ಮತ್ತೆ 104 ಕ್ಕೆ ಬಂದಿಳಿದು ಬಿಜೆಪಿ ಬಹುಮತ ಸಾಬೀತು ಪಡಿಸಬಹುದಾಗಿದೆ.

ನಾಳೆ ಸಂಜೆ ನಾಲ್ಕು ಘಂಟೆಗೆ ಬಹಮತ ಸಾಬೀತು ಪಡಿಸಲು ಸುಪ್ರೀಂ ಕೋರ್ಟ್ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ, ಜೆಡಿಎಸ್ ಹಾಗು ಕಾಂಗ್ರೆಸ್ ನಾಯರು ತಾವು ಬಹುಮತ ಸಾಬೀತು ಪಡಿಸುವುದಾಗಿ ಆತ್ಮವಿಶ್ವಾಸದಿಂದ ಹೇಳುತ್ತಿದ್ದಾರೆ. ಇಂದು ಸುಪ್ರೀಂ ಕೋರ್ಟ್ ವಿಚಾರಣೆಯ ಆದೇಶ ಹೊರಬಿದ್ದಿದ್ದು. ನಾಳೆಯೇ ವಿಶ್ವಾಸ ಮತ ಯಾಚನೆ ಮಾಡಲು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಯಾರಿಗೂ ಕೋರ್ಟ್ ಸಮಯಾವಕಾಶ ನೀಡಿದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top