ಸಮಾಚಾರ

ಕರ್ನಾಟಕವೇ ಹೆಮ್ಮೆ ಪಡುವಂಥ ಕೆಲಸ ಮಾಡಿದ ರಾಮ್ ಗೋಪಾಲ್ ವರ್ಮಾ.

ಸದಾ ವಿವಾದಗಳ ಮೂಲಕವೇ ಸದ್ದು ಮಾಡುವ ಬಾಲಿವುಡ್ ಸ್ಟಾರ್ ರಾಮ್ ಗೋಪಾಲ್ ವರ್ಮಾ ಅಪರೂಪಕ್ಕೆ ಒಂದೊಳ್ಳೆ ಕೆಲಸಮಾಡಿದ್ದಾರೆ. ಅದರಲ್ಲೂ ಇಡೀ ಕರ್ನಾಟಕವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ರಿಯಲಿಸ್ಟಿಕ್ ಅಂಡರ್‌ವರ್ಲ್ಡ್ ಕಥೆಗಳನ್ನಾಧರಿಸಿದ ಮಾಸ್ ಚಿತ್ರಗಳ ಮೂಲಕವೇ ದೇಶಾದಂತ ಹೆಸರುವಾಸಿಯಾಗಿದ್ದವರು ಇದೀಗ ಅಂಥದ್ದೇ ರಿಯಲಿಸ್ಟಿಕ್ ಸಿನಿಮಾವನ್ನು ತಯಾರಿಸಿದ್ದಾರೆ.

 

 

ತೆಲುಗು ನಟ ‘ನಾಗಾರ್ಜುನ’ ನಟಿಸಿರುವ ಆಫೀಸರ್ ಚಿತ್ರಕ್ಕೆ ವರ್ಮಾ ಆಕ್ಷನ್ ಕಟ್ ಹೇಳಿದ್ದು ಆ ಚಿತ್ರ ಐಪಿಎಸ್ ಅಧಿಕಾರಿಯೊಬ್ಬರ ಜೀವನಾಧಾರಿತ ಚಿತ್ರವಂತೆ.. ಅದು ಕೂಡ ನಮ್ಮ ಕರ್ನಾಟಕ ಮೂಲದ ಅಧಿಕಾರಿ ಕೆ.ಎಸ್ ಪ್ರಸನ್ನ ಅವರ ಕುರಿತಾಗಿರುವ ಸಿನಿಮಾವಂತೆ ಹಾಗಂತ ಸ್ವತಃ ವರ್ಮಾ ಅವರೇ ತಮ್ಮ ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ.. ಈ ಮೂಲಕ ಕರ್ನಾಟಕ ಮೂಲದ ಅಧಿಕಾರಿಯ ಸಾಧನೆಯನ್ನು ಜನರ ಮುಂದೆ ಬಿಚ್ಚಿಟ್ಟು ಕರ್ನಾಟಕ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ  ಅಂದಹಾಗೆ ಕೆ.ಎಂ ಪ್ರಸನ್ನ ಅವರು ಮೂಲತಃ ಕರ್ನಾಟಕದವರಾಗಿದ್ದು ಮುಂಬೈನಲ್ಲಿ ಎಸ್.ಐ.ಟಿ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

 

 

“ಐಪಿಎಸ್ ಅಧಿಕಾರಿ ಕೆ.ಎಸ್ ಪ್ರಸನ್ನ ಮತ್ತು ನಟ ನಾಗಾರ್ಜುನ ಅವರ ನಡುವೆ ವಿಶಿಷ್ಟ ಸಾಮ್ಯತೆ ಇದೆ. ನನ್ನ ವೈಯಕ್ತಿಕ ದೃಷ್ಟಿಕೋನದಲ್ಲಿ ಇಬ್ಬರನ್ನ ಹೋಲಿಸಿ ‘ಆಫೀಸರ್’ ಚಿತ್ರದಲ್ಲಿ ಅದನ್ನ ಮೂಡಿ ಬಾರಿಸಿದ್ದೇನೆ. ಕೆ ಎಂ ಪ್ರಸನ್ನ ಅವರು ಎಸ್.ಐ.ಟಿ ಮುಖ್ಯಸ್ತರಾಗಿದ್ದಾಗ 2010ರಲ್ಲಿ ಅವರು ನನ್ನೊಂದಿಗೆ ಕೆಲವು ವಿಚಾರಗಳನ್ನ ಹೇಳಿಕೊಂಡಿದ್ದರು. ಅದರ ಆಧಾರವಾಗಿ ‘ಆಫೀಸರ್’ ಚಿತ್ರದ ಕತೆಯನ್ನು ಹೆಣೆಯಲಾಗಿದೆ” ಎಂಬರ್ಥದಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ. ಅಂದಹಾಗೆ ಈ ಚಿತ್ರ ಇದೇ ತಿಂಗಳು 25ತಾರೀಕಿನಂದು ತೆರೆಗೆಬರುತ್ತಿದೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top