ಭಾರತದ ರೈಲ್ವೆ ಸ್ಟೇಷನ್ಗಳು ಒಂದೊಂದು ವಿಚಿತ್ರ ಕಾರಣಗಳಿಂದ ತುಂಬಾನೇ ಫೇಮಸ್ ಆಗಿವೆ ಆದ್ರೆ ಕೆಲವೊಂದು ನೋಡೋಕೆ ತುಂಬಾನೇ ಚೆನ್ನಾಗಿದೆ ಅಂತ ಅನ್ಸುತ್ತೆ ಇನ್ನು ಕೆಲವೊಂದು ಭಯಾನಕ ಅಥವಾ ವಿಚಿತ್ರ ಕಾರಣಗಳಿಂದ ಯಾವಾಗಲು ಜನರಿಗೆ ಹೆದರಿಕೆ ಹುಟ್ಟಿಸುತ್ತಲೇ ಇವೆ .
ಅಂತಹ ಕೆಲವು ರೈಲ್ವೆ ಸ್ಟೇಷನ್ಗಳ ಬಗ್ಗೆ ನಾವೀಗ ತಿಳ್ಕೊಳ್ಳೋಣ
1. ಬೇಗುನ್ಕೊಡರ್ ರೈಲು ನಿಲ್ದಾಣ, ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದ ದೂರದ ಹಳ್ಳಿಯಲ್ಲಿ ಇರುವ ಈ ರೈಲು ನಿಲ್ದಾಣವು ಸುಮಾರು 42 ವರ್ಷಗಳ ಕಾಲ ಮುಚ್ಚಲ್ಪಟ್ಟಿತು, ಇಲ್ಲಿನ ಹಳ್ಳಿಗರು ಹೇಳುವಂತೆ ಬಿಳಿ ಸೀರೆ ತೊಟ್ಟಿದ್ದ ಮಹಿಳೆಯೊಬ್ಬಳ್ಳು ಈ ಸ್ಥಳದಲ್ಲಿ ಕಾಣಿಸಿಕೊಂಡು ಮಾಯವಾದಳು ಆಕೆಯನ್ನು ಅನೇಕರು ಕಂಡು ಹೆದರಿಕೊಂಡರು ಎಂದು ಹೇಳ್ತಿದ್ರು ಒಮ್ಮೆ 1967 ರಲ್ಲಿ ರೈಲ್ವೇ ನೌಕರರಲ್ಲಿ ಒಬ್ಬರು ಈ ಮೋಹಿನಿಯನ್ನು ನೋಡಿ ಮೃತಪಟ್ಟರು ಎಂದು ಸಹ ಹೇಳುತ್ತಿದ್ದರು .
ಇದಾದ ನಂತ್ರ ರೈಲ್ವೆ ಸ್ಟೇಷನ್ ಮುಚ್ಚಿಬಿಟ್ಟಿದ್ದರು ಎಲ್ಲಾ ವದಂತಿಗಳನ್ನು ನಿರಾಕರಿಸಿದ ಕೋಲ್ಕತ್ತಾ ಸಿಎಂ 2009 ರಲ್ಲಿ ನಿಲ್ದಾಣವನ್ನು ಪುನಃ ತೆರೆಸಿದರು ಆದರೂ ಸಹ ಅನೇಕ ಜನರು ಈಗಲೂ ಇಲ್ಲಿ ಕೆಟ್ಟ ಶಕ್ತಿ ಇದೆ ಎಂದು ನಂಬುತ್ತಾರೆ .
2. ದ್ವಾರಕಾ ಸೆಕ್ಟರ್ 9 ಮೆಟ್ರೋ ಸ್ಟೇಷನ್, ದೆಹಲಿ
ಕೋಪಗೊಂಡ ಮಹಿಳೆ ರಾತ್ರಿಯಲ್ಲಿ ಕಾರುಗಳ ಹಿಂದೆ ಓಡುತ್ತಾಳೆ ಎಂಬ ವದಂತಿಗಳಿವೆ ಮತ್ತು ಕೆಲವೊಮ್ಮೆ ಮನೆ ಹಾಗು ಕಾರ್ ಬಾಗಿಲನ್ನು ಹೊಡೆಯುತ್ತವೆ ಎಂದು ಇಲ್ಲಿನ ಜನ ಹೇಳುತ್ತಾರೆ , ಹೆಣ್ಣೊಬ್ಬಳ ಪ್ರೇತವು ಚಿಕ್ಕ ಮಗುವನ್ನು ಕೊಂದುಬಿಟ್ಟಿತ್ತು ಎಂದು ನಂಬುತ್ತಾರೆ , ಹೆಣ್ಣಿನ ಆಕಾರದ ಪ್ರೇತ ಇಲ್ಲಿ ಕಾಣಿಸುತ್ತದೆ ಎಂದು ಹೇಳುತ್ತಾರೆ ಆದ್ದರಿಂದ ರಾತ್ರಿ ಆರು ಗಂಟೆ ನಂತ್ರ ಇಲ್ಲಿಗೆ ಹೋಗಲು ಭಯ ಪಡುತ್ತಾರೆ .
3. ರವೀಂದ್ರ ಸರೋಬರ್ ರೈಲು ನಿಲ್ದಾಣ, ಕೊಲ್ಕತ್ತಾ
ಆತ್ಮಹತ್ಯೆಯ ಅರಮನೆಯೆಂದೇ ಎಂದೂ ಕರೆಯಲ್ಪಡುವ ಈ ಮೆಟ್ರೋ ನಿಲ್ದಾಣದಲ್ಲಿ, ಮೆಟ್ರೊ ಟ್ರ್ಯಾಕ್ಗಳಲ್ಲಿ ನಡೆಯುವ ಎಲ್ಲಾ ಆತ್ಮಹತ್ಯೆಗಳಲ್ಲಿ 70 ಪ್ರತಿಶತದಷ್ಟು ಇಲ್ಲಿಯೇ ಆಗುತ್ತದೆ , ಮೆಟ್ರೋದಲ್ಲಿ ಸಾಮಾನ್ಯವಾಗಿ 10.30 ರ ವೇಳೆಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಒಂದು ವಿಧವಾದ ನೆರಳು ಕಂಡು ಮಾಯವಾಗುವ ರೀತಿಯಲ್ಲಿ ಪ್ರತಿಬಿಂಬಗಳು ಕಾಣಿಸುತ್ತವೆ .
4 . ಚಿತ್ತೂರು ರೈಲು ನಿಲ್ದಾಣ, ಆಂಧ್ರಪ್ರದೇಶ
ಮೂಲಗಳ ಪ್ರಕಾರ, ಅಕ್ಟೋಬರ್ 31, 2013 ರಂದು ಸಿಆರ್ಪಿಎಫ್ ಅಧಿಕಾರಿಯಾದ ಹರಿ ಸಿಂಗ್ರನ್ನು ಆರ್ಪಿಎಫ್ ಸಿಬ್ಬಂದಿ ಮತ್ತು ಒಂದಿಬ್ಬರು ಟಿಟಿಇಗಳು ದಾಳಿ ಮಾಡಿದ್ದರು , ಗಂಭೀರವಾದ ಗಾಯಗಳಿಂದಾಗಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಹರಿ ಸಿಂಗ್ , ಚಿತ್ತೂರು ರೈಲ್ವೆ ನಿಲ್ದಾಣ ಬಂದ ನಂತ್ರ . ಅವರನ್ನು ಚಿತ್ತೂರೀನಲ್ಲಿನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು 10 ದಿನಗಳ ನಂತರ ಚೆನ್ನೈಗೆ ಸ್ಥಳಾಂತರಗೊಂಡರು ಆದರೂ ಚಿಕಿಸೆ ಫಲಕಾರಿಯಾಗದೆ ಸತ್ತುಹೋದರು .ಈಗಲೂ ಅವರ ಆತ್ಮ ನ್ಯಾಯಕ್ಕಾಗಿ ಇಲ್ಲಿಯೇ ಓಡಾಡುತ್ತಿದೆ ಎಂದು ಅನೇಕರು ಅಭಿಪ್ರಾಯ ಪಡುತ್ತಾರೆ .
5. ಲುಧಿಯಾನ ರೈಲು ನಿಲ್ದಾಣ
ಮೂಲಗಳ ಪ್ರಕಾರ, ಮಾಜಿ ಕಂಪ್ಯೂಟರ್ ಮೀಸಲಾತಿ ವ್ಯವಸ್ಥೆ (ಸಿಆರ್ಎಸ್) ಅಧಿಕಾರಿ ಸುಭಾಷ್ ಅವರು ತಮ್ಮ ಕೆಲಸವನ್ನು ಇಷ್ಟಪತ್ತಿದ್ದರು , ತಾವು ಕೆಲಸ ಮಾಡುತ್ತಿದ್ದ ಕೊಠಡಿಯಲ್ಲಿ 2004 ರಲ್ಲಿ ನಿಧನರಾದರು.ಅವರಿಗೆ ತಮ್ಮ ಈ ಕೆಲಸದ ಬಗ್ಗೆ ಅಪಾರ ಪ್ರೀತಿ ಇತ್ತು ಎಂದು ಜನರು ನಂಬುತ್ತಾರೆ ,ಸತ್ತ ನಂತರವೂ ತಮ್ಮ ಆಫೀಸ್ ಕಚೇರಿಯಲ್ಲಿ ಅವರ ಆತ್ಮ ಈಗಲೂ ಇದೆ ಎಂದು ನಂಬುತ್ತಾರೆ .ಸಂಜೆ ಆರು ಗಂಟೆ ನಂತ್ರ ಈ ಆಫೀಸ್ ಕೊಠಡಿಯಲ್ಲಿ ಜನರು ಹೋಗಲು ಭಯಪಡುತ್ತಾರೆ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
