ವಿಶೇಷ

ವಿಮಾನದಲ್ಲಿ ಪ್ರಯಾಣ ಮಾಡೋವಾಗ ಅಪ್ಪಿತಪ್ಪಿನೂ ಈ 10 ಕೆಲಸಗಳನ್ನ ಯಾವುದೇ ಕಾರಣಕ್ಕೂ ಮಾಡಬಾರ್ದು

ವಿಜ್ಞಾನ ತಂತ್ರಜ್ಞಾನ ಮುಂದುವರಿದಂತೆ ಮನುಷ್ಯನ ಬದುಕು ಕೂಡ ಬಹಳ ಸುಲಭವಾಗಿದೆ, ಮೊದಲು ಎತ್ತಿನ ಗಾಡಿಗಳು ಕುದುರೆ ಗಾಡಿಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುತ್ತಿದ್ದ ಮನುಷ್ಯ ಆ ನಂತರ ಕಾರು ಬೈಕು ಬಸ್ಸು ಹೀಗೆ ವಿವಿಧ ಸಾರಿಗೆ ಮೂಲಗಳನ್ನು ಕಂಡುಕೊಂಡನು, ವಿಜ್ಞಾನದಲ್ಲಿ ಆವಿಷ್ಕಾರಗಳು ಹೆಚ್ಚಾದಂತೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಅದು ಬೇಗ ಬೇಗ ಹೋಗಿ ತಲುಪಲು ಸಮಯವನ್ನು ಕಡಿಮೆಗೊಳಿಸಲು ಈಗ ವಿಮಾನಯಾನವನ್ನು ಅಷ್ಟಾಗಿ ಮೆಚ್ಚಿಕೊಂಡಿದ್ದಾರೆ.

 

 

ಒಂದು ರಾಜ್ಯದಿಂದ ಮೊದಲಿಗೆ ಒಂದು ದೇಶದಿಂದ ಇನ್ನೊಂದು ದೇಶಕ್ಕಷ್ಟೇ ಸೀಮಿತವಾಗಿದ್ದ ವಿಮಾನಯಾನ ಆ ನಂತರ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತನ್ನ ವಿಸ್ತಾರತೆಯನ್ನು ಹೆಚ್ಚಿಸಿದೆ ಆದರೂ ಸಹ ವಿಮಾನದಲ್ಲಿ ಪ್ರಯಾಣ ಮಾಡುವವರು ತಾವು ಪಾಲಿಸಬೇಕಾದ ಬೇಕು ಬೇಡಗಳನ್ನು ಅಷ್ಟಾಗಿ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ .

 

ವಿಮಾನದಲ್ಲಿ ಪ್ರಯಾಣ ಮಾಡುವವರು ಮಾಡಲಿ ಬೇಡವಾದ ಹತ್ತು ಕೆಲಸಗಳ ಬಗ್ಗೆ ತಿಳಿದುಕೊಳ್ಳೋಣ

 

1. ವಿಮಾನಯಾನದಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕರು ಸಾಕ್ಸ್ ಗಳನ್ನು ಹಾಕಿಕೊಂಡಿದ್ದರೆ ಬಿಚ್ಚಿಡಬೇಕು ಏಕೆಂದರೆ ಹೆಚ್ಚಿನ ಕಾಲ ಪ್ರಯಾಣ ಮಾಡುವಾಗ ಶೆಕೆ ಹೆಚ್ಚಾಗಿ ಇರುತ್ತದೆ , ಹಾಗೆಯೇ ಸಾಕ್ಸ್ ತೆಗೆದಾಗ ಕೆಟ್ಟ ದುರ್ವಾಸನೆ ಬಂದು ಇತರ ಪ್ರಯಾಣಿಕರಿಗೆ ಇರಿಸುಮುರಿಸು ಉಂಟಾಗಬಹುದು ,ಹಾಗೆಯೇ ಕಾಲಿನಲ್ಲೇ ಇದ್ದರೆ ಬ್ಯಾಕ್ಟೀರಿಯಾ ಸಾಕ್ಸ್ ನ ಒಳಗೆ ಇರುತ್ತದೆ ಇತರರಿಗೆ ಅಲರ್ಜಿ ಆಗುವ ಸಂಭವ ಕಡಿಮೆ ಇರುತ್ತದೆ ಮತ್ತು ಮುಂದಿನ ಸೀಟಿಗೆ ಕಾಲನ್ನು ಚಾಚಿಕೊಂಡು ಕೂಡುವುದನ್ನು ವಿಮಾನಯಾನದಲ್ಲಿ ಒಪ್ಪುವುದಿಲ್ಲ ಏಕೆಂದರೆ ಮುಂದಿನ ಆಸನದಲ್ಲಿ ಕುಳಿತಿರುವ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಬಹುದು .

2. ಹಾಗೆಯೇ ಪ್ರಯಾಣಿಕರು ತಮ್ಮ ಸೀಟನ್ನು ಹಿಂದಕ್ಕೆ ಒರಗಿಸಿ ಕುಳಿತುಕೊಳ್ಳುವ ಮುನ್ನ ಈ ವಿಷಯವನ್ನು ಗಮನಿಸಬೇಕಾಗುತ್ತದೆ, ಹಿಂದಿನ ಸೀಟಿನಲ್ಲಿ ಕುಳಿತಿರುವ ಪ್ರಯಾಣಿಕರು ತಮ್ಮ ಊಟದ ಟ್ರೇಯನ್ನು ಇಟ್ಟುಕೊಂಡು ಕೂತಿರಬಹುದು ಒಂದು ವೇಳೆ ಇದನ್ನು ಗಮನಿಸದೆ ಮುಂದೆ ಕುಳಿತಿರುವ ಪ್ರಯಾಣಿಕರು ಪುಷ್ ಬ್ಯಾಕ್ ಸೀಟ್ ಅನ್ನು ಹಿಂದಕ್ಕೆ ತಳ್ಳಿದರೆ ಆಹಾರವೂ ಅಲ್ಲೇ ಚೆಲ್ಲುವ ಅವಕಾಶ ಇರುತ್ತದೆ ಆದ್ದರಿಂದ ಹಿಂದೆ ಕುಳಿತಿರುವ ಪ್ರಯಾಣಿಕರನ್ನು ಒಮ್ಮೆ ಕೇಳಿ ಆ ನಂತರ ಸೀಟನ್ನು ಹಿಂದಕ್ಕೆ ಹಾಕಿಕೊಳ್ಳಬೇಕು .

 

 

3. ವಿಮಾನದಲ್ಲಿ ಇರುವಾಗ ಸಿನಿಮಾ ನೋಡುವುದು ಅಥವಾ ಹಾಡನ್ನು ಕೇಳುವ ಅಭ್ಯಾಸ ಇದ್ದರೆ ಆದಷ್ಟು ಇತರ ಪ್ರಯಾಣಿಕರಿಗೆ ತೊಂದರೆ ಕೊಡದಂತೆ ಸೌಂಡನ್ನು ಕಡಿಮೆಗೊಳಿಸಿ ಇಯರ್ ಫೋನ್ ಹಾಕಿಕೊಂಡು ಕೇಳಬೇಕು ಏಕೆಂದರೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಕೆಲವರಿಗೆ ಅತಿಯಾದ ತಲೆನೋವು ಹಾಗೂ ಒತ್ತಡ ಉಂಟಾಗಿರುತ್ತದೆ ಅವರಿಗೆ ಹೆಚ್ಚಾದ ಸೌಂಡ್ನಿಂದ ಮತ್ತಷ್ಟು ಕಿರಿಕಿರಿ ಉಂಟಾಗುತ್ತದೆ .

4. ವಿಮಾನದಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ವಿಮಾನದ ಸಿಬ್ಬಂದಿ ಹೇಳುವ ಕೆಲಸಗಳನ್ನು ಹಾಗೂ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಒಂದೊಂದು ಸಾರಿ ಬ್ರೇಸ್ ಎಂದು ಹೇಳಿದಾಗ ಅವರು ಕುಳಿತಿರುವ ಪೋರ್ಷನ್ ಬಗ್ಗೆ ಮಾಹಿತಿಯನ್ನು ನೀಡುತ್ತಿರಬಹುದು ಇದನ್ನು ಕಿವಿಕೊಟ್ಟು ಆಲಿಸಿದರೆ ನಮಗೇ ಒಳ್ಳೆಯದು .

5. ವಿಮಾನದಲ್ಲಿ ಪ್ರಯಾಣ ಮಾಡುವ ವೇಳೆ ವಿಮಾನದ ಕಿಟಕಿಗಳು ಹಾಗೂ ಸೀಟ್ನ ಕೆಳ ಭಾಗವನ್ನು ಮುಟ್ಟಬಾರದು, ಏಕೆಂದರೆ ವಿಮಾನವು ದಿನವೆಲ್ಲಾ ಹಾರಾಡುತ್ತಲೇ ಇರುತ್ತದೆ ಇದರಿಂದ ಸಾವಿರಾರು ಪ್ರಯಾಣಿಕರು ಪ್ರಯಾಣ ಮಾಡಿರುತ್ತಾರೆ ಒಮ್ಮೊಮ್ಮೆ ತಿಳಿಯದಂತೆ ಸೂಕ್ಷ್ಮ ಜೀವಿಗಳು ಹಾಗೂ ಇನ್ನಿತರ ಸೋಂಕುಗಳು ಹರಡುವ ಸಾಧ್ಯತೆ ಇರುತ್ತದೆ .

 

 

6. ವಿಮಾನ ಪ್ರಯಾಣದಲ್ಲಿ ಮಕ್ಕಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ ಒಂದೇ ಸ್ಥಳದಲ್ಲಿ ಹೆಚ್ಚು ಗಂಟೆಗಳ ಕಾಲ ಕುಳಿತುಕೊಳ್ಳುವುದರಿಂದ ಮಕ್ಕಳಿಗೆ ಕಿರಿಕಿರಿ ಉಂಟಾಗಬಹುದು ಆದ್ದರಿಂದ ಇತರ ಪ್ರಯಾಣಿಕರಿಗೆ ತೊಂದರೆ ಆಗದಂತೆ ಮಕ್ಕಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ .

7. ವಿಮಾನ ಪ್ರಯಾಣ ಮಾಡುವ ವೇಳೆ ಆದಷ್ಟು ಮದ್ಯಪಾನ ಮಾಡಬಾರದು ಸುಮ್ಮನೆ ಮದ್ಯವನ್ನು ನೀಡುತ್ತಾರೆ ಎಂದು ಎಷ್ಟು ಅನಿಸುತ್ತದೆಯೋ ಅಷ್ಟನ್ನು ಕುಡಿಯಬಾರದು , ಆಗಲೇ ಪ್ರಯಾಣ ಮಾಡುವಾಗ ತಲೆ ತಿರುಗುವ ,ವಾಂತಿ ಬರುವ ಅನುಭವ ಆಗುತ್ತಿರುತ್ತದೆ ಈ ಸಮಯದಲ್ಲಿ ಹೆಚ್ಚಿನ ಮದ್ಯಪಾನವನ್ನು ಮಾಡಿದಾಗ ವಾಂತಿ ಆಗುವ ಸಂಭವ ಬಹಳಷ್ಟು ಹೆಚ್ಚು

8. ವಿಮಾನ ಪ್ರಯಾಣದ ವೇಳೆ ತಮ್ಮ ಸಹ ಪ್ರಯಾಣಿಕರ ಜೊತೆ ಜಗಳಕ್ಕೆ ಯಾವುದೇ ಕಾರಣಕ್ಕೆ ಇಳಿಯಬಾರದು, ಈ ರೀತಿ ಜಗಳಕ್ಕೆ ಬಿದ್ದರೆ ಅಂಥವರನ್ನು ಏರ್ಲೈನ್ಗಳು ನಿಷೇಧ ಮಾಡಬಹುದು, ಕೆಲವೊಮ್ಮೆ ಇಂತಹ ಘಟನೆಗಳು ಕೋರ್ಟ್ ಮೆಟ್ಟಿಲು ಏರಿರುವ ಘಟನೆಗಳು ಕೂಡ ಇವೇ ಇದರಿಂದ ನೀವು ಜೀವಮಾನದಲ್ಲಿ ಮತ್ತೆ ವಿಮಾನ ಪ್ರಯಾಣ ಮಾಡದೆ ಹೋಗಬಹುದು , ಡೇನಿಯಲ್ ಎಂಬ ಸೋಷಲ್ ಮೀಡಿಯಾದ ಸೆಲೆಬ್ರಿಟಿ ಒಬ್ಬಳು ಇದೇ ರೀತಿ ಜಗಳಕ್ಕೆ ಇಳಿದು ಆಕೆಯನ್ನು ಏರ್ಲೈನ್ಗಳು ನಿಷೇಧ ಮಾಡಿಬಿಟ್ಟವು .

 

 

9. ಮೈಗೆ ಹುಷಾರಿಲ್ಲದ ಸಮಯದಲ್ಲಿ ಆದಷ್ಟು ವಿಮಾನ ಪ್ರಯಾಣವನ್ನು ಮೊಟಕುಗೊಳಿಸಬೇಕು ಏಕೆಂದರೆ ಸೂಕ್ಷ್ಮ ಜೀವಿಗಳು ದೇಹದಲ್ಲಿ ಹೆಚ್ಚಾಗಿ ಇರುತ್ತವೆ ಇದರಿಂದ ಇತರ ಪ್ರಯಾಣಿಕರಿಗೆ ಸೋಂಕು ಹರಡುವ ಸಾಧ್ಯತೆಗಳು ಬಹಳ ಹೆಚ್ಚಾಗಿರುತ್ತದೆ

10.ಕೊನೆಯದು ಹಾಗೂ ಬಹಳ ಮುಖ್ಯವಾದ ಅಂಶ ಏನೆಂದರೆ ವಿಮಾನದಲ್ಲಿ ಪ್ರಯಾಣ ಮಾಡುವಾಗ ವಿಮಾನದ ಸಿಬ್ಬಂದಿಗಳ ಜೊತೆ ಯಾವುದೇ ಕಾರಣಕ್ಕೂ ಜಗಳಕ್ಕೆ ಇಳಿಯಬಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top