ಅರೋಗ್ಯ

ಬೆಂಗಳೂರಿಗೆ ಬಂದು ಶಿವಣ್ಣನನ್ನು ಭೇಟಿಯಾಗಲಿದ್ದಾರೆ ತಮಿಳು ನಟ ಸಿಂಬು

ಕಾವೇರಿ ನದಿ ನೀರಿನ ವಿಚಾರವಾಗಿ ವಾಸ್ತವ ಕಣ್ಣೆದುರಿದ್ದರೂ ಕನ್ನಡಿಗರ ವಿರುದ್ಧ ತಮಿಳು ನಟರು ಖಡ್ಗ ಝಳಪಿಸುತ್ತಾ ಬಂದಿದ್ದರು. ನಮ್ಮವರೇ ಆದ ರಜನೀಕಾಂತ್ ರಾಜಕೀಯದ ದುರಾಸೆಗೆ ಬಿದ್ದು ಈ ಇಳೀವಯಸಿನಲ್ಲಿಯೂ ಅಸಹ್ಯದ ಪಟ್ಟುಗಳನ್ನು ಪ್ರಯೋಗಿಸುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ಕಾವೇರಿ ವಿಚಾರದಲ್ಲಿ ಮನುಷ್ಯತ್ವದ ನೆಲೆಯಲ್ಲಿ ಮಾತಾಡುವ ಮೂಲಕ ಕನ್ನಡಿಗರ ಮನಗೆದ್ದವರು ತಮಿಳು ನಟ ಸಿಂಬು.

 

 

ಹೀಗೆ ಕಾವೇರಿ ವಿಚಾರದಲ್ಲಿ ಕನ್ನಡಿಗರ ಮನ ಗೆದ್ದಿರುವ ಸಿಂಬು ಕನ್ನಡ ಚಿತ್ರವೊಂದರಲ್ಲಿನ ಹಾಡಿಗೆ ದನಿಯಾಗಿದ್ದಾರೆ.ಕಾಂತ ಕನ್ನಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಎಂಬ ಚಿತ್ರಕ್ಕೆ ಸಿಂಬು ಅವರನ್ನು ಕರೆ ತರುವ ಪ್ರಯತ್ನವೊಂದು ನಡೆದಿದೆ ಎಂಬ ಮಾತು ಈ ಹಿಂದೆ ಕೇಳಿಬಂದಿತ್ತು ಆದರೆ ಆ ಊಹಾ ಪೋಹಗಳಿಗೆಲ್ಲಾ ತೆರೆ ಬಿದ್ದಿದ್ದು ಇದೀಗ ಸಿಂಬು ಅವರು ಚಿತ್ರದ ಹಾಡೊಂದನ್ನು ಹಾಡಿದ್ದಾರೆ.

 

 

ಈ ಚಿತ್ರದ ಆಡಿಯೋ ಲಾಂಚ್ ಇದೇ ತಿಂಗಳ 25ಕ್ಕೆ ನಡೆಯಲಿದೆ. ವಿಶೇಷ ಅಂದರೆ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಸಿಂಬು ಮುಖ್ಯ ಅಥಿತಿಯಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸಿಂಬುಗೆ ಕನ್ನಡದ ಸ್ಟಾರ್ ಗಳಾದ ಶಿವಣ್ಣ ಹಾಗೂ ಧ್ರುವ ಸರ್ಜಾ ಕೂಡ ಸಾಥ್ ನೀಡಲಿದ್ದಾರೆ.. ಆಡಿಯೋ ಕಾರ್ಯಕ್ರಮದ ಮೂಲಕ ಸಿಂಬು ಶಿವಣ್ಣನನ್ನು ಭೇಟಿಮಾಡಲಿದ್ದಾರೆ.

 

 

ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವ ಶ್ರೀಧರ್ ಈ ಹಾಡನ್ನು ಇತ್ತೀಚಿಗಷ್ಟೇ ಚೆನ್ನೈಗೆ ಹೋಗಿ ರೆಕಾರ್ಡ್ ಮಾಡಿಕೊಂಡು ಬಂದಿದ್ದಾರೆ. ಕವಿ ಚಕ್ರವರ್ತಿ ಡಾ.ನಾಗೇಂದ್ರ ಪ್ರಸಾದ್ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದು ಸದ್ಯದಲ್ಲಿಯೇ ಹಾಡನ್ನು ರಿಲೀಸ್ ಮಾಡುತ್ತಾರಂತೆ. ಇರುವುದೆಲ್ಲವ ಬಿಟ್ಟು ಚಿತ್ರದ ಮೂಲಕ ನಿರ್ದೇಶಕರಾಗಿ ಎರಡನೇ ಪ್ರಯತ್ನಕ್ಕೆ ಕೈ ಹಾಕಿರುವ ಕಾಂತ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಚಿತ್ರದಲ್ಲಿ ನಟ ತಿಲಕ್ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇದೆ ಮೊದಲ ಬಾರಿ ಒಂದಾಗಿ ಅಭಿನಯಿಸಿರುವ ತಿಲಕ್ ಹಾಗು ಮೇಘನಾ ಜೋಡಿ ಹೇಗೆ ಅಭಿಮಾನಿಗಳ ಮೋಡಿ ಮಾಡುತ್ತಾರೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top