fbpx
ವಿಶೇಷ

ಫೆಬ್ರವರಿ 14ನೇ ತಾರೀಕು ವ್ಯಾಲೆಂಟೈನ್ಸ್ ಡೇ (ಪ್ರೇಮಿಗಳ ದಿನ) ಆಚರಣೆ ಮಾಡುವುದರ ಹಿಂದಿರೋ ಕಣ್ಣೀರಿನ ಕಥೆ ನಿಮಗೆ ಗೊತ್ತಾ

‘ಪ್ರೇಮ’ ಕೇಳಲು ಎರಡೇ ಅಕ್ಷರದ ಪದವಾದರೂ ಪ್ರಪಂಚದಲ್ಲಿ ಎಲ್ಲದಕ್ಕಿಂತ ಬಹಳ ಮಹತ್ವವಾದದ್ದು, ಹಾಗೆ ಅರ್ಥಪೂರ್ಣವಾದದ್ದು ಮನುಷ್ಯನ ಹುಟ್ಟಿನಿಂದಲೂ ಆತ ಸಾಯುವವರೆಗೂ ಈ ಪ್ರೀತಿಗಾಗಿ ಆತ ಹಂಬಲಿಸುತ್ತಾ ಇರುತ್ತಾನೆ ಅಷ್ಟು ಶಕ್ತಿಶಾಲಿಯಾದದ್ದು ಈ ಪ್ರೇಮ , ಪ್ರೇಮ ಎನ್ನುವುದು ಪಾವಿತ್ರ್ಯತೆಯ ಸಂಕೇತ .

 

 

ಯುಗಗಳು ಉರುಳಿದರೂ ಕಾಲಗಳು ಕಳೆದರೂ ಮನುಷ್ಯ ಪ್ರೀತಿಯ ಹಿಂದೆ ಓಡುತ್ತಲೇ ಇರುತ್ತಾನೆ , ಅದು ತಂದೆ ತಾಯಿಯರ ಪ್ರೀತಿ ಇರಬಹುದು, ಸಂಗಾತಿಯ ಪ್ರೀತಿ ಇರಬಹುದು, ಸ್ನೇಹಿತರ ಪ್ರೀತಿ ಇರಬಹುದು, ಈ ರೀತಿ ಪ್ರೀತಿಯ ಸಂಕೇತವಾದ ಮಧುರ ಬಾಂಧವ್ಯವನ್ನು ತನ್ನ ಜೀವನ ಪರ್ಯಂತ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾನೆ , ಅದಕ್ಕಾಗಿಯೇ ಫೆಬ್ರವರಿ ಹದಿನಾಲ್ಕನೇ ತಾರೀಕು ವ್ಯಾಲೆಂಟೈನ್ಸ್ ಡೇಯನ್ನು ಸಹ ಆಚರಣೆ ಮಾಡಲಾಗುತ್ತದೆ .

ಕ್ಲಾಡಿಯುಸ್ 2 ರೋಮನ್ ಸಾಮ್ರಾಜ್ಯದ ದೊರೆಯಾಗಿ ಆಳುತ್ತಾ ಇದ್ದನ್ನು, ಆ ಸಮಯದಲ್ಲಿ ಆತನಿಗೆ ಸಾಮ್ರಾಜ್ಯದ ರಕ್ಷಣೆಗಾಗಿ ಬಹುದೊಡ್ಡ ಸೈನ್ಯದ ಅವಶ್ಯಕತೆ ಇತ್ತು ಆದರೆ ಎಷ್ಟೋ ದಿನ ಯುದ್ಧಗಳನ್ನು ಮಾಡುತ್ತಾ ಇದ್ದಾಗ ಅನೇಕ ಸೈನಿಕರಿಗೆ ತಮ್ಮ ಮನೆ, ಮಕ್ಕಳು, ಮಡದಿ , ಸಂಸಾರದ ಇನ್ನೂ ಅನೇಕ ವಿಷಯಗಳು ತಲೆಯಲ್ಲಿ ಕೂರುತ್ತಿದ್ದವು.

 

 

 

ಇದರಿಂದಾಗಿ ಅವರು ಸರಿಯಾಗಿ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ , ಕ್ಲಾಡಿಯುಸ್ ತನ್ನ ಸಾಮ್ರಾಜ್ಯದ ರಕ್ಷಣೆಗಾಗಿ ಅಷ್ಟು ದೊಡ್ಡ ಸೈನ್ಯವನ್ನು ಇಟ್ಟಿದ್ದರೂ ಸಹ ಅವರು ಸರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿರಲಿಲ್ಲ ,ಇದರಿಂದ ಬೇಸತ್ತ ರಾಜ ತನ್ನ ಸೈನಿಕರಿಗೆ ಹೊಸದಾದ ನಿಯಮ ವನ್ನು ಜಾರಿಗೆ ತಂದಿದ್ದ ಇದರ ಪ್ರಕಾರ ಹೊಸದಾಗಿ ಯಾರೇ ಸೈನ್ಯಕ್ಕೆ ಸೇರಿದರು ಸಹ ಅವರು ಮದುವೆಯಾಗದೆ ಇರಬೇಕಾಗಿತ್ತು ಪ್ರೀತಿ ,ಪ್ರೇಮ ,ಪ್ರಣಯ ಇದರಿಂದ ಬಹಳ ದೂರವಾಗಿ ಇರಬೇಕಾಗಿತ್ತು .

 

ಇದರಿಂದಾಗಿ ಸೈನಿಕರಲ್ಲಿ ಏಕಾಗ್ರತೆ ಹೆಚ್ಚಿ ಅವರು ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದು ದೊರೆ ಭಾವಿಸಿದ್ದ ಆದರೆ ಇದು ಸೈನಿಕರಲ್ಲಿ ಭಾರಿ ಅಸಮಾಧಾನವನ್ನು ತಂದು ಒಡ್ಡಿತ್ತು.

ರೊಮ್ ದೇಶದಲ್ಲಿ ವ್ಯಾಲೆಂಟೈನ್ ಹೆಸರಿನ ಕ್ರೈಸ್ತ ಸನ್ಯಾಸಿಯೊಬ್ಬ ಇದ್ದ , ಆತನು ರಾಜನ ಈ ಕಠೋರ ನಿರ್ಧಾರದ ವಿರುದ್ಧ ದಂಗೆ ಎದ್ದಿದ್ದ ಆತನು ಯಾರೇ ಸೈನಿಕರು ಪ್ರೀತಿ ಮಾಡಿ ಮದುವೆಯಾಗಲು ಇಷ್ಟಪಟ್ಟಿದ್ದರೆ ಅವರಿಗೆ ರಹಸ್ಯವಾದ ಮದುವೆಯನ್ನು ಮಾಡಿಸುತ್ತಿದ್ದ, ಹೀಗೆ ಅನೇಕ ಮದುವೆಗಳು ಆದ ನಂತರ ರಾಜನಿಗೆ ಈ ವಿಷಯ ತಿಳಿಯುತ್ತದೆ ಆಗ ರಾಜನು ಕ್ರೈಸ್ತ ಸನ್ಯಾಸಿ ವ್ಯಾಲೆಂಟೈನನ್ನು ಮರಣದಂಡನೆ ಶಿಕ್ಷೆಗೆ ಗುರಿಪಡಿಸುತ್ತಾರೆ ಆ ನಂತರ ರೋಮ್ ಸಾಮ್ರಾಜ್ಯದ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದ ವ್ಯಾಲೆಂಟೈನ್ ಗೆ ಏನು ಮಾಡುವುದು ಎಂದು ದಿಕ್ಕೇ ತೋಚದಂತೆ ಆಗುತ್ತದೆ .

 

 

ಹೀಗೆ ವ್ಯಾಲೆಂಟೈನ್ ತನ್ನ ಜೈಲಿನಲ್ಲಿ ದಿನಗಳನ್ನು ಕಳೆಯುತ್ತ ಇದ್ದಾಗ ಜೈಲಿನ ಅಧಿಕಾರಿಯೊಬ್ಬರ ಮಗಳು ಅಲ್ಲಿಗೆ ಬರುತ್ತಾ ಇರುತ್ತಾಳೆ , ಆಕೆ ಹುಟ್ಟು ಕುರುಡಿ ಆಕೆಯನ್ನು ಕಂಡ ವ್ಯಾಲೆಂಟೈನ್ ಆಕೆಗಾಗಿ ಪ್ರಾರ್ಥನೆಯನ್ನು ಮಾಡಿ ಆಕೆಯ ಕುರುಡನ್ನು ಹೋಗಲಾಡಿಸಿ ಆಕೆಗೆ ದೃಷ್ಟಿ ಬರುವಂತೆ ಮಾಡುತ್ತಾನೆ , ಆ ನಂತರ ಆತನ ಮರಣ ದಂಡನೆ ಶಿಕ್ಷೆ ಇರುವ ಹಿಂದಿನ ದಿನ ಜೈಲು ಅಧಿಕಾರಿಯ ಮಗಳಿಗೆ ಒಂದು ಪತ್ರವನ್ನು ಬರೆದು ಅದರಲ್ಲಿ ‘ನಿನ್ನ ವ್ಯಾಲೆಂಟೈನ್’ ಎಂಬ ಸಹಿಯನ್ನು ಹಾಕಿರುತ್ತಾನೆ ಹಾಗೆಯೇ ಫೆಬ್ರವರಿ ಹದಿನಾಲ್ಕನೇ ತಾರೀಕು ಆತನಿಗೆ ಗಲ್ಲು ಶಿಕ್ಷೆ ನೀಡಿ ಸಮಾಧಿಯನ್ನು ಪ್ಲಾಮಿನಿಯಾದಲ್ಲಿ ಮಾಡಿದ್ದಾರೆ ಎಂಬ ದಾಖಲೆಗಳು ಇವೆ .

 

 

ರೋಮನ್ ದೊರೆಯ ವಿರೋಧವನ್ನು ಕಟ್ಟಿಕೊಂಡು ಅನೇಕ ಪ್ರೀತಿ ಪ್ರಣಯದ ಜೋಡಿಗಳನ್ನು ಒಂದು ಮಾಡಿದ ವ್ಯಾಲೆಂಟೈನಾ ಫೆಬ್ರವರಿ ಹದಿನಾಲ್ಕನೇ ತಾರೀಕು ಪ್ರಪಂಚದಾದ್ಯಂತ ವ್ಯಾಲೆಂಟೈನ್ ಡೇಯನ್ನು ಆಚರಣೆ ಮಾಡುತ್ತೇವೆ , ಹಾಗೆಯೇ ರೋಮನ್ ದೇವತೆಯಾದ ವೀನಸ್ ಗೆ ಕೆಂಪು ಗುಲಾಬಿಗಳೆಂದರೆ ಬಹಳ ಇಷ್ಟ, ಆ ದಿನ ನಿಮ್ಮ ಪ್ರೀತಿಗೆ ಕೆಂಪು ಗುಲಾಬಿಯನ್ನು ನೀಡಿದರೆ ಅದು ನಿಮಗೆ ಒಲಿಯುತ್ತದೆ ಎಂಬ ಕಾರಣಕ್ಕಾಗಿ ಕೆಂಪು ಗುಲಾಬಿಯನ್ನು ನೀಡುತ್ತಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top