ಮನೋರಂಜನೆ

ಭಾರತೀಯ ಚಿತ್ರರಂಗದಲ್ಲಿ ಮ್ಯಾಜಿಕ್ ಮಾಡುತ್ತಿರುವ ಅಕ್ಕ-ತಂಗಿಯರು ಇವರೇ.

ಯಾವುದೇ ನಟ ಅಥವಾ ನಟಿಯಾಗಲಿ ಚಿತ್ರರಂಗದಲ್ಲಿ ಸಕ್ಸಸ್ ಕಂಡ ಕೂಡಲೇ ಸದರಿ ಫ್ಯಾಮಿಯಿಂದ ಮತ್ತೊಂದಿಬ್ಬರು ಚಿತ್ರರಂಗದ ಕಡೆಗೆ ಮುಖಮಾಡುವುದು ಮಾಮೂಲಿಯಾಗಿಬಿಟ್ಟಿದೆ. ಇದಕ್ಕೆ ಕೇವಲ ಬಾಲಿವುಡ್, ಹಾಲಿವುಡ್‌ ಮಾತ್ರವಲ್ಲ ಸ್ಯಾಂಡಲ್‌ವುಡ್ ಕೂಡಾ ಹೊರತಾಗಿಲ್ಲ.. ಚಿಕ್ಕ ವಯಸ್ಸಿನಿಂದ ಜೊತೆಯಲ್ಲಿಯೇ ಬೆಳೆದು ಒಂದಲ್ಲ ಒಂದು ಕಾರಣಕ್ಕೆ ಕಿತ್ತಾಡುತ್ತಿದ್ದವರು ಸಿನಿಮಾಗಳ ಮೂಲಕವೂ ಜೊತೆ ಜೊತೆಯಾಗಿ ಪೈಪೋಟಿಗಿಳಿದು ನೋಡುಗರ ಕಣ್ಣು ಕುಕ್ಕುತ್ತಿದ್ದಾರೆ.. ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಿಜಜೀವನದ ಕ್ಯೂಟ್ ಸಹೋದರಿಯರ ಸಂಕ್ಷಿಪ್ತ ಪಟ್ಟಿ ಇಲ್ಲಿದೆ.

ಮಾಲಾಶ್ರೀ ಮತ್ತು ಶುಭಶ್ರೀ:
ನಂಜುಂಡಿ ಕಲ್ಯಾಣ ಚಿತ್ರ ಮೂಲಕ ಚಿತ್ರೋದ್ಯಮ ಪ್ರವೇಶಿಸಿ ಚಿತ್ರರಂಗದಲ್ಲಿ ರಾಣಿಯಾಗಿ ಮೆರೆದ ಮಾಲಾಶ್ರೀ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ ಆದರೆ ಅವರ ಸಹೋದರಿ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿರೋದಿಲ್ಲ. ಮಾಲಾಶ್ರೀ ಅಕ್ಕ ಶುಭಶ್ರೀ ಕೂಡ ಚಿತ್ರಗಲ್ಲಿ ನಟಿಸಿದ್ದಾರೆ ಎನ್ನುವುದು ಕನ್ನಡ ಪ್ರೇಕ್ಷಕರಿಗೆ ಹೆಚ್ಚಾಗಿ ಗೊತ್ತಿರೋದಿಲ್ಲ ಯಾಕೆಂದರೆ ಅವರು ಹೆಚ್ಚು ನಟಿಸಿರೋದು ತಮಿಳು, ಮಲೆಯಾಳಂ ಮತ್ತು ತೆಲುಗು ಚಿತ್ರಗಳಲ್ಲೇ.. ಶುಭಶ್ರೀ ಅವರು ‘ಭಂಡ ಅಲ್ಲ ಬಹದ್ದೂರ್’ ಮತ್ತು ‘ಚಿರಭಾಂದವ್ಯ’ ಎಂಬ ಎರಡು ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

 

 

ಶಾನ್ವಿ ಶ್ರೀವಾತ್ಸವ್ ಮತ್ತು ವಿಧಿಶಾ ಶ್ರೀವಾತ್ಸವ್:
ಪ್ರಸ್ತುತ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆಯುತ್ತಿರುವ ಕ್ಯೂಟ್ ಡಾಲ್ ಶಾನ್ವಿ ಶ್ರೀವಾಸ್ತವ್ ಅವರಿಗೂ ಮುಂಚೆಯೇ ಆಕೆಯ ಅಕ್ಕ ವಿದಿಶಾ ಶ್ರೀವಾತ್ಸವ್ ಚಿತ್ರರಂಗದಲ್ಲಿ ನಾಯಕಿಯಾಗಿ ಸಕ್ಸಸ್ ಕಂಡಿದ್ದಾರೆ. ತೆಲುಗು, ಕನ್ನಡ, ತಮಿಳು ಸಿನಿಮಾಗಳಲ್ಲಿ ನಟಿಸಿರುವ ವಿದಿಶಾ ಕನ್ನಡದ ವಿರಾಟ್ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ನಟಿಸಿದ್ದಳು.

 

 

ರಚಿತಾ ರಾಮ್ ಮತ್ತು ನಿತ್ಯಾರಾಮ್
ಬುಲ್ ಬುಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ಕೂಡ ಈಗಾಗಲೇ ಕನ್ನಡದ ಮುದ್ದು ಮನಸೇ ಸೇರಿದಂತೆ ತಮಿಳು, ತೆಲುಗು, ಸಿನಿಮಾಗಳನ್ನೂ ಮಾಡಿದ್ದಾರೆ.. ಸದ್ಯ ತಂಗಿ ರಚಿತಾ ರಾಮ್ ಬೆಳ್ಳಿತೆರೆಯಲ್ಲಿ ದೊಡ್ಡ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದಾರೆ ಅತ್ತ ಅಕ್ಕ ನಿತ್ಯಾ ರಾಮ್ ಕಿರುತೆರೆಯಲ್ಲಿ ಧಾರಾವಾಹಿಗಳ ಮೂಲಕ ಮನೆಮಾತಾಗುತ್ತಿದ್ದಾರೆ.

 

 

ಸಂಜನಾ ಮತ್ತು ನಿಕ್ಕಿ ಗಲ್ರಾಣಿ:
ಬ್ಯಾಕ್ ಟು ಬ್ಯಾಕ್ ವಿವಾದಗಳನ್ನ ಮೈಮೇಲೆದುಕೊಳ್ಳುವುದಕ್ಕೆ ನಿಸ್ಸೀಮಳಾಗಿರುವ ನಟಿ ಸಂಜನಾಳ ತಂಗಿ ಕೂಡ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾಳೆ.. ತಮಿಳಿನಲ್ಲೇ ಹೆಚ್ಚು ಬ್ಯುಸಿಯಾಗಿರುವ ನಿಕ್ಕಿ ಕನ್ನಡಲ್ಲಿಯೂ ಅಜಿತ್, ಜಂಬೂಸವಾರಿ, ಸಿದ್ದಾರ್ಥ ಅಂತಹ ಚಿತ್ರಗಳಲ್ಲಿ ನಟಿಸಿದ್ದಾಳೆ. ಈ ಅವರೆಗೂ ವಿವಾದಗಳಿಂದ ಆದಷ್ಟು ಅಂತರ ಕಾಯ್ದುಕೊಂಡು ಬಂದಿರುವ ನಿಕ್ಕಿ ಅಕ್ಕ ಸಂಜನಾಳಿಗಿಂತ ಎತ್ತರವಾಗಿ ದಕ್ಷಿಣ ಚಿತ್ರರಂಗದಲ್ಲಿ ಬೆಳೆಯುತ್ತಿದ್ದಾಳೆ.

 

 

ಆಶಿಕಾ – ಅನುಷಾ ರಂಗನಾಥ್:
ಮುಗುಳುನಗೆ ಮೂಲಕ ಪಡ್ಡೆ ಹುಡುಗರ ನಿದ್ದೆಯನ್ನು ಕೆಡಿಸಿರುವ ಬ್ಯುಟಿಫುಲ್ ಹುಡುಗಿ ಆಶಿಕಾ ರಂಗನಾಥ್, ಕ್ರೇಜಿ ಬಾಯ್ ಚಿತ್ರದ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟಿದ್ದ ಈಕೆ ರಾಜೂಕನ್ನಡ ಮೀಡಿಯಂ, ರ್ಯಾಂಬೋ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾಳೆ. ವಿಷ್ಯ ಏನಪ್ಪಾ ಅಂದ್ರೆ ಈಕೆಯ ಅಕ್ಕ ಅನುಷಾ ಕೂಡ ಸಿನಿಮಾರಂಗದಲ್ಲೇ ಬ್ಯುಸಿಯಾಗಿದ್ದು ‘ಸೋಡಾಬುಡ್ಡಿ’ ‘ಒನ್ಸ್ ಮೋರ್ ಕೌರವ’ ಸಿನಿಮಾಗಳಲ್ಲಿ ನಟಿಸಿದ್ದಾರೆ.

 

 

ಸೋನು ಗೌಡ – ನೇಹ ಗೌಡ
ಇತ್ತೀಚಿಗೆ ತೆರೆಕಂಡ ‘ಗುಲ್ಟು’ ಚಿತ್ರದ ಮೂಲಕ ಪಡ್ಡೆ ಹೈಕ್ಳ ಹೃದಯವನ್ನು ಹೈಜಾಕ್ ಮಾಡಿರುವ ಸೋನು ಗೌಡ ಇದಕ್ಕೋ ಮೊದಲು ಸೂರಿ ನಿರ್ದೇಶನದ ‘ಇಂತಿ ನಿನ್ನ ಪ್ರೀತಿಯ’ ಚಿತ್ರದ ಮೂಲಕ ಚಾಲ್ತಿಗೆ ಬಂದಿದ್ದಳು. ಈಕೆ ಕೇವಲ ಕನ್ನಡ ಮಾತ್ರವಲ್ಲದೆ ತಮಿಳು, ಮಲೆಯಾಳಂ ಚಿತ್ರಗಳಲ್ಲಿಯ್ತೋ ಕಾಣಿಸಿಕೊಂಡಿದ್ದಾಳೆ. ಈಕೆಯ ತಂಗಿಯೇ ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ಗೊಂಬೆ ಉರ್ಫ್ ನೇಹಾ ಗೌಡ. ನೇಹಾ ಗೌಡ ಇತ್ತೀಚಿಗೆ ತನ್ನ ಬಾಲ್ಯದ ಗೆಳೆಯನನ್ನು ಮದುವೆಯಾಗಿದ್ದು ಸಂಸಾರ ನಡೆಸುತ್ತಲೇ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಳೆ.

 

 

ಅದ್ವಿತಿ ಶೆಟ್ಟಿ – ಅಶ್ವಿತಿ ಶೆಟ್ಟಿ
ಕನ್ನಡ ಚಿತ್ರರಂಗದಾದ್ಯಂತ ರಾಮಾಚಾರಿ ಟ್ವಿನ್ಸ್ ಎಂದೇ ಹೆಸರುವಾಸಿಯಾಗಿರುವ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ಸ್ನೇಹಿತರಾಗಿ ಗಮನ ಸೆಳೆದಿದ್ದರು.ಸದ್ಯ ಈ ಅವಳಿ ಸಹೋದರಿಯರು ‘ಎರಡು ಕನಸು’ ಧಾರಾವಾಹಿ ಸೇರಿದಂತೆ ಕೆಲ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

 

 

ಪೂಜಾ ಗಾಂಧಿ ಮತ್ತು ರಾಧಿಕಾ ಗಾಂಧಿ:
ಚಂದನವದ ಮಳೆ ಹುಡುಗಿ ಎಂದು ಕರೆಸಿಕೊಳ್ಳುವ ಪೂಜಾ ಗಾಂಧಿ ಅವರ ತಂಗಿ ರಾಧಿಕಾ ಗಾಂಧಿ ಕೂಡ ಸಿನಿಮಾಗಳಲ್ಲಿ ಬಣ್ಣ ಹಚ್ಚುವ ಸಾಹಸಕ್ಕೆ ಕೈಹಾಕಿದ್ದು ಶ್ರೀಹರಿಕತೆ, ಅಕ್ಕ ಪಕ್ಕ ಚಿತ್ರಗಳಲ್ಲಿ ನಟಿಸಿದರು. ನಂತರ ಚಿತ್ರರಂಗದಲ್ಲಿ ಯಶಸ್ಸು ಕಾಣದ ಪರಿಣಾಮ ನಟಿಸುವುದನ್ನು ನಿಲ್ಲಿಸಿದ್ದಾರೆ. ಪೂಜಾಗೆ ಇನ್ನೊಬ್ಬಳು ತಂಗಿ ಟೆನಿಸ್ ಆಟಗಾರ್ತಿ ಸುಹಾನಿ ಗಾಂಧಿ, ಈಕೆ ಬಣ್ಣದ ಲೋಕದ ಸಹವಾಸವೇ ಬೇಡವೆಂದು ದೂರ ಉಳಿದುಕೊಂಡಿದ್ದಾಳೆ.

 

Image result for pooja gandhi sister

 

ಶ್ರುತಿ ಹಾಸನ್- ಅಕ್ಷರ ಹಾಸನ್

ತಂದೆ ಕಮಲ್ ಹಾಸನ್ ನೆರಳಿನಿಂದಾಗಿ ಚಿತ್ರರಂಗಕ್ಕೆ ಧುಮುಕಿ ನೆಲೆ ಕಂಡುಕೊಂಡಿರೋ ಈ ಸೋದರ ನಟಿಮಣಿಯರು ವಿವಿಧ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಶ್ರುತಿ ಹಾಸನ್ ಈವರೆಗೂ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಕಮಾಲ್ ಮಾಡಿ ತನ್ಮೂಲಕ ದಕ್ಷಿಣದ ಖ್ಯಾತನಾಟಿಯರಲ್ಲೊಬ್ಬಳಾಗಿ ಹೊರಹೊಮ್ಮಿದ್ದಾಳೆ. ಆದರೆ ಸಹೋದರಿ ಅಕ್ಷರ ಹಾಸನ್ ಮಾತ್ರ ಕೇವಲ ಬೆರಳೆಣಿಕೆ ಚಿತ್ರಗಳಿಗೆ ಮಾತ್ರ ಸೀಮಿತವಾಗಿ ಹಾಗೊಂದು ಹೀಗೊಂದು ಸಿನಿಮಾ ಮಾಡುತ್ತಾ ಇಂಡಸ್ಟ್ರಿಯಲ್ಲಿ ಆಮೆಗತಿಯಲ್ಲಿ ಸಾಗುತ್ತಿದ್ದಾಳೆ.

 

 

ಕರೀನಾ ಕಪೂರ್ ಮತ್ತು ಕರೀಷ್ಮಾ ಕಪೂರ್:
ಬಾಲಿವುಡ್ ಅತ್ಯಂತ ಜನಪ್ರಿಯ ಕುಟುಂಬಗಳಲ್ಲಿ ಒಂದರಿಂದ ಬಂದ ಸಹೋದರಿಯರಿವರು. ಕರೀಶ್ಮಾ ತನ್ನ ಹದಿಹರೆಯದವರಲ್ಲಿ ನಟಿಸಲು ಪ್ರಾರಂಭಿಸಿದ್ದಳು ಆದರೆ ಕರೀನಾ ನಟಿಸಲು ಪ್ರಾರಂಭಿಸುವ ಹೊತ್ತಿಗೆ ಕರೀಷ್ಮಾ ಚಿತ್ರರಂಗದಿಂದ ಬಹುತೇಕ ದೂರವಾಗಿದ್ದರು. ಕರೀನಾ ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಿ ಮಗುವಾದ ಮೇಲೂ ಚಿತ್ರರಂಗದಲ್ಲಿ ತನ್ನ ಚಾರ್ಮನ್ನು ಕಡಿಮೆಮಾಡಿಕೊಳ್ಳದೆ ಸಕ್ರಿಯಳಾಗಿದ್ದಾಳೆ. ಆದರೆ ಕರೀಷ್ಮಾ ಮದುವೆಯ ನಂತರ ನಟನೆಯ ಕಡೆ ಮುಖಹಾಕಿಲ್ಲ.

 

 

ಶಿಲ್ಪಾ ಶೆಟ್ಟಿ ಮತ್ತು ಶಮಿತಾ ಶೆಟ್ಟಿ:
ಶಿಲ್ಪಾ ಮತ್ತು ಶಮಿತಾ ಶೆಟ್ಟಿ ಅವರು ಬಾಲಿವುಡ್ನಲ್ಲಿ ಕಾಣುವ ಮತ್ತೊಂದು ಮುದ್ದಾದ ಸಹೋದರಿಯರ ಜೋಡಿ. ಇಬ್ಬರೂ ಕೂಡ ತಮ್ಮ ಯವ್ವನದಲ್ಲೇ ಚಿತ್ರರಂಗವನ್ನು ಪ್ರವೇಶಿಸಿ ಸಕ್ಸಸ್ ಕಂಡಿದ್ದರು, ಶಿಲ್ಪಾ ತನ್ನ ಮದುವೆಯ ಮತ್ತು ಮಗುವಿನ ಬಳಿಕ ಕೂಡಾ ಪತ್ರಗಳನ್ನು ನಿರ್ವಹಿಸುತ್ತಿದ್ದರೆ ಶಮಿತಾ ಸಂಸಾರದ ಜಂಜಾಟಗಳಲ್ಲೇ ಮುಳುಗಿ ನಟನೆಯಿಂದ ಹಿಂದೆ ಸರಿದಿದ್ದಾರೆ.

 

 

ರಾಧಾ ಮತ್ತು ಅಂಬಿಕಾ:
ರಾಧಾ ಅವರು 90 ರ ದಶಕದಲ್ಲಿ ಪ್ರಸಿದ್ಧ ನಾಯಕಿಯಾಗಿದ್ದರು. ಅವರ ಚಲನಚಿತ್ರಗಳು ಹೆಚ್ಚಾಗಿ ಚಿರಂಜೀವಿ ಅವರೊಂದಿಗೆ ಇದ್ದವು. ಅಂಬಿಕಾ ಅವರ ಸಹೋದರಿ ಬೆಂಬಲದೊಂದಿಗೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ದಕ್ಷಿಣದ ಖ್ಯಾತ ನಟಿಯಾಗಿ ಬೆಳೆದರು. ಅಂಬಿಕಾ ಕನ್ನಡದಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

 

 

ಕಾಜಲ್ ಅಗರವಾಲ್ ಮತ್ತು ನಿಶಾ ಅಗರ್ವಾಲ್:
ಕಾಜಲ್ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಾಯಕಿಯಾಗಿದ್ದಾಗ ಅವಳ ಸಹೋದರಿ ನಿಶಾ ಅವರನ್ನು ಅದೇ ಸಮಯದಲ್ಲಿ ಪರಿಚಯಿಸಿದರು. ನಿಶಾ ಅಗರ್ವಾಲ್ ಚಲನಚಿತ್ರಗಳಲ್ಲಿ ಸಕ್ಸಸ್ ಕಾಣಲಿಲ್ಲಆದ್ದರಿಂದ ಚಲನಚಿತ್ರಗಳನ್ನು ತೊರೆದು ಉದ್ಯಮಿಯೊಬ್ಬರನ್ನು ವಿವಾಹವಾಗಿ ಸುಖವಾಗಿದ್ದಾರೆ.

 

 

ಕಾರ್ತಿಕ ಮತ್ತು ತುಳಸಿ:
ಕಾರ್ತಿಕ ಮತ್ತು ತುಳಸಿ ಹಿರಿಯ ನಟಿ ರಾಧಾರವರ ಮುದ್ದು ಹೆಣ್ಣುಮಕ್ಕಳು. ಕಾರ್ತಿಕಾ ನಟಿಸಿದ ಮೊದಲ ಚಿತ್ರ ಜೋಶ್ (ತೆಲುಗು) ಮತ್ತು ತುಳಸಿ ಮನಿರತ್ನಮ್ ಕದಲ್ (ತಮಿಳು) ಪರಿಚಯವಾದಳು. ನಂತರ ಇಬ್ಬರೂ ಕೂಡ ಹಲವಾರು ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top