fbpx
ವಿಶೇಷ

ಮಾಮೂಲಿ ಜಾಗಗಳಿಗೆ ಹೋಗಿ ಬೇಜಾರಾಗಿದ್ರೆ ಪ್ರಪಂಚದಲ್ಲೇ ವಿಚಿತ್ರವಾಗಿರೋ ಈ 6 ರೆಸ್ಟೋರೆಂಟ್ ಗಳಿಗೆ ಹೋಗಿ ರೋಮಾಂಚನ ಆಗುತ್ತೆ

ಹಿಂದೆ ಒಂದು ಕಾಲವಿತ್ತು ಆಗ ರುಚಿಯಾದ ಊಟ ಸಿಕ್ಕರೆ ಹೊಟ್ಟೆ ತುಂಬಾ ಬ್ಯಾಟಿಂಗ್ ಮಾಡಿ ಆನಂದ ಆರಾಮಾಗಿ ನಿದ್ದೆ ಮಾಡಿದರೆ ಒಳ್ಳೆ ಐಡಿಯಾ ಎಂದು ಎಷ್ಟೋ ಜನಕ್ಕೆ ಅನಿಸಿದ್ದು ಉಂಟು ,ಆನಂತರ ವೀಕೆಂಡ್ಗಳಲ್ಲಿ ಮೋಜುಮಸ್ತಿಗಾಗಿ ರೆಸ್ಟೊರೆಂಟ್ಗಳಿಗೆ ಹೋಗಿ ಸಖತ್ತಾಗಿ ಬ್ಯಾಟಿಂಗ್ ಮಾಡಿ ಬರುತ್ತಿದ್ದರೂ , ಬಳಿಕ ರೆಸ್ಟಾರೆಂಟ್ಗಳು ಲಾಭದಾಯಕ ಹುದ್ದೆಗಾಗಿ ಪರಿಣಮಿಸಲು ಶುರುವಾಗಿತ್ತು ಆ ನಂತರ ರೆಸ್ಟೋರೆಂಟ್ ಮಾಲೀಕರು ಸಹ ತಮ್ಮ ಗ್ರಾಹಕರಿಗೆ ಒಳ್ಳೆಯ ಅನುಭವವನ್ನು ನೀಡಲು ಮುಂದಾಗಿದ್ದರು

ಬೆಟ್ಟದ ಕೆಳಗೆ, ಸಮುದ್ರದ ತೀರದಲ್ಲಿ ಅಥವಾ ಇನ್ಯಾವುದೋ ವಿಚಿತ್ರವಾದ ಜಾಗದಲ್ಲಿ ಕೆಲವೊಮ್ಮೆ ಹಗ್ಗ ಕಟ್ಟಿ ಮೇಲಕ್ಕೆ ಇರುವ ರೆಸ್ಟೋರೆಂಟ್ಗಳು ಹಾಗೆಯೇ ಸಮುದ್ರದ ಮಧ್ಯೆ ಇರುವ ರೆಸ್ಟೊರಂಟ್ಗಳು ಹೀಗೆ ನಾನಾ ವಿಧವಾದ ರೆಸ್ಟೊರೆಂಟ್ಗಳನ್ನು ನಾವು ನೋಡಬಹುದು ಹಾಗೆಯೇ ವಿಚಿತ್ರವಾದ ಈ ರೀತಿಯ 6 ರೆಸ್ಟೋರೆಂಟ್ ಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ ಯಾರಾದ್ರೂ ಟ್ರಿಪ್ ಗೆ ಹೋಗುವಾಗ ನಿಮಗೆ ಉಪಯೋಗ ಆಗಬಹುದು.

 

ಫಿಲಿಪೈನ್ಸ್ ನಲ್ಲಿ ವಿಲ್ಲಾ ಎಸ್ಕುಡೆರೊ ರೆಸಾರ್ಟ್

 

 

ಫಿಲಿಪೈನ್ಸ್ ನಲ್ಲಿ ವಿಲ್ಲಾ ಎಸ್ಕುಡೆರೊ ಎಂಬ ರೆಸಾರ್ಟ್ ಇದೆ, ಇಲ್ಲಿ ಲ್ಯಾಬಾಸಿನ್ ಎಂಬ ಜಲಪಾತವೊಂದರ ಅಡಿಭಾಗದಲ್ಲಿರುವ ಜಲಪಾತ ರೆಸ್ಟೋರೆಂಟ್ ಅನ್ನು ಭೇಟಿ ಮಾಡಬಹುದು, ನೈಸರ್ಗಿಕ ಸೌಂದರ್ಯದ ಜೊತೆ ಒಳ್ಳೆಯ ಊಟ ತಿನ್ನಬೇಕು ಎಂಬ ಆಸೆ ಯಿಂದ ಜನರು ಇಲ್ಲಿಗೆ ಬರುತ್ತಾರೆ , ಫಿಲಿಪೈನ್ ನ ಖ್ಯಾತ ತಿನಿಸುಗಳನ್ನು ತಿನ್ನಲು ಇಷ್ಟಪಡುವವರು ಹಾಗು ಪ್ರವಾಸಿಗರು ಹೆಚ್ಚಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ .

 

ಥೈಲ್ಯಾಂಡ್ನ ಗ್ರೊಟ್ಟೊ ರೆಸ್ಟೋರೆಂಟ್

 

 

ಗ್ರೊಟ್ಟೊ ಥೈಲ್ಯಾಂಡ್ನ ಫ್ರಾ ನಾಂಗ್ ಕಡಲತೀರದ ಸುಣ್ಣದ ಗುಹೆಯಲ್ಲಿರುವ ಒಂದು ರೊಮ್ಯಾಂಟಿಕ್ ರೆಸ್ಟೋರೆಂಟ್. ಇದು ರಾಯವಾಡೀ ರೆಸಾರ್ಟ್ಗೆ ಸೇರಿದೆ ಇಲ್ಲಿಗೆ ಬರುವ ಪ್ರವಾಸಿಗರು ರೆಸಾರ್ಟ್ನ ಅತಿಥಿಗಳು ಆಗಿಲ್ಲದ್ದಿದ್ದರು ಸಹ ಯಾರಾದರೂ ಟೇಬಲ್ ಕಾಯ್ದಿರಿಸಬಹುದು. ಇಲ್ಲಿನ ಮುಖ್ಯ ಭಕ್ಷ್ಯ ಬೇಯಿಸಿದ ಸಮುದ್ರಾಹಾರವಾಗಿದ್ದು, ವಾರದಲ್ಲಿ ಹಲವಾರು ಬಾರಿ ಸಂಜೆ ಇಲ್ಲಿ ಜನ ಸೇರುತ್ತಾರೆ ಅತಿಥಿಗಳಿಗೆ ಕ್ಯಾಂಡೆಲ್ ಲೈಟ್ ಜೊತೆಗೆ ಸಮುದ್ರಾಹಾರ ಭಕ್ಷ್ಯಗಳನ್ನು ನೀಡಲಾಗುತ್ತದೆ.

 

ಥೈಲ್ಯಾಂಡ್ನ ಸೊನೆವಾ ಕಿರಿ ಏಕೋ ರೆಸ್ಟೋರೆಂಟ್

 

 

ರೆಸ್ಟಾರೆಂಟ್ನ ಮಾಲೀಕರು ಬಹುಶಃ ಪಕ್ಷಿಗಳ ಗೂಡುಗಳಲ್ಲಿ ಊಟವನ್ನು ಏಕೆ ಮಾಡಬಾರದು ಎಂದು ಯೋಚನೆ ಮಾಡಿರಬೇಕು , 16 ಅಡಿಗಳಷ್ಟು ಎತ್ತರದಲ್ಲಿರುವ ಝಿಪ್ ಲೈನ್ನ ಸಹಾಯದಿಂದ 3 ‘ಗೂಡುಗಳಿಗೆ’ ಭಕ್ಷ್ಯಗಳು ಬಡಿಸಲಾಗುತ್ತದೆ, ಸಾಮಾನ್ಯವಾಗಿ ಪ್ರವಾಸಿಗರು ಇಷ್ಟಪಟ್ಟು ಮತ್ತೆ ಮತ್ತೆ ಈ ಜಾಗಕ್ಕೆ ಬರುತ್ತಾರೆ .

 

ಫಿನ್ಲೆಂಡ್ನಲ್ಲಿನ ಸಾಂಟಾ ಕ್ಲಾಸ್ ರೆಸ್ಟೋರೆಂಟ್

 

 

ಫಿನ್ಲೆಂಡ್ನಲ್ಲಿನ ಸಾಂಟಾ ಕ್ಲಾಸ್ ಹಳ್ಳಿಯು ವಾರ್ಷಿಕವಾಗಿ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಳೆಯ ಮಾಂತ್ರಿಕ ಮನುಷ್ಯನನ್ನು ಭೇಟಿ ಮಾಡುವುದರ ಹೊರತಾಗಿ, ಹಿಮ ಮತ್ತು ಮಂಜಿನಿಂದ ಸಂಪೂರ್ಣವಾಗಿ ತಯಾರಿಸಿದ ಮತ್ತು ಐಸ್ ಶಿಲ್ಪಗಳಿಂದ ಅಲಂಕರಿಸಲಾದ ರೆಸ್ಟೋರೆಂಟ್ ಅನ್ನು ಇಲ್ಲಿ ಭೇಟಿ ಮಾಡಬಹುದು.

 

ದುಬೈ ನ ಕ್ರೇನ್ ರೆಸ್ಟೋರೆಂಟ್

 

 

ಆಕಾಶದಲ್ಲಿ ಊಟ ಮಾಡಬೇಕು ಎಂದು ಆಸೆ ಪಡುವ ವ್ಯಕ್ತಿಗಳಿಗೆ ಈ ರೆಸ್ಟೋರೆಂಟ್ ಹೇಳಿಮಾಡಿಸಿದ ಹಾಗೆ ಇದೆ , ಬೆಲ್ಜಿಯಂನಲ್ಲಿ ಇಂತಹ ಯೋಜನೆಗಳು ಬಹಳಷ್ಟು ಖ್ಯಾತಿ ಪಡೆದಿದ್ದು ,ಈಗಾಗಲೇ ವಿಶ್ವದಾದ್ಯಂತ 45 ದೇಶಗಳಲ್ಲಿ ಚಾಲ್ತಿಯಲ್ಲಿದೆ , ಬೆಲೆಗಳು ಮತ್ತು ಸ್ಥಳಗಳ ಬಗ್ಗೆ ಹೆದರಲ್ಲದಿದ್ದರೂ ಸಹ ಇಲ್ಲಿಗೆ ಊಟ ಮಾಡಲು ಬರುವವರ ಎತ್ತರ ಕನಿಷ್ಠ 4’9 ಆಗಿರಬೇಕು, ಇದರಿಂದ ಸೀಟ್ ಸರಿಯಾಗಿ ಅಡ್ಜಸ್ಟ್ ಆಗಿ ಕುಳಿತುಕೊಳ್ಳಲು ಸಹಾಯ ಮಾಡುತ್ತದೆ .

 

ದಿ ರಾಕ್ ರೆಸ್ಟೊರೆಂಟ್, ಜಂಜಿಬಾರ್, ಟಾಂಜಾನಿಯಾ

 

 

ರೆಸ್ಟೊರೆಂಟ್ನ ಹೆಸರೇ ಹೇಳುವಂತೆ ನೀರಿನ ಹೊರಭಾಗದಿಂದ ಉಂಟಾದ ಬಂಡೆಗಳ ರಚನೆಯ ಮೇಲೆ ನೇರವಾಗಿ ತೆರೆಯಲ್ಪಟ್ಟಿದೆ , 20 ಟೇಬಲ್ ಗಳಿದ್ದು ಹೊರಗಿಂದ ಬರುವ ಪ್ರವಾಸಿಗರನ್ನು ಆಕರ್ಷಿಸುತ್ತದೆ , ಶಾಂತಿಯುತ ಸ್ಥಳದಲ್ಲಿ ಸೀಫುಡ್ ಸವಿಯುವ ಭಾಗ್ಯ ದೊರಕುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top