fbpx
ವಿಶೇಷ

ಈ 9 ದೇಶಗಳಿಗೆ ಹೋದಾಗ ಈ ಕೆಲಸಗಳನ್ನ ಅಪ್ಪಿತಪ್ಪಿ ಏನಾದ್ರು ಮಾಡಿದ್ರೆ ಜೈಲ್ ಗೆ ಕೂಡ ಹೋಗ್ಬಹುದು ಹುಷಾರು

ಈ ಭೂಮಿ ಮೇಲಿನ ಕೆಲವು ಸ್ಥಳಗಳಲ್ಲಿ, ವಿಲಕ್ಷಣ ಕಾನೂನುಗಳಿಂದ ಕೂಡಿರುವ ಸಾಕಷ್ಟು ಸ್ಥಳಗಳಿವೆ ಅಲ್ಲಿ ಒಂದು ಸೀಟಿಯೂ ಸಹ ದಂಡಕ್ಕೆ ಕಾರಣವಾಗಬಹುದು, ಅಥವಾ ಬೆಳಿಗ್ಗೆ ಧರಿಸುವ ಹಳದಿ ಟಿ-ಶರ್ಟ್ ನಿಮ್ಮನ್ನು ಜೈಲ್ ನ ಒಳಗೆ ತಳ್ಳಬಹುದು ಹೀಗೆ ವಿಚಿತ್ರ ಕಾನೂನಿರುವ 11 ಸ್ಥಳಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ .

ಬುರುಂಡಿ

ದಿನಾ ಬೆಳಗ್ಗೆ ಫಿಟ್ನೆಸ್ ಗೋಸ್ಕರ ಓಡೋದು ಈ ಊರಲ್ಲಿ ನಿಷೇಧ , ಆರೋಗ್ಯ ಚೆನ್ನಗಿರಬೇಕೆಂದ್ರೆ ದೇಹಕ್ಕೆ ನಾನಾ ಕಸರತ್ತುಗಳನ್ನ ಮಾಡಬೇಕು ಅಂತಾರೆ , ದಿನ ಬೆಳಗ್ಗೆ ಓಡುವುದರಿಂದ ಆರೋಗ್ಯ ಚೆನ್ನಾಗಿರುತ್ತೆ ಅಂತ ಎಷ್ಟೋ ಜನ ಆರೋಗ್ಯ ತಜ್ಞರು ಹೇಳುತ್ತ ಇರುತ್ತಾರೆ ಆದರೆ ಈ ಊರಿನಲ್ಲಿ ಅಪ್ಪಿ ತಪ್ಪಿ ಏನಾದರೂ ಜಾಗಿಂಗ್ ಅಂತ ಹೋಗ್ಬಿಟ್ರೆ ಸಾಕು ಅದು ಒಂದು ಘೋರ ಅಪರಾಧ.

ಆಫ್ರಿಕಾದ ಬುರುಂಡಿ ದೇಶದಲ್ಲಿ ಇದನ್ನು ಯುದ್ಧ ಸಾರುವ ಒಂದು ಕ್ರಿಯೆ ಎಂದು ಅಂದುಕೊಳ್ಳುತ್ತಾರೆ ಆದ್ದರಿಂದಲೇ ಈ ದೇಶದ ಮುಖ್ಯಸ್ಥರು ಬೆಳ್ಳಂಬೆಳಗ್ಗೆ ಜಾಗಿಂಗ್ ಹೋಗುವುದನ್ನು ನಿಷೇಧ ಮಾಡಿದ್ದಾರೆ ,ಜನರ ಮಧ್ಯೆ ಸಾಮರಸ್ಯ ಉಂಟು ಮಾಡುವುದಕ್ಕೆ ಈ ರೀತಿಯ ಕಾನೂನು ತಂದಿದ್ದೇವೆ ಎಂದು ಆ ದೇಶದ ಮುಖ್ಯಸ್ಥರು ಹೇಳಿಕೊಳ್ಳುತ್ತಾರೆ ಎಷ್ಟು ಸಾಮರಸ್ಯ ಬರುತ್ತವೋ ಇಲ್ಲವೋ ಗೊತ್ತಿಲ್ಲ ಆದರೆ ಇದೊಂದು ವಿಚಿತ್ರ ಕಾನೂನು ಅಲ್ಲವೆ?

 

 

ಮಲೇಷ್ಯಾ

ಮಲೇಷ್ಯಾ ದೇಶದಲ್ಲಿ ಹಳದಿ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಓಡಾಡುವಂತಿಲ್ಲ ,ನೀವು ಅಪ್ಪಿ ತಪ್ಪಿ ಮಲೇಷ್ಯಾಗೆ ಏನಾದರೂ ಟ್ರಿಪ್ ಹೋಗಬೇಕು ಅಂತ ಪ್ಲಾನ್ ಇದ್ರೆ ಈ ವಿಷಯಾನ ತಲೆಯಲ್ಲಿ ಇಟ್ಟುಕೊಳ್ಳಿ, ಮಲೇಷ್ಯಾದ ದಕ್ಷಿಣ ಭಾಗದಲ್ಲಿ ಹಳದಿ ಬಣ್ಣದ ಟಿ ಶರ್ಟ್ಗಳನ್ನು ಹಾಕಿಕೊಂಡು ಹೋದರೆ ಇದು ಪ್ರತಿಭಟನೆಯ ಸಂಕೇತವಂತೆ, ಇದರಿಂದಾಗಿ ಪೊಲೀಸರು ನಿಮ್ಮನ್ನು ಅರೆಸ್ಟ್ ಮಾಡಿ ಜೈಲಿನೊಳಗೆ ಹಾಕುವ ಅಧಿಕಾರ ಕೂಡ ಅವರಿಗೆ ಇರುತ್ತೆ ಎಂಥ ವಿಚಿತ್ರ ಕಾನೂನು ಅಲ್ಲವೆ.

ಬಾರ್ಬಡೋಸ್

ಬಾರ್ಬಡೋಸ್, ಜಮೈಕಾ, ಗ್ರೆನಡ, ಡೊಮಿನಿಕಾ, ಸೆಂಟ. ಲೂಸಿಯಾ ಈ ಪ್ರದೇಶಗಳಲ್ಲಿ ಮಿಲಿಟ್ರಿ ತರಹದ ಬಟ್ಟೆಗಳು, ಬ್ಯಾಕ್ ಬ್ಯಾಗುಗಳು, ಪರ್ಸುಗಳು ಅಥವಾ ಇನ್ನಾವುದೇ ಕರವಸ್ತ್ರಗಳು ಖಾಕಿ ಬಣ್ಣದ್ದು ಆಗಿರಬಾರದಂತೆ ಇದನ್ನು ಸೈನಿಕರು ಮಾತ್ರ ಬಳಸಬೇಕು ಎಂಬ ಕಾನೂನು ಈ ದೇಶಗಳಲ್ಲಿದೇ, ಒಂದು ವೇಳೆ ನೀವೇನಾದರೂ ಪೊಲೀಸರ ಕೈಯಲ್ಲಿ ಈ ಬಟ್ಟೆಯನ್ನು ಧರಿಸಿ ಸಿಕ್ಕ ಹಾಕ್ಕೊಂಡರೆ ನಿಮಗೆ ಜೈಲೇ ಗತಿ ಆದ್ದರಿಂದ ಖಾಕಿ ಬಣ್ಣದ ಬಟ್ಟೆಗಳನ್ನು ಮಿಲಿಟ್ರಿ ಬಣ್ಣದ ಬಟ್ಟೆಗಳನ್ನು ಧರಿಸದೇ ಇರುವುದು ಉತ್ತಮ .

 

 

ಥಾಯ್ಲೆಂಡ್

ಥಾಯ್ಲೆಂಡ್ ನಲ್ಲಿ ಕಾರು ಓಡಿಸುವಾಗ ಬೆತ್ತಲೆಯಾಗಿ ಅಥವಾ ಅರೆಬೆತ್ತಲೆಯಾಗಿ ಸ್ವಿಮ್ ಸೂಟನ್ನು ಧರಿಸಿಕೊಂಡು ಕಾರಿನಲ್ಲಿ ಚಲಾವಣೆ ಮಾಡುವಂತಿಲ್ಲ, ಒಂದು ವೇಳೆ ನೀವು ಕಾರನ್ನು ಓಡಿಸಬೇಕು ಎಂಬ ಆಸೆ ಇದ್ದರೆ ನಿಮ್ಮ ಬಟ್ಟೆ ನೆಟ್ಟಿಗಿರಬೇಕು ಟಿ ಶಿಟ್ ಅಥವಾ ಶಾರ್ಟ್ ನ್ನು ಕಡ್ಡಾಯವಾಗಿ ಧರಿಸಲೇಬೇಕಂತೆ ,ಇಲ್ಲವಾದರೆ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡರೆ ಭಾರಿ ಪ್ರಮಾಣದ ಮೊತ್ತವನ್ನು ದಂಡವಾಗಿ ತೆರಬೇಕಾಗುತ್ತದೆ .

ಇಟಲಿ

ಇಟಲಿಯಲ್ಲಿ ಬೀಚ್ ನಲ್ಲಿ ಓಡುವಾಗ ಫ್ಲಿಪ್ ಫ್ಲಾಪ್ ಚಪ್ಪಲಿಗಳನ್ನು ಉಪಯೋಗಿಸುವುದು ನಿಷೇಧಿಸಲಾಗಿದೆ, ಇದು ಕಾನೂನು ಬಾಹಿರವಂತೆ ಏಕೆಂದರೆ ಬೀಚ್ ನಲ್ಲಿರುವ ಇತರ ಪ್ರಯಾಣಿಕರಿಗೆ ಇದರಿಂದ ತೊಂದರೆಯಾಗಿರುತ್ತದೆ, ಫ್ಲಿಪ್ ಫ್ಲಾಪ್ ಚಪ್ಪಲಿಗಳು ಭಾರೀ ಸದ್ದನ್ನು ಉಂಟು ಮಾಡುವುದರಿಂದ ಇತರರಿಗೆ ಹಿಂಸೆಯಾಗುತ್ತದೆ ಎಂಬ ಕಾರಣದಿಂದ ಈ ಕಾನೂನನ್ನು ಮಾಡಲಾಗಿದೆ .

 

 

ಕೆನಡಾ

ಕೆನಡಾ ದೇಶದಲ್ಲಿ ಅಪ್ಪಿತಪ್ಪಿ ಏನಾದರೂ ಸಿಟಿ ಊದಿದರೆ ಸಾಕು ನಿಮಗೆ ಇನ್ನೂರ ಐವತ್ತು ಡಾಲರ್ಗಳ ದಂಡವನ್ನು ಹಾಕುತ್ತಾರೆ, ಕೆನಡಾದ ಪೆಟ್ರೊಲಿಯ , ಒಂಟಾರಿಯೊದಲ್ಲಿ ಅಪ್ಪಿತಪ್ಪಿ ಈ ಕೆಲಸವನ್ನು ಮಾಡಬಾರದು ಇಲ್ಲಿನ ಜನರು ಪ್ರಕೃತಿ ಸ್ನೇಹಿಯಾಗಿದ್ದು ಶಬ್ದ ಮಾಲಿನ್ಯದಿಂದ ದೂರ ಇರಬೇಕು ಎಂದು ಬಯಸುತ್ತಾರೆ, ಆದ್ದರಿಂದ ಸಿಟಿ ಊದುವುದು ಕೆಟ್ಟ ಶಬ್ದ ಎಂದು ಪರಿಗಣಿಸಲಾಗುತ್ತದೆ .

 

ಇಟಲಿ

ಇಟಲಿಯ ವೆನಿಸ್ ಬಳಿ ಇರುವ ಎರಕ್ಲಿಯಾ ನಗರದಲ್ಲಿ ಮರಳಿನ ಅರಮನೆಯನ್ನು ಕಟ್ಟುವುದನ್ನು ನಿಷೇಧಿಸಲಾಗಿದೆ , ಬೀಚ್ ಎಂದರೆ ಕೇವಲ ಆಟ ಆಡುವುದು ಹಾಗೂ ನೀರಿನಲ್ಲಿ ಎಂಜಾಯ್ ಮಾಡುವುದು ಅಷ್ಟೇ ಎಂದು ಇಲ್ಲಿನ ಜನರು ಭಾವಿಸುತ್ತಾರೆ ಹಾಗೆಯೇ ಇತರ ಕ್ರಿಯೆಗಳನ್ನು ಇಲ್ಲಿ ನಿಷೇಧಿಸಲಾಗಿದೆ .

 

 

ಸೌದಿ ಅರೇಬಿಯಾ

ಸೌದಿ ಅರೇಬಿಯಾದ ರಾಜಧಾನಿಯಾದ ರಿಯಾದ್ ನಗರದಲ್ಲಿ ಹದಿನಾರು ವರ್ಷಕ್ಕಿಂತ ಮೇಲ್ಪಟ್ಟ ಪುರುಷರನ್ನು ಸೂಪರ್ ಮಾರ್ಕೆಟ್ ಒಳಗೆ ಸೇರಿಸುವುದಿಲ್ಲ .

 

 

ಕಿನ್ಯ

ಕಿನ್ಯ ದೇಶದಲ್ಲಿ ಪ್ಲಾಸ್ಟಿಕ್ ಭಾಗಗಳನ್ನು ಬಳಸದಂತೆ ನಿಷೇಧ ಹೇರಲಾಗಿದೆ, ಪ್ಲಾಸ್ಟಿಕ್ ಇಲ್ಲದೆ ನಿಮ್ಮ ಬದುಕೇ ಇಲ್ಲ ಎಂಬಂತೆ ನೀವು ಬದುಕಿದ್ದರೆ, ಈ ಸ್ಥಳಗಳಿಗೆ ಹೋದಾಗ ಪ್ಲಾಸ್ಟಿಕ್ ಬಳಸದಿರುವುದು ಉತ್ತಮ ಇಲ್ಲವಾದರೆ ಮೂವತ್ತೆಂಟು ಸಾವಿರ ಡಾಲರ್ ಗಳಷ್ಟು ದಂಡವನ್ನು ನಿಮ್ಮ ಮೇಲೆ ಹಾಕಬಹುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top