ಮನೋರಂಜನೆ

ಸುನಿಲ್ ಶೆಟ್ಟಿ ನಂತರ ಕಿಚ್ಚನ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ ಬಾಲಿವುಡ್ ನಟ.

ಪ್ರೇಕ್ಷಕ ವಲಯದಲ್ಲಿ ವಿಪರೀತ ನಿರೀಕ್ಷೆಯನ್ನು ಹುಟ್ಟುಹಾಕಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರ ಕೋಟಿಗೊಬ್ಬ-3 ಚಿತ್ರ ದಿನೇ ದಿನೇ ತನ್ನ ಕುತೂಹಲವನ್ನು ದುಪ್ಪಟ್ಟು ಮಾಡಿಕೊಳ್ಳುತ್ತಿದೆ. ಅದ್ಧೂರಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಖ್ಯಾತ ಬಾಲಿವುಡ್ ನಟ ಸುಧಾಂಶು ಪಾಂಡೆ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂದು ಈ ಹಿಂದೆ ವರದಿಯಾಗಿತ್ತು ಇದೀಗ ಅವರ ಜೊತೆ ಮತ್ತೊಬ್ಬ ಬಾಲಿವುಡ್ ನಟ ಕನ್ನಡಕ್ಕೆ ಬರುತ್ತಿದ್ದಾರೆ.

 

 

ಹಿಂದಿಯ ಸೂಪರ್ ಹಿಟ್ ‘ಡಾನ್-2’ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ಅಫ್ತಾಬ್ ಶಿವದಾಸನಿ ಕೋಟಿಗೊಬ್ಬ ಚಿತ್ರದಲ್ಲಿ ಕಿಚ್ಚನ ಎದುರು ಖದರ್ ತೋರಿಸಿಲಿದ್ದಾರೆ. ಸಿನಿಮಾದಲ್ಲಿ ಇಂಟರ್‌‌‌ಪೋಲ್ ಅಧಿಕಾರಿಯಾಗಿ ಅಫ್ತಾಬ್ ಶಿವದಾಸನಿ ನಟಿಸಲಿದ್ದಾರೆ. ಮೊದಲ ಹಂತದ ಶೂಟಿಂಗ್ ಮುಗಿಸಿಕೊಂಡಿರುವ ಕೋಟಿಗೊಬ್ಬ3 ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಸರ್ಬಿಯಾ ದೇಶಕ್ಕೆ ಹಾರಲಿದ್ದು ಅಫ್ತಾಬ್ ಕೂಡ ಚಿತ್ರತಂಡದ ಜೊತೆ ಸರ್ಬಿಯಾಗೆ ತೆರಳಲಿದ್ದಾರೆ. ಸುಮಾರು 40 ದಿನಗಳ ಕಾಲ ಸರ್ಬಿಯಾದ ರಾಜಧಾನಿದಲ್ಲಿ ‘ಕೋಟಿಗೊಬ್ಬ-3’ ಚಿತ್ರದ 51 ಜನರ ತಂಡ ಟೆಂಟ್ ಹಾಕಲಿದ್ದಾರೆ. ಕಿಚ್ಚ ಸುದೀಪ್, ರವಿಶಂಕರ್, ರಾಜೇಶ್ ನಟರಂಗ, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ, ನವಾಬ್ ಸಾ, ತಬಲಾ ನಾಣಿ ಮತ್ತು ಚಿತ್ರದ ನಾಯಕಿ ಮಡೋನಾ ಚಿತ್ರೀಕರಣಕ್ಕಾಗಿ ಜೂನ್ ಮೂರನೇ ವಾರದಲ್ಲಿ ಸರ್ಬಿಯಾ ವಿಮಾನವೇರಲಿದ್ದಾರೆ.

 

 

ಅಂದಹಾಗೆ ಕೋಟಿಗೊಬ್ಬ 3 ಚಿತ್ರಕ್ಕೆ ಸುದೀಪ್ ಅವರೇ ಕತೆಯನ್ನು ಬರೆದಿದ್ದು ಶಿವಕಾರ್ತಿಕ್ ಎಂಬ ನವನಿರ್ದೇಶಕ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ನೀಡುತ್ತಿದ್ದು ಶೇಖರ್ ಚಂದ್ರು ಛಾಯಾಗ್ರಹಣ ಮಾಡಲಿದ್ದಾರೆ. “ಕೋಟಿಗೊಬ್ಬ ೨ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ರವಿಶಂಕರ್ ಜೈಲಿಗೆ ಹೋಗುತ್ತಾರೆ, ಅಲ್ಲಿಂದ ಅವರು ಹೇಗೆ ತಪ್ಪಿಸಿಕೊಂಡು ಬರುತ್ತಾರೆ ನಂತರ ಏನೆಲ್ಲಾ ನಡೆಯುತ್ತದೆ ಎನ್ನುವುದು ಚಿತ್ರದ ಮುಖ್ಯಾಂಶ ಎಂದು ಹೇಳಲಾಗುತ್ತಿದೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top