ಸಮಾಚಾರ

ಏರ್ಟೆಲ್ ಆಫರ್ ಕೇಳಿ ಕಕ್ಕಾಬಿಕ್ಕಿಯಾದ ಜಿಯೋ ಅಂಬಾನಿ

ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ವಿರುದ್ಧ ಪೈಪೋಟಿಗೆ ಬಿದ್ದಿರುವ ಭಾರ್ತಿ ಏರ್ ಟೆಲ್ ಸಂಸ್ಥೆ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡಲು ಮುಂದಾಗಿದೆ ಡನು ತಿಳಿದು ಬಂದಿದೆ. ಏರ್ಟೆಲ್ 399 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಲಾಗಿದೆ. ಈ ಪ್ಲಾನ್ ನಲ್ಲಿ ಪ್ರತಿ ದಿನ 1.4 ಜಿಬಿ ಡೇಟಾ ಸಿಗ್ತಿತ್ತು. ಇನ್ನು ಮುಂದೆ 2.4 ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ ಎಂದು ತಿಳಿದು ಬಂದಿದೆ.

 

 

ಏರ್ಟೆಲ್ ನ 399 ಪ್ಲಾನ್ ಎರಡು ವ್ಯಾಲಿಡಿಟಿ ಹೊಂದಿರಲಿದೆ. ಕೆಲ ಗ್ರಾಹಕರಿಗೆ ಇದ್ರ ವ್ಯಾಲಿಡಿಟಿ 70 ದಿನವಾದ್ರೆ ಮತ್ತೆ ಕೆಲವು ಗ್ರಾಹಕರಿಗೆ 84 ದಿನ ವ್ಯಾಲಿಡಿಟಿ ಸಿಗಲಿದೆ. ಯಾವ ಗ್ರಾಹಕರ ಪ್ಲಾನ್ ವ್ಯಾಲಿಡಿಟಿ 84 ದಿನವಿದೆಯೋ ಆ ಗ್ರಾಹಕರಿಗೆ ಪ್ರತಿ ದಿನ 2.4 ಜಿಬಿ ಡೇಟಾ ಸಿಗಲಿದೆ ಎಂದು ತಿಳಿದು ಬಂದಿದೆ.

ಏರ್ಟೆಲ್ ನ 399 ಪ್ಲಾನ್ ನಲ್ಲಿ ಪ್ರತಿ ದಿನ 2.5 ಜಿಬಿ ಡೇಟಾ ಜೊತೆಗೆ ಅನಿಯಮಿತ ಕರೆ ಮಾಡಲು ಲಭ್ಯವಾಗಲಿದೆ. ಆದರೆ ಕಂಪನಿ ಇದಕ್ಕೆ ಸಮಯ ನಿಗದಿ ಮಾಡಿದೆ. ಗ್ರಾಹಕರು ದಿನದಲ್ಲಿ 250 ನಿಮಿಷ ಮಾತ್ರ ಕರೆ ಮಾಡಬಹುದಾಗಿದೆ. ಒಂದು ವಾರಕ್ಕೆ 1000 ನಿಮಿಷ ಕರೆ ಮಾಡುವ ಅವಕಾಶ ಸಿಗಲಿದೆ ಎಂದು ತಿಳಿದು ಬಂದಿದೆ.

ಕಡಿಮೆ ವೆಚ್ಚದ ರೀಚಾರ್ಜ್ ಮತ್ತು ಪ್ರತಿದಿನ ಒಂದು ಜಿಬಿ ಡೇಟಾ ಸಿಗುವಂತೆ ಕೇವಲ 49 ರು ಗಳ ರೀಚಾರ್ಜ್ ಯೋಜನೆಯನ್ನು ಕೂಡಾ ಏರ್ ಟೆಲ್ ಇತ್ತೀಚೆಗೆ ಗ್ರಾಹಕರಿಗೆ ಪರಿಚಯ್ ಮಾಡಿತ್ತು ಎಂದು ತಿಳಿದು ಬಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top