fbpx
ಸಿನಿಮಾ

80 -90ರ ದಶಕದ ಸ್ಟಾರ್ ಗಳ ಮುದ್ದಿನ ಮಕ್ಕಳು ಎಷ್ಟು ಸುಂದರವಾಗಿ ಯಾವ ಹೀರೋಯಿನ್ ಗಳಿಗೂ ಕಮ್ಮಿ ಇಲ್ಲ ಅನ್ನೋ ಹಾಗೆ ಇದ್ದಾರೆ ಗೊತ್ತಾ

80 -90ರ ದಶಕದ ಕೆಲ ಸ್ಟಾರ್ ನಟನಟಿಯರು ಇನ್ನು ಸಿನೆಮಾಗಳಲ್ಲಿ ಆಕ್ಟಿವ್ ಇದ್ದರೆ ಇನ್ನು ಕೆಲವು ತಾರೆಯರು ತಮ್ಮ ಮುದ್ದು ಮಕ್ಕಳನ್ನು ಸಿನಿಮಾ ರಂಗಕ್ಕೆ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದಾರೆ , ಸ್ಟಾರ್ ಗಳ ಮುದ್ದು ಮಕ್ಕಳು ಯಾವುದೇ ನಾಯಕಿಯರಿಗೂ ಕಡಿಮೆ ಇಲ್ಲ ಅನ್ನುವ ಅಷ್ಟು ಸುಂದರವಾಗಿದ್ದಾರೆ, ಅಂತಹ ಕೆಲವು ಸ್ಟಾರ್ ಮಕ್ಕಳನ್ನ ನಿಮಗೆ ಪರಿಚಯ ಮಾಡಿಕೊಡುತ್ತೇವೆ ಬನ್ನಿ .

ಸುಧಾ ರಾಣಿ ಅವರ ಮಗಳು ನಿಧಿ ಗೋವರ್ಧನ್

 

 

ಸುಧಾರಾಣಿ ಯವರು ತಮ್ಮ 12 ನೇ ವಯಸ್ಸಿಗೆ ಬೆಳ್ಳಿಪರದೆಗೆ ಆನಂದ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದರು , ಆಕಾಲಕ್ಕೆ ಆ ಚಿತ್ರ ಸೂಪರ್ ಹಿಟ್ ಆಗಿತ್ತು ಈಗ ಅಮ್ಮನಂತೆಯೇ ಅಮ್ಮನ ಜೊತೆಯೇ ತಮ್ಮ ಸಿನಿ ಜರ್ನಿಯ ಹೊಸ ಅದೃಷ್ಟ ಹುಡುಕ ಹೊರಟಿದ್ದಾರೆ ಸುಧಾರಾಣಿ ಯವರ ಮಗಳು ನಿಧಿ , ಹೌದು ಈ ಚಿತ್ರದಲ್ಲಿ ಸುಧಾರಾಣಿಯವರು ಸಹ ಅಭಿನಯ ಮಾಡುತ್ತಿದ್ದಾರೆ , ರೀಲ್ ನಲ್ಲೂ ಅಮ್ಮ ಮಗಳ ಪಾತ್ರವನ್ನೇ ಮಾಡುತ್ತಿದ್ದಾರೆ .

ನಿಧಿ ಗೋವರ್ಧನ್ ರವರಿಗೆ ಈಗ 17 ವರ್ಷ ಈ ಹಿಂದೆ ಆಡ್ ಒಂದರಲ್ಲಿ ಕಾಣಿಸಿಕೊಂಡಿದ್ದರು ನಿಧಿ ನೋಡಲು ಅಮ್ಮನಂತೆಯೇ ಸುಂದರವಾಗಿರುವ ನಿಧಿಯ ಫಿಲಂ ಎಂಟ್ರಿ ಯ ಬಗ್ಗೆ ಇದಕ್ಕೂ ಮೊದಲೇ ಅನೇಕರು ಭವಿಷ್ಯ ನುಡಿದಿದ್ದು ಈಗ ನಿಜವಾಗಿದೆ .

 

ಶ್ರುತಿ ಅವರ ಮಗಳು ಗೌರಿ

 

 

ನಟಿ ಶ್ರುತಿ ಅವರ ಪುತ್ರಿ ಗೌರಿ ಇಂಪಾಗಿ ಹಾಡುತ್ತಾರೆ. ಸದ್ಯ ಗೌರಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಈಕೆಯ ಧ್ವನಿಯನ್ನು ಕೇಳಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಹವ್ಯಾಸಕ್ಕಾಗಿ ಹಾಡಿ ಇನ್‌ಸ್ಟಾಗ್ರಾಂ ನಲ್ಲಿ ಹಾಕಿರುವ ವಿಡಿಯೋಗಳು ಸಾವಿರಗಟ್ಟಲೆ ಲೈಕ್ ಹಾಗೂ ಕಮೆಂಟ್ ಗಳನ್ನು ಪಡೆದುಕೊಂಡಿವೆ, ಕನ್ನಡ ,ತಮಿಳು ,ತೆಲುಗು ,ಹಿಂದಿ ಹಾಗು ಮಾರಾಠಿ ಭಾಷೆಯಲ್ಲಿ ಹಾಡುಗಳನ್ನು ಹಾಡುತ್ತಾರೆ ಮಿಲಿ .

ನೋಡಲು ಅಮ್ಮನಂತೆ ಸುಂದರವಾಗಿರುವ ಗೌರಿಗೆ ಆಕರ್ಷಕ ಮೈಕಟ್ಟು ಇದೆ ,ಜೊತೆಗೆ ಸ್ವಚ್ಛವಾಗಿ ಹಾಡನ್ನು ಹಾಡುತ್ತಾರೆ ,ಮುಂದೆ ಗೌರಿ ಫಿಲ್ಮಿ ಜಗತ್ತಿಗೆ ಎಂಟ್ರಿ ಕೊಡ್ತಾರಾ ಕಾದು ನೋಡಬೇಕು .

ರಾಮ್ ಕುಮಾರ್ ಅವರ ಮಗಳು ಧನ್ಯ ರಾಮ್​ಕುಮಾರ್​

 

 

ಡಾ. ರಾಜ್‌ಕುಮಾರ್ ಕುಟುಂಬವೇ ಒಂದು ಕಲಾವಿದರ ಕುಟುಂಬ. ಡಾ.ರಾಜ್ ಬಳಿಕ ಅವರ ಮಕ್ಕಳು ನಂತರ ಈಗ ಮೊಮ್ಮಕ್ಕಳು ಚಿತ್ರರಂಗದಲ್ಲಿ ಮೆರೆಯುತ್ತಿದ್ದಾರೆ. ಈಗಾಗಲೇ ವಿನಯ್​ ರಾಘವೇಂದ್ರ ರಾಜ್​ ಕುಮಾರ್​ , ರಾಮ್​ ಕುಮಾರ್​ ಅವರ ಮಗ, ಪಾರ್ವತಮ್ಮ ರಾಜ್ ಕುಮಾರ್ ಅವರ ತಮ್ಮನ ಮಗ ಸೂರಜ್ ಚಿತ್ರರಂಗಕ್ಕೆ ಧುಮುಕಿದ್ದು ಮತ್ತೊಂದು ರಾಜ್ ಕುಂಟುಂಬದ ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ ಕಾದು ನೋಡಬೇಕು .

ರಾಜ್ ಪುತ್ರಿ ಪೂರ್ಣಿಮಾ ಮತ್ತು ನಟ ರಾಮ್​ಕುಮಾರ್​ ದಂಪತಿಗಳ ಮಗ ಧೀರೆನ್​ ರಾಮ್​ಕುಮಾರ್​ ತಮ್ಮ ಮೊದಲ ಸಿನಿಮಾ ತಯಾರಿಯಲ್ಲಿರುವಾಗಲೇ ತಮ್ಮ ಪುತ್ರಿ ಧನ್ಯ ರಾಮ್​ಕುಮಾರ್​ ಅವರನ್ನು ಕೂಡ ಚಿತ್ರರಂಗಕ್ಕೆ ಪರಿಚಯಿಸುತ್ತಾರಾ ಕಾದು ನೋಡಬೇಕು , ಅಣ್ಣನಿಗೆ ಪೈಪೋಟಿ ನೀಡುವ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿರುವ ಧನ್ಯ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವ ಸಿಗ್ನಲ್ ನೀಡಿದ್ದಾರೆ. ಸಿಕ್ಕಾಪಟ್ಟೆ ಹಾಟ್’ಆಗಿ ಕಾಣಿಸಿಕೊಂಡಿರುವ ಧನ್ಯ ಫೋಟೋಗಳು ಪಡ್ಡೆಹುಡುಗರ ಕಣ್ಣು ಕುಕ್ಕುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಧನ್ಯ ಈಗಾಗಲೇ ಅನೇಕ ಫ್ಯಾಷನ್ ಶೋ ಗಳಲ್ಲಿ ಕಾಣಿಸಿಕೊಂಡಿದ್ದು ಕನ್ನಡ ಚಿತ್ರ ರಂಗಕ್ಕೆ ಭರವಸೆಯ ನಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ .

ವಿಜಯಲಕ್ಷ್ಮಿ ಸಿಂಗ್ ಅವರ ಮಕ್ಕಳು

 

 

 

ವಿಜಯಲಕ್ಷ್ಮಿ ಸಿಂಗ್ ೮೦ರ ಕನ್ನಡ ಚಲನಚಿತ್ರ ನಟಿ, ನಿರ್ಮಾಪಕಿ, ಸಿರ್ದೇಶಕಿ. ಕನ್ನಡ ಚಿತ್ರರಂಗದ ಹೆಸರಾಂತ ನಟಿ ಪ್ರತಿಮಾ ದೇವಿ ಮತ್ತು ನಿರ್ಮಾಪಕ ಶಂಕರ್ ಸಿಂಗ್ ಅವರ ಪುತ್ರಿ, ಇವರ ಪತಿ ಜೈ ಜಗದೀಶ್ ಕೂಡ ಖ್ಯಾತ ನಟರು ,ಇವರಿಗೆ ವೈಭವಿ, ವೈನಿಧಿ, ವೈಸಿರಿ ಎಂಬ ಮೂರು ಮುದ್ದು ಹೆಣ್ಣು ಮಕ್ಕಳಿದ್ದಾರೆ , ಸದ್ಯಕ್ಕೆ ಜೈಜಗದೀಶ್ ಅವರು ಅರ್ಪಿಸುತ್ತಿರುವ ಯಾನ ಚಿತ್ರವನ್ನು ಹರೀಶ್ ಶೇರಿಗಾರ್ , ಶರ್ಮಿಳಾ ಶೇರಿಗಾರ್ ನಿರ್ಮಿಸುತ್ತಿದ್ದಾರೆ. ವಿಜಯಲಕ್ಷ್ಮೀಸಿಂಗ್ ಕಥೆ ಬರೆದಿರುವ ಈ ಚಿತ್ರಕ್ಕೆ ವಿಜಯಲಕ್ಷ್ಮೀಸಿಂಗ್ ಹಾಗೂ ಸುಹಾಸ್ ಗಂಗಾಧರ್ ಚಿತ್ರಕಥೆ ಬರೆದಿದ್ದಾರೆ, ವೈಭವಿ, ವೈನಿಧಿ, ವೈಸಿರಿ ನಾಯಕಿಯರಾಗಿ ಅಭಿನಯ ಮಾಡುತ್ತಿದ್ದಾರೆ .

ಮಾಧವಿ ಅವರ ಮಕ್ಕಳು

 

 

ಭಾರತೀಯ ಮತ್ತು ಜರ್ಮನ್ ಹೆಸರಿನ ಔಷಧೀಯ ಉದ್ಯಮಿಯಾದ ರಾಲ್ಫ್ ಶರ್ಮಾ ಅವರನ್ನ 1996ರಲ್ಲಿ ಮಾಧವಿ ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲೇ ಮಾಧವಿ ತನ್ನ ಗಂಡನ ಜೊತೆ ಅಮೆರಿಕಾಗೆ ಹೊರಟು ಹೋದರು. ಅಲ್ಲಿ ತನ್ನ ಪತಿಯ ಮೆಡಿಕಲ್ ಫಾರ್ಮಸಿ ಕಂಪನಿಗೆ ಸ್ವತಃ ಮಾಧವಿ ಅವರೇ ಸಿಇಓ ಆಗ್ತಾರೆ. ತಮ್ಮ ಕಂಪನಿಯ ಕೆಲಸಗಳಲ್ಲಿ ಬ್ಯುಸಿಯಾದರು. ಕೆಲವೇ ವರ್ಷಗಳಲ್ಲಿ ಸಾಂಸಾರಿಕ ಜೀವನದ ಕಡೆಗೂ ಗಮನಹರಿಸಿದ ಮಾದವಿಯವರಿಗೆ ಟಿಫಾನಿ ಶರ್ಮಾ, ಎವೆಲಿನ್ ಶರ್ಮಾ, ಪ್ರಿಸ್ಸಿಲಾ ಶರ್ಮಾ ಎಂಬ ಮೂರು ಮುದ್ದಾದ ಹೆಣ್ಣು ಮಕ್ಕಳು ಜನಿಸಿದ್ದಾರೆ.

ಅರ್ಜುನ್ ಸರ್ಜಾ ಅವರ ಮಕ್ಕಳು

 

 

ನಟ ಶಕ್ತಿಪ್ರಸಾದ್ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ನಟ. ಅವರ ಮಗ ಅರ್ಜುನ್ ಸರ್ಜಾ ನಟ, ನಿರ್ದೇಶಕ, ನಿರ್ಮಾಪಕರಾಗಿ ಇಡೀ ಭಾರತೀಯ ಚಿತ್ರರಂಗದಲ್ಲಿ ಮಿಂಚಿದವರು.ಅರ್ಜುನ್ ಸರ್ಜಾ ಅವರ ಪತ್ನಿ ಆಶಾರಾಣಿ ನಟಿಸಿದ್ದು ಒಂದೇ ಒಂದು ಸಿನಿಮಾದಲ್ಲಾದರೂ ಆ ಪಾತ್ರವಿನ್ನೂ ನೆನಪಿನಲ್ಲುಳಿಯುವಂಥದ್ದು. ಆಶಾರಾಣಿ ಅವರ ತಂದೆ ನಟ ರಾಜೇಶ್ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ. ನಾಯಕನಟನಾಗಿ ಚಿತ್ರರಂಗಕ್ಕೆ ಪರಿಚಯಗೊಂಡು, ಇವತ್ತಿಗೂ ಪೋಷಕ ಕಲಾವಿದರಾಗಿ ಬಣ್ಣ ಹಚ್ಚುತ್ತಾ ಬಂದಿರುವವರು.

ಅರ್ಜುನ್ ಸರ್ಜಾ ತಮ್ಮ ಪುತ್ರಿ ಐಶ್ವರ್ಯ ಅವರನ್ನು ಕನ್ನಡ ಚಿತ್ರಕ್ಕೆ ನಾಯಕಿಯಾಗಿ ಪರಿಚಯಿಸಿದ್ದಾರೆ ಈಗಾಗಲೇ ಪ್ರೇಮ ಬರಹ ರಿಲೀಸ್ ಆಗಿತ್ತು , ‘ಪಟ್ಟತ್ತ ಆನೈ’ (ಪಟ್ಟದ ಆನೆ) ಸಿನಿಮಾ ದಲ್ಲಿ ತಮಿಳು ನಟ ವಿಶಾಲ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ .

ನೋಡಲು ಬಹಳ ಸುಂದರವಾಗಿರುವ ಅರ್ಜುನ್ ಸರ್ಜಾ ಅವರ ಎರಡನೇ ಪುತ್ರಿ ಅಂಜನಾ ಸದ್ಯಕ್ಕೆ ಓದುತ್ತಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top