fbpx
ಹೆಚ್ಚಿನ

ಯಾವ ದಿಕ್ಕಿಗೆ ಮುಖ ಮಾಡಿರುವ ಆಂಜನೇಯ ಸ್ವಾಮಿಯನ್ನು ಪೂಜೆ ಮಾಡಿದ್ದಾರೆ ಶೇಷ್ಠ ಹಾಗೂ ಅದರಿಂದ ಏನ್ ಫಲ ಅಂತ ತಿಳ್ಕೊಳ್ಳಿ .

ಯಾವ ದಿಕ್ಕಿಗೆ ಮುಖ ಮಾಡಿರುವ ಆಂಜನೇಯ ಸ್ವಾಮಿಯನ್ನು ಪೂಜೆ ಮಾಡಿದ್ದಾರೆ ಶೇಷ್ಠ ಹಾಗೂ ಅದರಿಂದ ಏನ್ ಫಲ ಅಂತ ತಿಳ್ಕೊಳ್ಳಿ .

ಆಂಜನೇಯ ಸ್ವಾಮಿಯ ಮೂರ್ತಿಯು ಹಲವಾರು ದಿಕ್ಕುಗಳಿಗೆ ಮುಖ ಮಾಡಿರುವುದನ್ನು ನಾವು ಸಾಮಾನ್ಯವಾಗಿ ದೇವಾಲಯಗಳಲ್ಲಿ ಕಾಣುತ್ತೇವೆ. ಅದರಲ್ಲೂ ಮುಖ್ಯವಾಗಿ ನಾವು ಯಾವ ದಿಕ್ಕಿಗೆ ? ಮುಖ ಮಾಡಿರುವ ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಬೇಕು ? ಇದರಿಂದ ಏನೆಲ್ಲಾ ವಿಶೇಷ ಫಲಗಳು ಸಿದ್ಧಿಸುತ್ತವೆ ಎಂದು ನಿಮಗೆ ಗೊತ್ತಾ ?

 

 

ಮುಖ್ಯವಾಗಿ ಆಂಜನೇಯ, ಹನುಮಂತ, ಪವಮಾನ, ಮಾರುತಿ, ಭಜರಂಗಿ, ಈ ರೀತಿ ನಾನಾ ರೀತಿಯ ಹೆಸರುಗಳಿಂದ ಆಂಜನೇಯ ಸ್ವಾಮಿಯನ್ನು ನಾವು ಹೊಗಳುತ್ತೇವೆ. ಕಲಿಯುಗದ ಬ್ರಹ್ಮ ಈ ಆಂಜನೇಯ ಸ್ವಾಮಿ. ಈ ಕಲಿಯುಗದ ಬ್ರಹ್ಮ ಯಾವ ದಿಕ್ಕಿನಲ್ಲಿ ಮುಖ ಮಾಡಿ ಇದ್ದರೆ ಅದನ್ನು ಆರಾಧಿಸಿದರೆ ಏನು ಫಲ ? ಎನ್ನುವುದರ ಬಗ್ಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಅಧ್ಯಯನ ಮಾಡಿದರೆ ಅದರಲ್ಲಿ ವಿಶೇಷ ಏನೆಂದರೆ …..
ದಕ್ಷಿಣಾಭಿಮುಖವಾಗಿರುವ ಆಂಜನೇಯ.

ಶನಿ ದೋಷ ಇತ್ತು ಎಂದರೆ ಸಾಡೇಸಾತಿ ಅಷ್ಟಮ ಶನಿ ಪಂಚಮ ಶನಿಯಿಂದ ಬಳಲುತ್ತಿದ್ದರೆ, ಹೀಗೆ ಹೇಳುತ್ತಾರೆ. ದಕ್ಷಿಣಾಭಿಮುಖವಾಗಿರುವ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಹೋಗಿ ದರ್ಶನ ಮಾಡಿ , ಪೂಜೆ ಮಾಡಿ , ಅರ್ಚನೆ ಮಾಡಿಸಿ , ನಾಟಿ ತುಳಸಿಯಿಂದ ಅರ್ಚನೆ ಮಾಡಿಸಿ , ದೀರ್ಘದಂಡ ನಮಸ್ಕಾರವನ್ನು ಮಾಡಿ ಎಂದು ಹೇಳುತ್ತಾರೆ. ಪವಮಾನ ಸೂಕ್ತವನ್ನು ಪಾರಾಯಣವನ್ನು ಮಾಡಿ, ಹನುಮಾನ್ ಚಾಲೀಸವನ್ನು ಪಾರಾಯಣ ಮಾಡಿ ಎಂದು ಜ್ಯೋತಿಷ್ಯರು ಸಾಮಾನ್ಯವಾಗಿ ಹೇಳುತ್ತಾರೆ. ಇದು ಖಂಡಿತವಾಗಿಯೂ ನಿಜ ಅದು ಉಲ್ಲೇಖವಾಗಿರುವ ವಂತಹ ವಿಷಯವೇ ಆಗಿದೆ. ಯಾರಿಗೆ ಶನಿದೋಷ ಇರುತ್ತದೋ , ಅವರು ದಕ್ಷಿಣಾಭಿಮುಖವಾಗಿರುವ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಹೋಗಿ ಪೂಜೆ ಪ್ರಾರ್ಥನೆಯನ್ನು ಮಾಡಬೇಕು.

ಪೂರ್ವಾಭಿಮುಖವಾಗಿ ಇರುವ ಆಂಜನೇಯ.
ಇನ್ನು ಕೆಲವರ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸುತ್ತದೆ. ಹಾಗಾದರೆ ಪೂರ್ವಾಭಿಮುಖವಾಗಿರುವ ಆಂಜನೇಯ ಸ್ವಾಮಿಯಲ್ಲಿ ಹಾಗಾದರೆ ಯಾವುದೇ ಶಕ್ತಿ ಇರುವುದಿಲ್ಲವೇ ? ಎಂದು ಕೇಳುತ್ತಾರೆ . ಖಂಡಿತವಾಗಿಯೂ ಆ ರೀತಿ ಇಲ್ಲ ನವಗ್ರಹಗಳು ಎಂದು ನಾವು ಹೇಳುತ್ತೇವೆ . ಒಬ್ಬ ಮನುಷ್ಯ ಜೀವನದಲ್ಲಿ ಚೆನ್ನಾಗಿರಬೇಕು ಎಂದರೆ ಅದೃಷ್ಟ ಮುಖ್ಯ . ಪೂರ್ವ ದಿಕ್ಕಿಗೆ ಅಭಿಮುಖವಾಗಿರುವ ಆಂಜನೇಯ ಸ್ವಾಮಿಯನ್ನು ಪೂಜಿಸಿದರೆ ,ನಮಸ್ಕರಿಸಿದರೆ ಆರಾಧಿಸಿದರೆ ಸೂರ್ಯನ ಬಲ ಎನ್ನುವುದು ನಮಗೆ ಲಭ್ಯವಾಗುತ್ತದೆ.

 

 

ಪಶ್ಚಿಮ ದಿಕ್ಕಿಗೆ ಮುಖ ಮಾಡಿರುವ ಅಂಜನೇಯ ಸ್ವಾಮಿ.
ಪಶ್ಚಿಮಕ್ಕೆ ಮುಖ ಮಾಡಿರುವ ಆಂಜನೇಯನ ದರ್ಶನ ಮಾಡಿದರೆ ರಾಹು ,ಕೇತುಗಳ ದೋಷವು ಅಂದರೆ ಸರ್ಪದೋಷ ನಿವಾರಣೆಯಾಗುತ್ತದೆ.

ಉತ್ತರ ದಿಕ್ಕಿಗೆ ಮುಖ ಮಾಡಿರುವ ಆಂಜನೇಯ.
ಇನ್ನು ಉತ್ತರಕ್ಕೆ ಮುಖ ಮಾಡಿರುವ ಆಂಜನೇಯ ಸ್ವಾಮಿಯನ್ನು ದರ್ಶನ ಮಾಡಿದರೆ, ನಾವು ಎಲ್ಲ ಕೆಲಸ ಕಾರ್ಯಗಳಲ್ಲೂ ನಮ್ಮ ಜೀವನದಲ್ಲಿ ವಿಜಯೋತ್ಸವವನ್ನು ಕಾಣುತ್ತೇವೆ, ಜಯವನ್ನು ಗಳಿಸುತ್ತೇವೆ, ಸದಾ ಜಯವನ್ನು ಗಳಿಸುವ ಆಶೀರ್ವಾದವೂ ನಮಗೆ ಲಭ್ಯವಾಗುತ್ತದೆ. ಹೀಗೆ ಸುಂದರ ಕಾಂಡವನ್ನು ಪಾರಾಯಣ ಮಾಡುವಾಗ ಬಹಳಷ್ಟು ಹನುಮಂತನಲ್ಲಿ ಇರುವ ಶಕ್ತಿ ತಿಳಿಯುತ್ತದೆ.

ಈ ಕಲಿಯುಗದಲ್ಲಿ ಇಚ್ಛಿತ ಫಲಗಳು ಅಂದರೆ ನಾವು ಅಂದುಕೊಂಡಿರುವ ಫಲಗಳನ್ನು ಕೊಡುವವನೇ ಹನುಮಂತ, ಆಂಜನೇಯ ಸ್ವಾಮಿ . ಹಾಗಾಗಿ ನಾವು ಏನು ಮಾಡಬೇಕೆಂದರೆ ? ನಾವು ವಿಜ್ಞಾನದ ಪ್ರಕಾರ ಬಂದಾಗಲೂ ಕೂಡ ಮಂಗನಿಂದ ಮಾನವ ಎಂದು ಹೇಳುತ್ತೇವೆ. ಹಾಗೆ ಆ ಮಂಗನ ರೂಪದಲ್ಲಿ ಇರುವಂತಹ ಆಂಜನೇಯನ ದರ್ಶನ ಮತ್ತು ಸೇವೆಯನ್ನು ಮಾಡಿದರೆ ತುಂಬಾ ಒಳ್ಳೆಯದು.

ಇನ್ನು ಕೆಲವರು ಏನು ಹೇಳುತ್ತಾರೆ ಎಂದರೆ ಹನುಮಂತನು ಏನು ನಮ್ಮ ಮನೆ ದೇವರು ಅಲ್ಲ , ನಮ್ಮದು ಬೇರೆ ದೇವರು ಎಂದು ಹೇಳುತ್ತಾರೆ. ಖಂಡಿತವಾಗಿಯೂ ಹಾಗೆ ಹೇಳಬಾರದು. ಹಾಗೆಯೇ ಇರಬೇಕೆಂದು ಪೂಜಿಸಬಾರದೆಂದು ಏನೂ ಇಲ್ಲ ? ಈ ಭರತಖಂಡದಲ್ಲಿ

ಅಂದರೆ , ಭಾರತ ದೇಶದಲ್ಲಿ ಇರುವ ಪ್ರತಿಯೊಬ್ಬ ಹಿಂದೂಗಳು ಸಹ ಆಂಜನೇಯನನ್ನು ಪೂಜೆ ಮಾಡಲೇಬೇಕು ಎಂದು ಹೇಳುತ್ತದೆ ಶಾಸ್ತ್ರ. ಯಾಕೆಂದರೆ ಈ ಪ್ರಾಂತ್ಯದಲ್ಲಿ ಆಂಜನೇಯನ ವಾಸವೂ ಇರುವುದು.
ಹಿಂದೆ ಸುಗ್ರೀವ ಮತ್ತೆ ವಾಲಿ ಕ್ಷೇತ್ರ ಪಾಲಕನಾಗುತ್ತಾನೆ ಅಂದರೆ ಕಿಷ್ಕಿಂದಾ ನಗರದ ಕ್ಷೇತ್ರ ಪಾಲಕರು ಇವರು. ನೀವು ರಾಮಾಯಣವನ್ನು ಕೇಳಿದಾಗ ಇದು ಕಂಡುಬರುತ್ತದೆ. ಹಾಗೆ ಆಂಜನೇಯ ಸೇನಾಧಿಪತಿಯಾಗಿ ಇರುವ ಕೆಲಸ ಕಾರ್ಯಗಳನ್ನು ಮಾಡಿ ತೋರಿಸಿದ್ದಾರೆ. ನಮ್ಮೆಲ್ಲರನ್ನು ಕೂಡ ರಕ್ಷಣೆ ಮಾಡುವುದು ಆಂಜನೇಯ ಸ್ವಾಮಿಗೆ ಇಂದಿಗೂ ಸಹ ಇದ್ದೇ ಇದೆ.

ನೀವು ಎಲ್ಲೇ ಹೋದರು ಕಾಣಬಹುದು ಆಂಜನೇಯನ ದೇವಸ್ಥಾನ ನಿರ್ಮಾಣವಾಗುತ್ತಿದ್ದರೆ, ನಿಮ್ಮ ಕೈಯಲ್ಲಿ ಏನಾಗುತ್ತದೆಯೋ ಅದನ್ನು ಸಹಾಯ ಮಾಡಿ ಒಂದು ಇಟ್ಟಿಗೆ ,ಸ್ವಲ್ಪ ಮರಳು, ಅಥವಾ ಸ್ವಲ್ಪ ಜಲ್ಲಿ ಏನಾದರೂ ಸಹಾಯ ಮಾಡಿ . ಮನುಷ್ಯ ಬರುವಾಗ ಬೆತ್ತಲೆ ಹೋಗುವಾಗಲೂ ಬೆತ್ತಲೆ ಮಧ್ಯದಲ್ಲಿ ಪೂರ್ಣ ಕತ್ತಲೆ. ಆದರೆ ಈ ಭೂಮಿಯ ಮೇಲೆ ಬಂದಿದ್ದೇವೆ , ನಾವು ಪುಣ್ಯದ ಕೆಲಸಗಳನ್ನು ಮಾಡಬೇಕು .
ಪ್ರತಿ ಶನಿವಾರ ಆಂಜನೇಯನ ದೇವಾಲಯಕ್ಕೆ ಹೋಗಿ ಯಾರು ನಾಟಿ ತುಳಸಿಯನ್ನು ಅರ್ಪಿಸುತ್ತಾರೋ, ಸಿಂಧೂರವನ್ನು ಧಾರಣೆಯನ್ನು ಮಾಡುತ್ತಾರೋ,
“ಮನೋಜವಂ ಮಾರುತ ತುಲ್ಯ ವೇಗಂ,
ಜಿತೇಂದ್ರಿಯ ಬುದ್ಧಿ ಮಾತಾಮರಿಷ್ಠ0,
ವಾತಾತ್ಮಜಂ ವಾನರಯೋಧ ಮುಖ್ಯ0,
ಶ್ರೀರಾಮ ದೂತ0 ಶಿರಸಾ ನಮಾಮಿ”

ಈ ಮಂತ್ರವನ್ನು ಎಷ್ಟು ಬಾರಿ ನಿಮಗೆ ಶಕ್ತಿ ಇದೆಯೋ, ಅಷ್ಟು ಬಾರಿ ಹೇಳಿ ನಮಸ್ಕಾರವನ್ನು ಮಾಡಿ ಬನ್ನಿ . ನೀವು ಮಾಡುವ ಕೆಲಸ ಕಾರ್ಯದಲ್ಲಿ ಜಯ ಎನ್ನುವುದು ನಿಮಗೆ ಲಭ್ಯವಾಗುತ್ತದೆ . ನಿಮಗೆಲ್ಲರಿಗೂ ಕೂಡ ವೀರಾಂಜನೇಯನ ಅನುಗ್ರಹ ಪ್ರಾಪ್ತಿಯಾಗುವುದು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top