fbpx
ಭವಿಷ್ಯ

12 ಜೂನ್ ರಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಲು ಮುಂದೆ ಓದಿ

ಮಂಗಳವಾರ, ೧೨ ಜೂನ್ ೨೦೧೮
ಸೂರ್ಯೋದಯ : ೦೫:೫೬
ಸೂರ್ಯಾಸ್ತ : ೧೮:೪೨
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಜ್ಯೇಷ್ಠ (ಅದಿಕ)

ಪಕ್ಷ : ಕೃಷ್ಣ ಪಕ್ಷ
ತಿಥಿ : ತ್ರಯೋದಶೀ
ನಕ್ಷತ್ರ : ಕೃತ್ತಿಕ
ಯೋಗ : ಸುಕರ್ಮ
ಸೂರ್ಯ ರಾಶಿ : ವೃಷಭ

ಅಭಿಜಿತ್ ಮುಹುರ್ತ : ೧೧:೫೩ – ೧೨:೪೫
ಅಮೃತಕಾಲ : ೧೬:೫೫ – ೧೮:೨೩
ರಾಹು ಕಾಲ: ೧೫:೩೦ – ೧೭:೦೬
ಗುಳಿಕ ಕಾಲ: ೧೨:೧೯ – ೧೩:೫೫
ಯಮಗಂಡ: ೦೯:೦೮ – ೧೦:೪೩

ಮೇಷ (Mesha)

ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ಕಂಡು ಬರುವುದು. ಕೌಟುಂಬಿಕ ಸೌಖ್ಯ ಇರುತ್ತದೆ. ಕಾರ್ಯಸಿದ್ಧಿ ಆಗುತ್ತದೆ. ಆನಂದದಾಯಕ ಸಂಗತಿ. ಮಿತ್ರಪ್ರೇಮ, ದೈವಾನುಕೂಲತೆಯಿಂದ ಜನಾನುಕೂಲತೆ ದೊರೆಯುವುದು.

ವೃಷಭ (Vrushabh)


ಬಂಧು-ಮಿತ್ರರ ಭೇಟಿ. ಕ್ಷುಲ್ಲಕ ವಿಚಾರಗಳಿಗೆ ಮನಸ್ತಾಪವಾಗುವ ಸಾಧ್ಯತೆ ಇರುವುದು. ಜಾಣ್ಮೆಯಿಂದ ಪರಿಸ್ಥಿತಿಯನ್ನು ಎದುರಿಸಿರಿ. ಆಂಜನೇಯ ಸ್ತೋತ್ರ ಪಠಿಸುವುದು ಒಳ್ಳೆಯದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಮಿಥುನ (Mithuna)


ನೀವು ಈ ಹಿಂದೆ ಕಾರ್ಯಕ್ಷ ಮತೆಯಿಂದ ನಿರ್ವಹಿಸಿದ್ದ ಕೆಲಸಗಳು ಒಳ್ಳೆಯ ಫಲ ನೀಡಲಿವೆ. ಮುಖ್ಯ ಕೆಲಸವೊಂದಕ್ಕೆ ಹೆತ್ತವರ ನೆರವು ದೊರೆಯಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕರ್ಕ (Karka)


ಧನ ಸಂಪತ್ತು ಉತ್ತಮವಾಗಿರುವುದು. ಮನೋಕಾಮನೆಗಳು ಪೂರ್ಣಗೊಳ್ಳುವವು. ಬಂಧುಗಳ ಸ್ನೇಹಿತರ ಸಹಾಯ-ಸಹಕಾರಗಳು ದೊರೆಯುವವು. ಕೌಟುಂಬಿಕವಾಗಿ ನೆಮ್ಮದಿಯ ದಿನ.

ಸಿಂಹ (Simha)


ಮಹತ್ತರ ಕಾರ್ಯಗಳನ್ನು ಮಾಡುವಾಗ ಟೀಕೆಗಳು ಬರುವುದು ಸಹಜ. ಆದರೆ ಅದಕ್ಕಾಗಿ ತಲೆಕೆಡಿಸಿಕೊಳ್ಳುವುದು ತರವಲ್ಲ. ನಡೆಯುವ ವ್ಯಕ್ತಿ ಎಡವಿಬೀಳುವಂತೆ ಕೆಲವೊಮ್ಮೆ ತಪ್ಪುಗಳು ನುಸುಳುವ ಸಾಧ್ಯತೆ. ಚಿಂತೆ ಬೇಡ.

ಕನ್ಯಾರಾಶಿ (Kanya)


ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ಒದಗಿ ಬರುವುದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ. ಹಳೆಯ ಸ್ನೇಹಿತರ ಭೇಟಿ ಸಾಧ್ಯತೆ. ಹಣಕಾಸು ಉತ್ತಮ. ಶುಭವಾರ್ತೆ ಕೇಳುವಿರಿ. ಬಂಧುಗಳು, ಸ್ನೇಹಿತರ ಸಹಕಾರ ದೊರೆಯುವುದು. ಆರ್ಥಿಕ ಮುಗ್ಗಟ್ಟು ಕಂಡುಬರಲಿದೆ.

ತುಲಾ (Tula)


ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗಿ ನಡೆಯುವುದರಿಂದ ಮನಸ್ಸಿಗೆ ನೆಮ್ಮದಿ. ಮಗನು ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ದುಡಿಯುವುದರಿಂದ ಮನೆಯ ಗುಟ್ಟು ರಟ್ಟಾಗುವುದಿಲ್ಲ.

ವೃಶ್ಚಿಕ (Vrushchika)


ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ದೂರಾಲೋಚನೆಯಿಂದ ಹಮ್ಮಿಕೊಂಡ ಕೆಲಸಗಳಲ್ಲಿ ಪ್ರಗತಿ ಕಾಣುವುದು. ನಿಮ್ಮನ್ನು ವಿರೋಧಿಸುತ್ತಿದ್ದವರು ನಿಮಗೆ ಶರಣಾಗತರಾಗಿ ಬರುವರು.

ಧನು ರಾಶಿ (Dhanu)


ವ್ಯಾಪಾರ-ವ್ಯವಹಾರಸ್ಥರಿಗೆ ನಿರೀಕ್ಷೆಯಂತೆ ಆದಾಯ ಒದಗಿ ಬರುವುದು. ಆರೋಗ್ಯದಲ್ಲೂ ಸುಧಾರಣೆ ಕಂಡು ಬರುವುದು. ಪ್ರಯಾಣದಲ್ಲಿ ಎಚ್ಚರ. ಲಕ್ಷ್ಮೀನಾರಸಿಂಹ ದೇವರನ್ನು ಸ್ಮರಿಸಿರಿ.

ಮಕರ (Makara)


ಎಚ್ಚರದಿಂದ ಈದಿನ ವ್ಯವಹರಿಸುವುದು ಸೂಕ್ತ. ತಂತ್ರಜ್ಞರಿಗೆ ಉತ್ತಮ ಅವಕಾಶ ಸಿಗುವುದು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಹಣಕಾಸಿನ ಪರಿಸ್ಥಿತಿಯು ಒಂದು ಹಂತಕ್ಕೆ ಬರುವುದು. ಆಂಜನೇಯ ಸ್ತೋತ್ರವನ್ನು ಪಠಿಸಿರಿ.

ಕುಂಭರಾಶಿ (Kumbha)


ಸಂಬಂಧಪಟ್ಟ ವಿಷಯಗಳನ್ನು ಎಚ್ಚರಿಕೆಯಿಂದ ಪರಾಮರ್ಶಿಸಿ. ಪರಿಶ್ರಮಕ್ಕೆ ತಕ್ಕ ಫಲ ಕಾಣುವಿರಿ. ಆದರೆ ಗುರುವಿನ ಅನುಗ್ರಹವನ್ನು ಸಂಪಾದಿಸಿರಿ. ನಂತರ ಕಾರ್ಯ ಪ್ರವೃತ್ತರಾಗಿರಿ.

ಮೀನರಾಶಿ (Meena)


ನಿಮ್ಮ ಕನಸನ್ನು ಕಾರ್ಯರೂಪಕ್ಕೆ ತರುತ್ತೀರಿ. ನಿಮ್ಮ ಯೋಜನೆಗಳು ಶೀಘ್ರವಾಗಿ ಕಾರ್ಯರೂಪಕ್ಕೆ ಬರುತ್ತವೆ. ಕಲಾವಿದರಿಗೆ ಒಳ್ಳೆಯ ದಿನ. ಹಣಕಾಸಿನ ವ್ಯವಹಾರಗಳಲ್ಲಿ ಅಧಿಕ ಲಾಭಾಂಶ ಕಂಡುಬರುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top