ಸಮಾಚಾರ

ಸಚಿನ್ ರಾಮನಾದ್ರೆ, ಸೆಹ್ವಾಗ್ ಹನುಮಂತ – ವೈರಲ್ ಆಯ್ತು ವಿಶೇಷ ಚಿತ್ರ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗು ವೀರೇಂದ್ರ ಸೆಹ್ವಾಗ್ ರವರು ಒಂದು ಕಾಲದಲ್ಲಿ ಭಾರತ ತಂಡದ ಶ್ರೇಷ್ಠ ಆರಂಭಿಕ ಜೋಡಿ. ಇವರಿಬ್ಬರು ಸೇರಿಕೊಂಡರು ಅಂದರೆ ವಿಶ್ವದ ಬೌಲರ್​​ಗಳನ್ನೇ ನಿದ್ದೆಗೆಡಿಸುತ್ತಿದ್ದರು. ಆನ್​ಫೀಲ್ಡ್​ನಲ್ಲಿ ಒಂದಾಗಿದ್ದ ಈ ಜೋಡಿ ಅದೆಷ್ಟೋ ಬೌಲರ್​ಗಳ ಮಾರಣಹೋಮ ಮಾಡಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಜತೆಗಿರುವ ಫೋಟೋವೊಂದನ್ನು ಸೆಹ್ವಾಗ್ ಟ್ವೀಟ್ ಮಾಡಿದ್ದು ಆ ಫೋಟೋ ಇದೀಗ ವೈರಲ್ ಆಗಿದೆ.

 

 

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಫೋಟೋದಲ್ಲಿ ಸೆಹ್ವಾಗ್, ಸಚಿನ್ ಅವರ ಮುಂದೇ ಮಂಡಿಯೂರಿ ಹನುಮಂತನಂತೆ ಕುಳಿತ್ತಿದ್ದು, ಸಚಿನ್ ರಾಮನಂತೆ ನಿಂತಿದ್ದಾರೆ. ಈ ಫೋಟೋವನ್ನು ಸ್ವತಃ ಸೆಹ್ವಾಗ್ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಇಬ್ಬರ ನಡುವಿನ ಬಾಂಧವ್ಯ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿಗೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಸಚಿನ್, ಸೆಹ್ವಾಗ್ ಕುರಿತ ಹಲವು ವಿಷಯಗಳನ್ನು ಬಹಿರಂಗ ಪಡಿಸಿದ್ದರು. ಮುಖ್ಯವಾಗಿ ಸೆಹ್ವಾಗ್ ತಂಡಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ತಮ್ಮೊಂದಿಗೆ ಮಾತನಾಡುತ್ತಲೇ ಇರಲಿಲ್ಲ. ಜೊತೆಯಲ್ಲೇ ಇನ್ನಿಂಗ್ ಆರಂಭಿಸಿದರು ಸಹ ಮಾತನಾಡುತ್ತಿರಲಿಲ್ಲ. ಬಳಿಕ ತಾವೇ ಮಾತನಾಡಲು ಮುಂದಾಗಿದ್ದಾಗಿ ತಿಳಿಸಿದ್ದರು.

ಇದಕ್ಕಾಗಿಯೇ ಸಚಿನ್ ತೆಂಡೂಲ್ಕರ್ ರವರು ​​ ಒಂದು ಪರಿಹಾರ ಕಂಡುಕೊಂಡರಂತೆ. ಆನ್​ಫೀಲ್ಡ್​ ಜೊತೆಗೆ ಆಫ್​​ ಫೀಲ್ಡ್​ನಲ್ಲಿ ಒಡನಾಟ ಚೆನ್ನಾಗಿದ್ದರೆ ಉತ್ತಮ ಜೊತೆಯಾಟ ಆಗಬಹುದು ಎಂದು ಸೆಹ್ವಾಗ್ ಅವರನ್ನು ಒಮ್ಮೆ ಹೊರಗಡೆ ಊಟಕ್ಕೆ ಕರೆದೊಯ್ದರು. ನಂತರದ ದಿನಗಳಲ್ಲಿ ನಮ್ಮ ನಡುವೆ ಒಳ್ಳೆಯ ಒಡನಾಟ ಬೆಳೆಯಿತು ಎಂದು ಸಚಿನ್ ರವರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top