ಸಮಾಚಾರ

ಶಾರೂಖ್ ಓದುತ್ತಿರುವ ಪತ್ರಕ್ಕೆ ಕರೀನಾ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು- ಅಷ್ಟಕ್ಕೂ ಆ ಪತ್ರದಲ್ಲಿ ಏನಿತ್ತು

ಬಾಲಿವುಡ್ ನಟ ಶಾರೂಖ್ ಓದುತ್ತಿರುವ ಪತ್ರವೊಂದಕ್ಕೆ ನಟಿ ಕರೀನಾ ಕಪೂರ್ ನೀಡಿರುವ ಎಕ್ಸ್ ಪ್ರೆಶನ್ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ದಲ್ಲಿ ವೈರಲ್ ಆಗುವ ಮೂಲಕ ಹರಿದಾಡುತ್ತಿದೆ.

ಖಾಸಗಿ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಕರೀನಾ ಕಪೂರ್ ಹಾಗು ಶಾರೂಖ್ ಖಾನ್ ಮಧ್ಯೆ ಇಂತಹ ಹಾಸ್ಯಮಯ ಘಟನೆಯೊಂದು ನಡೆದಿದೆ. ಶಾರೂಖ್ ಕೈಯಲ್ಲಿ ಪತ್ರವೊಂದನ್ನು ಹಿಡಿದುಕೊಂಡು ಕರೀನಾ ಮುಂದೆ ಕುಳಿತಿದ್ದರು. ಈ ವೇಳೆ ಶಾರೂಖ್ ನಿಮಗಾಗಿ ಪತ್ರವೊಂದು ಬಂದಿದ್ದು, ಅದನ್ನು ನಾನು ಓದುತ್ತಿದ್ದೇನೆ ಎಂದು ಓದಲು ಪ್ರಾಂಭ ಮಾಡಿದರು.

ಶಾರುಖ್ ಪಾತ್ರ ಓದಲು ಪ್ರಾರಂಭ ಮಾಡಿದಾಗ ಮೊದಲು ಚಿಕ್ಕ ಮಗುವಿನಂತೆ ತೊದಲುತ್ತಾ ಓದಿದಾಗ ಯಾವ ಶಬ್ದಗಳು ಕೂಡ ನಟಿ ಕರೀನಾ ಕಪೂರ್ ಗೆ ಸ್ಪಷ್ಟವಾಗಿ ತಿಳಿಯಲಿಲ್ಲ. ಕೂಡಲೇ ಅವರು ಇದೇನು ಓದುತ್ತಿದ್ದೀರಿ ಎಂದು ಕೇಳಿದಾಗ ನಿಮ್ಮ ಮಗ ತೈಮೂರ್ ಬರೆದಿರುವ ಪತ್ರ ಎಂದು ಹೇಳಿದರು ಎಂದು ತಿಳಿದು ಬಂದಿದೆ.

 

T h i s ⬆️

A post shared by Shah Rukh Khan _ 650K 🔐🔱 (@srkking1) on


ಕರೀನಾ ಅವರು ಶಾರುಖ್ ಗೆ ನೀವು ಓದುತ್ತಿರೋದು ಅರ್ಥ ಆಗ್ತಿಲ್ಲ ಎಂದು ಹೇಳಿದರು, ನನಗೂ ನಿಮ್ಮ ತರಹ ಸಿನಿಮಾ ತೆಗೆದುಕೊಳ್ಳವುದು ಅಂದ್ರೆ ಬಲು ಇಷ್ಟ. ಆದ್ರೆ ಸೆಲ್ಫಿ ತೆಗೆದುಕೊಳ್ಳುವಾಗ ನಿಮ್ಮಂತೆ ಪೌಟ್ ಮಾಡಲು ಸರಿಯಾಗಿ ಬರಲ್ಲ. ನಿಮ್ಮ ಹಾಗೆ ಸುಂದರ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತೇನೆ. ನಾನು ಎಲ್ಲಿಯಾದ್ರೂ ಹೊರಗೆ ಹೋದರು ನನ್ನ ಡ್ರೆಸಿಂಗ್ ಸ್ಟೈಲ್ ಬಗ್ಗೆ ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ನನಗೆ ಮಾರ್ಗದರ್ಶನ ನೀಡುತ್ತಿರುವ ನನ್ನ ತಾಯಿಗೆ ಧನ್ಯವಾದ ಎಂದು ತೈಮೂರ್ ಬರೆದಿದ್ದಾನೆ ಅಂತಾ ತಿಳಿಸಿದ್ರು. ಶಾರೂಕ್ ಪತ್ರ ಓದುತ್ತಿದ್ದಂತೆ ವೇರಿ ಫನ್ನಿ, ಈ ತೈಮೂರು ತುಂಬಾ ಫನ್ನಿಯಾಗಿದ್ದಾನೆ ಅಂತಾ ಅಂದ್ರು. ಏನ್ ಮಾಡೋದು ಆತ ನಿಮ್ಮ ಮುದ್ದಿನ ಮಗ, ನಾವೇನು ಹೇಳುವುದಕ್ಕೆ ಆಗಲ್ಲ ಎಂದು ಶಾರೂಖ್ ಉತ್ತರ ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top