ಮನೋರಂಜನೆ

“ದುಡ್ಡು ಭಾರತದ್ದು ಅಧಿಕಾರ ಪಾಕಿಸ್ತಾನಕ್ಕಾ?” ಶಾರೂಖ್​ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು.

ಬಾಲಿವುಡ್ ಬಾದ್’ಷಾ ಶಾರುಖ್ ಖಾನ್ ಅವರಿಗೂ ವಿವಾದಗಳಿಗೂ ಅಷ್ಟೇನೂ ದೂರದ ಸಂಭಂದಗಳೇನು ಇಲ್ಲ. ತಮ್ಮ ಚಿತ್ರಗಳ ಮೂಲಕ ಮಾತ್ರವಲ್ಲದೆ ಒಂದಿಲ್ಲೊಂದು ಎಡವಟ್ಟು ಅಥವಾ ವಿವಾದಗಳ ಮೂಲಕವೂ ಆಗ್ಗಾಗ್ಗೆ ಸುದ್ದಿಯಾಗೋ ಶಾರುಖ್ ಖಾನ್ ಇದೀಗ ತಮ್ಮದಲ್ಲದ ತಪ್ಪೊಂದಕ್ಕೆ ಅಭಿಮಾನಿಗಳ ಕೋಪಕ್ಕೆ ಕಾರಣರಾಗಿದ್ದಾರೆ.

 

 

ಏನಿದು ವಿವಾದ?
​​ ಶಾರುಖ್‌ ಖಾನ್‌ ಅವರ ದೂರದ ಸಂಬಂಧಿಯಾದ ಪಾಕಿಸ್ತಾನದಲ್ಲಿರುವ ನೂರ್‌ ಜೆಹಾನ್‌ ಅವರು ಪಾಕಿಸ್ತಾನದ ಸಂಸತ್‌ ಚುನಾವಣಾ ಅಖಾಡದಲ್ಲಿ ಸ್ಪರ್ಧೆಗಿಳಿದಿದ್ದಾರೆ. ಜುಲೈ 25ರಂದು ನಡೆಯಲಿರುವ ಚುನಾವಣೆಯಲ್ಲಿ ಪೆಶಾವರ್​ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಸಂಭಂದದಲ್ಲಿ ನೋಡೋದಾದರೆ ಆಕೆ ಶಾರುಖ್ ಅವರಿಗೆ ಸೋದರಿಯಾಗುತ್ತಾರೆ. ಈ ವಿಚಾರ ಇದೀಗ ಅಭಿಮಾನಿಗಳು ಕೋಪಗೊಳ್ಳುವಂತೆ ಮಾಡಿದೆ.

ಈ ವಿಚಾರವನ್ನು ಇಟ್ಟುಕೊಂಡು ಶಾರುಖ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಮರ ಸಾರಿರುವ ಕೆಲವು ನೆಟ್ಟಿಗರು ಶಾರುಖ್ ಅವರ ವಿರುದ್ಧ ಬಗೆಬಗೆಯಾಗಿ ಕೆಂಡಕಾರುತ್ತಿದ್ದಾರೆ. ಖಾನ್ ವಿರುದ್ಧ ನಿಂದನಾತ್ಮಕ ಟೀಕಾಸ್ತ್ರಗಳನ್ನ ತೂರಿ ಬಿಡುತ್ತಿದ್ದಾರೆ. “ಶಾರುಖ್ ಖಾನ್ ಪಾಕಿಸ್ತಾನದ ಚುನಾವಣೆಯಲ್ಲಿ ತನ್ನ ಸಂಭಂದಿ ನೂರ್ ಜಹಾನ್’ಳಿಗೆ ಸಹಾಯ ಮಾಡಲಿದ್ದಾರೆ. ಭಾರತದಲ್ಲಿ ಸಂಪಾದಿಸಿದ ಹಣವನ್ನು ಪಾಕಿಸ್ತಾದಲ್ಲಿ ಅಧಿಕಾರ ಹಿಡಿಯಲು ವ್ಯಯಿಸಲಿದ್ದಾರೆ. ದುಡ್ಡು ಭಾರತದ್ದು ಅಧಿಕಾರ ಪಾಕಿಸ್ತಾನದ್ದಾ?” ಎನ್ನುವ ರೀತಿಯ ತರೇವಾರಿ ಕಮೆಂಟುಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣುತ್ತಿವೆ.

 

 

ಇನ್ನೂ ಕೆಲವು ಅಭಿಮಾನಿಗಳು ಶಾರುಖ್ ಅವರನ್ನು ಬೆಂಬಲಿಸುತ್ತಿದ್ದು ಪಾಕಿಸ್ತಾನದಲ್ಲಿರುವ ಯಾರೋ ದೂರದ ಸಂಭಂದಿ ಎಲೆಕ್ಷನ್ ನಲ್ಲಿ ಸ್ಪರ್ಧಿಸಿದರೆ ಶಾರುಖ್ ಅವರ ತಪ್ಪೇನು? ಅವರು ಏನು ಮಾಡೋಕಾಗುತ್ತೆ? ಅವರೇನಾದರೂ ಅಲ್ಲಿ ಹೋಗಿ ಪ್ರಚಾರ ಮಾಡ್ತೀನಿ ಅಂತ ಹೇಳಿದ್ದಾರಾ? ಎಂದು ವಾದ ಮಂಡಿಸುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top