ಮನೋರಂಜನೆ

ಕನ್ನಡ ಸಿನಿಮಾದಲ್ಲಿ ನಟಿಸ್ತಾಳಂತೆ ಮಿಲ್ಕಿ ಬ್ಯೂಟಿ ತಮನ್ನಾ

ತನ್ನ ಸ್ನಿಗ್ಧ ಸೌಂದರ್ಯದಿಂದಲೇ ಭಾಷೆಗಳನ್ನು ಮೀರಿ ಅಭಿಮಾನಿ ಬಳಗ ಹೊಂದಿರುವಾಕೆ ತಮನ್ನಾ ಭಾಟಿಯಾ. ತೆಲುಗು, ತಮಿಳು ಸೇರಿದಂತೆ ಬಹುತೇಕ ಭಾಷೆಗಳಲ್ಲಿ ನಟಿಸಿ ಬಾಲಿವುಡ್ಡಲ್ಲಿಯೂ ಸದ್ದು ಮಾಡಿದ್ದ ತಮನ್ನಾ ಇದೀಗ ಅಕ್ಷರಶಃ ಮಂಕಾಗಿದ್ದಾಳೆ!ಅರೇ, ಆಕೆ ನಟಿಸಿದ್ದ ಬಾಹುಬಲಿಯಂಥಾ ಚಿತ್ರವೇ ವಿಶ್ವಾಧ್ಯಂತ ಭರ್ಜರಿ ಗೆಲುವು ಕಂಡಿದೆ. ಹಾಗಿರೋವಾಗ ಆಕೆ ಮಂಕಾಗಲು ಕಾರಣವೇನೆಂಬ ಪ್ರಶ್ನೆ ಕಾಡೋದು ಸಹಜವೇ. ಆದರೆ ನಿಜಕ್ಕೂ ಈಗ ತಮನ್ನಾಳ ಬೇಡಿಕೆ ಕುಸಿದಿದೆ. ಆಕೆ ಒಂದೊಳ್ಳೆ ಚಿತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿ ಭರ್ಜರಿ ಗೆಲುವೊಂದಕ್ಕಾಗಿ ಹಪಾಹಪಿಸುತ್ತಿದ್ದಾಳೆ.

 

 

ಬಾಹುಬಲಿ ಚಿತ್ರ ಅಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದರೂ ಅದರ ಅಲೆಯಲ್ಲಿ ಕೇಳಿ ಬರುತ್ತಿರೋದು ರಾಜಮೌಳಿ, ಪ್ರಭಾಸ್, ರಾಣಾ ದಗ್ಗುಬಾಟಿ, ರಮ್ಯಾ, ಅನುಷ್ಕಾ ಹೆಸರುಗಳು ಮಾತ್ರ. ಅಪ್ಪಿ ತಪ್ಪಿಯೂ ಬಾಹುಬಲಿ ಚಿತ್ರದ ವಿಚಾರದಲ್ಲಿ ತಮನ್ನಾ ಹೆಸರು ಕೇಳಿ ಬರೋದಿಲ್ಲ. ಇನ್ನು ತಮನ್ನಾ ಮಾತ್ರವೇ ಹೀರೋಯಿನ್ ಆಗಿರೋ ಚಿತ್ರಗಳೆಲ್ಲವೂ ನೀಟಾಗಿ ಗೋತಾ ಹೊಡೆದಿವೆ. ಬಾಲಿವುಡ್ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಈಕೆ ಕಳೆಗುಂದುತ್ತಿದ್ದಾಳೆ. ಇದೆಲ್ಲದರಿಂದಾಗಿ ತಮನ್ನಾ ಬೇಡಿಕೆ ಜರ್ರನೆ ಇಳಿಕೆ ಕಂಡಿದೆ. ಅದರ ಎಫೆಕ್ಟು ಯಾವ ಪರಿ ಇದೆ ಎಂದರೆ, ಒಂದು ಕಾಲದಲ್ಲಿ ಮುಗಿಬಿದ್ದು ಈಕೆಯ ಕಾಲ್‌ಶೀಟ್‌ಗಾಗಿ ಕಾದು ಕೂತಿದ್ದವರೂ ಈಗ ಬೇರೆಡೆ ಗಮನ ಹರಿಸಿದ್ದಾರೆ. ಹೊಸಾ ಅವಕಾಶಗಳು ಸಿಕ್ಕರೂ ಸಂಭಾವನೆ ಅರ್ಧಕ್ಕರ್ಧ ಕಡಿಮೆ ಮಾಡಿ ಪ್ರಪೋಸಲ್ ಮುಂದಿಡುತ್ತಿರೋದರಿಂದ ತಮನ್ನಾ ನಿಜಕ್ಕೂ ಕಂಗಾಲಾಗಿದ್ದಾಳಂತೆ!

 

 

ಇತ್ತೀಚಿಗೆ ಪುನೀತ್ ರಾಜ್ ಕುಮಾರ್ ಜೊತೆಯಲ್ಲಿ ಬಟ್ಟೆ ಅಂಗಡಿವೊಂದರ ಜಾಹೀರಾತುವಿನಲ್ಲಿ ಕಾಣಿಸಿಕೊಂಡಿರೋ ತಮನ್ನಾ ಭರ್ಜರಿ ಗೆಲುವೊಂದಕ್ಕಾಗಿ ಹಪಾಹಪಿಸುತ್ತಿದ್ದಾಳೆ. ತಮನ್ನಾ ಇದೀಗ ರಮೇಶ್ ಅರವಿಂದ್ ನಿರ್ದೇಶನದಲ್ಲಿ ಏಕಕಾಲಕ್ಕೆ ಮೂರು ಭಾಷೆಗಳಲ್ಲಿ ತಯಾರಾಗುತ್ತಿರುವ ಹಿಂದಿಯ ಕ್ವೀನ್ ಚಿತ್ರದ ತೆಲುಗು ಅವತರಣಿಕೆಯಲ್ಲಿ ನಟಿಸುತ್ತಿದ್ದಾಳೆ. ಚಿತ್ರದ ಶೂಟಿಂಗ್ ಗಾಗಿ ಮೈಸೂರಿಗೆ ಬಂದಿಳಿದಿರುವ ತಮನ್ನಾ ತಾನು ಕನ್ನಡ ಚಿತ್ರದಲ್ಲಿ ನಟಿಸೋ ಸಾಧ್ಯತೆಯ ಬಗೆಗೂ ಸುಳಿವು ನೀಡಿದ್ದಾಳೆ. ಈ ವರ್ಷದ ಕೊನೆಯಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸುವುದಾಗಿ ತಮನ್ನಾ ಹೇಳಿದ್ದಾಳಂತೆ. ಈ ಹಿಂದೆ ಕನ್ನಡದ ಅನೇಕ ಸ್ಟಾರ್‌ಗಳ ಚಿತ್ರಕ್ಕೆ ತಮನ್ನಾಗೆ ಅಪ್ರೋಚ್ ಮಾಡಲಾಗಿದ್ದರೂ ಅದ್ಯಾಕೋ ಆಕೆ ನಟಿಸಲು ಒಪ್ಪಿಕೊಂಡಿರಲಿಲ್ಲ.. ಆದರೀಗ ಎಲ್ಲಕಡೆ ತನ್ನ ಬೇಡಿಕೆಯನ್ನು ಜರ್ರನೆ ಕುಸಿದಿಸಿಕೊಂಡಿರುವ ತಮನ್ನಾ ಕನ್ನಡದ ಆಫರನ್ನು ಕಡೆಗಣಿಸದೆ ಕನ್ನಡ ಚಿತ್ರದಲ್ಲಿ ನಟಿಸಲು ನಿರ್ಧರಿಸಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top