ಮನೋರಂಜನೆ

‘ರಾಕಿಂಗ್ ಸ್ಟಾರ್’ಗಾಗಿ ತಯಾರಾಗ್ತಿದೆ ಮತ್ತೊಂದು ಕತೆ- ರ‍್ಯಾಂಬೋ-2 ನಿರ್ದೇಶಕನ ಚಿತ್ರದಲ್ಲಿ ಅಬ್ಬರಿಸಲಿದ್ದಾರೆ ಯಶ್.

ಕನ್ನಡದ ಯಶಸ್ವಿ ನಾಯಕ ನಟರುಗಳಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಮತ್ತೊಬ್ಬ ಸ್ನೇಹಿತನಿಗೆ ತನ್ನ ಕಾಲ್ ಶೀಟ್ ಕೊಟ್ಟಿದ್ದಾರೆ. ಸದ್ಯ ಕಳೆದೆರಡು ಬಹುನಿರೀಕ್ಷಿತ ಕೆಜಿಎಫ್ ಚಿತ್ರದಲ್ಲಿಯೇ ಬ್ಯುಸಿಯಾಗಿರುವ ಯಶ್ ಅದನ್ನು ಬಿಟ್ಟು ಬೇರೆ ಯಾವ ಸಿನಿಮಾಗಳತ್ತ ಮುಖಮಾಡಿಲ್ಲ. ಆದರೆ ಕೆಜಿಎಫ್ ಮುಗಿದ ಕೂಡಲೇ ಸಾಲು ಸಾಲು ಚಿತ್ರಗಲ್ಲಿ ಬ್ಯುಸಿಯಾಗಲಿದ್ದು ಈ ಮೂಲಕ ಕಳೆದೆರಡು ವರ್ಷಗಳಿಂದ ಯಾವುದೇ ಚಿತ್ರಗಳಿಲ್ಲದೆ ನಿರಾಸೆಗೊಂಡಿದ್ದ ತಮ್ಮ ಅಭಿಮಾನಿಗಳಿಗೆ ಸುಗ್ಗಿ ಸಂಭ್ರಮ ನೀಡುತ್ತಿದ್ದಾರೆ.

 

 

ಕೆಜಿಎಫ್ ಮುಗಿದ ಕೂಡಲೇ ಯಶ್ ಅವರು ಹರ್ಷ ನಿರ್ದೇಶನದ ‘ರಾಣಾ’ ಚಿತ್ರದಲ್ಲೂ ಮತ್ತು ಮಫ್ತಿ ಖ್ಯಾತಿಯ ನರ್ತನ್ ನಿರ್ದೇಶನದ ಚಿತ್ರವೊಂದರಲ್ಲೂ ನಟಿಸುತ್ತಾರೆ ಎಂದು ಈ ಮೊದಲೇ ನಿಕ್ಕಿಯಾಗಿರುವುದು ಎಲ್ಲರಿಗೂ ಗೊತ್ತಿರೋ ವಿಚಾರ. ಇದೀಗ ಯಶ್ ಅವರ ಮುಂದಿನ ಚಿತ್ರಗಳ ಸಾಲಿಗೆ ಮತ್ತೊಂದು ಚಿತ್ರ ಸೇರಿಕೊಳ್ಳುತ್ತಿದ್ದು ತಮ್ಮ ಮತ್ತೊಬ್ಬ ಆಪ್ತ ಗೆಳೆಯ ಅನಿಲ್ ಕುಮಾರ್ ನಿರ್ದೇಶನದಲ್ಲಿನ ಚಿತ್ರದಲ್ಲೂ ನಟಿಸಲು ಯಶ್ ಒಪ್ಪಿಗೆ ಕೊಟ್ಟಿದ್ದಾರಂತೆ. ಅನಿಲ್ ಕುಮಾರ್ ಹಲವು ವರ್ಷಗಳಿಂದ ಯಶ್ ಗರಡಿಯಲ್ಲಿ ಗುರುತಿಸಿಕೊಂಡಿದ್ದು ಯಶ್ ಹಿಂದಿನ ಚಿತ್ರ ಸಂತು ಸ್ಟ್ರೈಟ್ ಪಾರ್ವಡ್ ಚಿತ್ರದಲ್ಲೂ ಸಂಭಾಷಣೆ ಬರೆದಿದ್ದಾರೆ.

 

 

ಕಳೆದ ತಿಂಗಳು ಬಿಡುಗಡೆಯಾಗಿ ಸೂಪರ್ ಹಿಟ್ ಆಗಿರುವ ರ್ಯಾಂಬೋ-2 ಚಿತ್ರವನ್ನು ನಿರ್ದೇಶಿಸಿರುವ ಅನಿಲ್ ಕುಮಾರ್ ಸದ್ಯ ಸಕ್ಸಸ್ ಪಡೆದ ಹುಮ್ಮಸ್ಸಿನಲ್ಲಿದ್ದಾರೆ. ರ್ಯಾಂಬೋ ಚಿತ್ರದ ಸಂಭಂದಿಸಿದ ಕೆಲಸಗಳೆಲ್ಲವೂ ಮುಕ್ತಾಯಗೊಂಡಿರುವುದರಿಂದ ಅವರೀಗ ಯಶ್ ಅವರ ಚಿತ್ರದ ಕಡೆ ಸಂಪೂರ್ಣ ಗಮನ ಹರಿಸಿದ್ದರಂತೆ. ಯಶ್ ಅವರಿಗಾಗಿಯೇ ವಿಶೇಷವಾದ ಕತೆಯನ್ನು ಹೊಸೆಯುತ್ತಿದ್ದರಂತೆ. ಆ ಕಡೆ ಹರ್ಷ ಮತ್ತು ನರ್ತನ್ ಅವರೂ ಕೂಡ ಯಶ್’ಗಾಗಿ ಕತೆ ರೆಡಿಮಾಡಿಕೊಂಡು ಚಿತ್ರಕತೆ ಹೆಣೆಯುತ್ತಿದ್ದಾರೆ. ಈ ಮೂರು ಚಿತ್ರಗಲ್ಲಿ ಮೊದಲು ಯಾವ ಚಿತ್ರ ಪ್ರಾರಂಭವಾಗುತ್ತದೆ, ಯಾರ ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎಂಬ ಯಾವ ಮಾಹಿತಿಗಳು ಇನ್ನೂ ಬಹಿರಂಗವಾಗಿಲ್ಲ.

ಒಟ್ಟಿನಲ್ಲಿ ಕೆಜಿಎಫ್ ಚಿತ್ರ ಮುಗಿದ ನಂತರ ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಲೆಕ್ಕಾಚಾರದಿಂದ ಮೂರು ನಿರ್ದೇಶಕರಿಗೂ ಒಪ್ಪಿಗೆ ಕೊಡಲಾಗಿದೆ ಎಂದು ಯಶ್ ಆಪ್ತ ವಲಯ ಹೇಳುತ್ತಿದ್ದು ಯಶ್ ಚಿತ್ರಗಳಿಲ್ಲದೆ ಬೀಕರ ಬರಗಾಲ ಅನುಭವಿಸುತ್ತಿದ್ದ ಅಭಿಮಾನಿಗಳಿಗೆ ಶೀಘ್ರವೇ ಅತಿವೃಷ್ಟಿ ಕಣ್ಮುಂದೆ ಕಾಣಿಸಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top