fbpx
ಸಿನಿಮಾ

ಒಂದು ಕಾಲದ ಟಾಪ್ ನಟಿ ವಿಜಯ ಲಕ್ಷ್ಮಿ ಅವರ ಕುಟುಂಬಕ್ಕೆ ನಟಿ ಜಯಪ್ರದ ಅವರ ಅಣ್ಣ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ.

ಒಂದು ಕಾಲದಲ್ಲಿ ಸ್ಟಾರ್ ನಟರಾದ ವಿಷ್ಣುವರ್ಧನ್ ,ರಮೇಶ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಖ್ಯಾತ ನಟ ಸಂಸದ ಬಿ.ಸಿ ಪಾಟೀಲ್ ರಾಮ್ ಕುಮಾರ್ ಹಾಗೂ ಜಗ್ಗೇಶ್ ಅಂತಹ ಮೇರು ನಟರೊಂದಿಗೆ ನಟಿಸಿ, ಆನಂತರ ಕಿರುತೆರೆ ಕಾರ್ಯಕ್ರಮ ‘ಬಂಗಾರದ ಬೇಟೆ’ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದ ಸ್ಯಾಂಡಲ್ವುಡ್ನ ಚೆಂದುಳ್ಳಿ ಚೆಲುವೆ ವಿಜಯಲಕ್ಷ್ಮಿ .

ವಿಷ್ಣುವರ್ಧನ್ ಅವರೊಂದಿಗೆ ಡುಯೆಟ್ ಹಾಡಿದ ‘ಸೇವಂತಿಯೆ.. ಸೇವಂತಿಯೆ..’ ಹಾಡನ್ನು ಕನ್ನಡ ಪ್ರೇಕ್ಷಕನು ಹೇಗೆ ಮರೆಯಲು ಸಾಧ್ಯ, ಹಾಗೆಯೇ ನಾಗಮಂಡಲದಲ್ಲಿ ಹಳ್ಳಿಯ ಮುಗ್ಧ ಚೆಲುವೆಯಾಗಿ ನೈಜ ಅಭಿನಯವನ್ನು ತೋರಿದ್ದ ವಿಜಯಲಕ್ಷ್ಮಿ ಅವರು ಈಗಲೂ ಸಹ ಸ್ಯಾಂಡಲ್ವುಡ್ ಪ್ರೇಕ್ಷಕರ ಕಣ್ಣಲ್ಲಿ ಹಾಗೆಯೇ ಮುದ್ದು ಚೆಂದುಳ್ಳಿ ಚೆಲುವೆಯಂತೆ ಇದ್ದಾರೆ .

 

 

ಆದರೆ ಕಳೆದ ಹದಿನೈದು ವರ್ಷಗಳಿಂದ ವಿಜಯಲಕ್ಷ್ಮಿ ಜೀವನದಲ್ಲಿ ನಡೆದಿದ್ದು ದುರಂತಗಳ ಸಾಲೇ ಸಾಲು, ಒಂದು ಕಾಲಕ್ಕೆ ಸ್ಯಾಂಡಲ್ವುಡ್ನ ಖ್ಯಾತ ನಟಿಯಾಗಿ ಮಿಂಚಿದ್ದ ವಿಜಯಲಕ್ಷ್ಮಿ ಬಾಳಲ್ಲಿ ಬಿರುಗಾಳಿಯೇ ಎದ್ದಿದೆ ಆಕೆಯ ವೈಯಕ್ತಿಕ ಜೀವನ ಹಳ್ಳ ಹಿಡಿದು ಕೂತಿದೆ .

ಕೆಲ ತಿಂಗಳ ಹಿಂದೆ ಅನೇಕ ನ್ಯೂಸ್ ಚಾನೆಲ್ ಗಳಲ್ಲಿ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ನಟಿ ವಿಜಯಲಕ್ಷ್ಮಿ ಸತ್ತು ಹೋಗಿದ್ದಾರೆ ಎಂಬ ಗಾಸಿಪ್ ಸುದ್ದಿಗಳು ಹರಡಿದ್ದವು ಹಾಗೆಯೇ ಆಕೆಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಡಿದ್ದವು.

ನಟಿ ವಿಜಯಲಕ್ಷ್ಮಿ ಮೂಲತಃ ಬೆಂಗಳೂರಿನಲ್ಲಿ ಓದಿರುವವರು ತಮ್ಮ ಸಿನಿಮಾ ಕನ್ನಡದಲ್ಲಿ ಶುರು ಮಾಡಿ ಆ ನಂತರ ಅವಕಾಶಗಳಿಲ್ಲದೆ ತಮಿಳಿಗೆ ಹೋಗಿದ್ದವರು , ವಿಜಯಲಕ್ಷ್ಮಿ ಅವರಿಗೆ ಉಷಾ ಎಂಬ ಅಕ್ಕ ಕೂಡ ಇದ್ದಾರೆ ಮನೆಯಲ್ಲಿ ಈಗ ದುಡಿಯುತ್ತಿರುವವರು ವಿಜಯಲಕ್ಷ್ಮೀ ಒಬ್ಬರೇ .

ಸುವರ್ಣ ನ್ಯೂಸ್ ವಾಹಿನಿಗೆ ವಿಜಯಲಕ್ಷ್ಮಿ ಅವರು ಕೊಟ್ಟಿರುವ ಸಂದರ್ಶನದಲ್ಲಿ ಆಕೆ ಅನುಭವಿಸಿದ ಕಷ್ಟಗಳನ್ನು ಪರಿಪರಿಯಾಗಿ ಹೇಳಿಕೊಂಡಿದ್ದಾರೆ , ವಿಜಯಲಕ್ಷ್ಮಿ ಅವರ ಸೋದರಿ ಉಷಾ ಮದುವೆಯಾಗಿರುವುದು ಖ್ಯಾತ ನಟಿ ಜಯಪ್ರದಾ ಅವರ ಸಹೋದರ ರಾಜಬಾಬು ಅವರನ್ನು ,ಉಷಾ ಕೂಡ ಕನ್ನಡ ಚಲನ ಚಿತ್ರಗಳಲ್ಲಿ ಸಣ್ಣ ಸಣ್ಣ ಪಾತ್ರಗಳನ್ನು ಮಾಡಿ ಬೆಳೆದವರೇ .

1999ರಲ್ಲಿ ರಾಜ ಬಾಬುವನ್ನು ಮದುವೆಯಾದ ಉಷಾ ಆ ನಂತರ ಒಂದು ವರ್ಷದೊಳಗೆ ಸಾಮ್ರಾಟ್ ಎಂಬ ಗಂಡು ಮಗುವಿಗೆ ಜನ್ಮವನ್ನು ನೀಡಿರುತ್ತಾರೆ, ಆದರೆ ಅತ್ತೆ ಮಾವನ ಕಿರುಕುಳದಿಂದ ಬೇಸತ್ತಿದ್ದ ಉಷಾ ತನ್ನ ಗಂಡನ ಸಹಾಯಕ್ಕಾಗಿ ಬಯಸಿದ್ದಳು ಆದರೆ ಆತ ಕೂಡ ಆಕೆಯ ಸಹಾಯಕ್ಕೆ ಬಂದಿಲ್ಲ ಬದಲಾಗಿ ವರದಕ್ಷಿಣೆಗಾಗಿ ಆತ ಪರಿಪರಿಯಾಗಿ ಉಷಾ ಅವರನ್ನು ಪೀಡಿಸಿದ್ದ, ಆ ನಂತರ ದೈಹಿಕ ಹಲ್ಲೆಯನ್ನು ಉಷಾ ಅವರ ಮೇಲೆ ನಡೆಸಿದ ಈ ಕಾರಣಕ್ಕಾಗಿ ಉಷಾ ಅತ್ತೆ ಮಾವನ ಮನೆಯನ್ನು ತೊರೆದು ತಂದೆ ಮನೆಗೆ ಬಂದು ಸೇರಿಕೊಂಡಿದ್ದರು ಅಷ್ಟರಲ್ಲಿಯೇ ವಿಜಯಲಕ್ಷ್ಮಿ ಅವರ ಸಿನಿಮಾ ಕೆರಿಯರ್ ಕೂಡ ಅಷ್ಟು ಚೆನ್ನಾಗಿ ಇರಲಿಲ್ಲ .

 

 

ಜಯಪ್ರದಾ ಸೋದರ ರಾಜಬಾಬು ಕೊಟ್ಟ ಕಷ್ಟಗಳು ಅಷ್ಟಿಷ್ಟಲ್ಲ ವಿಜಯಲಕ್ಷ್ಮಿ ಅವರ ತಂದೆ ತೀರಿ ಹೋದ ಮೇಲೆ ಅಂತ್ಯಸಂಸ್ಕಾರಕ್ಕಾಗಿ ಭಾವನಿಗೆ ಕಾದುಕೊಂಡು ಕುಳಿತಿದ್ದಾರೆ , ವಿಜಯಲಕ್ಷ್ಮಿ ಆ ಸಮಯದಲ್ಲಿ ಫೋನ್ ಮಾಡಿದರೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಇಟ್ಟುಕೊಂಡಿದ್ದಾರೆ ,ಆತ ಮಗುವನ್ನು ತನ್ನ ವಶಕ್ಕೆ ಪಡೆದು 13 ವರ್ಷಗಳಾಯ್ತು, ಆ ಮಗುವಿನ ಮುಖ ನೋಡಿಯೆ ಇಲ್ಲವಂತೆ, ಅಷ್ಟು ತೊಂದರೆಗಳನ್ನು ಕೊಟ್ಟಿದ್ದಾನೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ವಿಜಿ .

 

 

ಇತ್ತ ವಿಜಯಲಕ್ಷ್ಮಿ ಶೂಟಿಂಗ್ ಎಂದು ಔಟ್ಡೋರ್ನಲ್ಲಿ ಇದ್ದರೆ ಭಾವವನ್ನು ಜಗಳ ಮಾಡುತ್ತಿದ್ದರಂತೆ ಆಗ ಆಕೆ ಒಂದು ಕಡೆ ಶೂಟಿಂಗ್ ಇನ್ನೊಂದು ಕಡೆ ಕಮಿಷನರ್ ಆಫೀಸ್ ಈ ರೀತಿಯಾಗಿ ಎರಡು ಕಡೆ ಸಿಲುಕಿ ಅಲೆದಾಡಿದ್ದಾರೆ ,ಆತ ಕೊಟ್ಟ ಟಾರ್ಚರ್ ಅಷ್ಟಿಷ್ಟಲ್ಲ .

ವಿಜಯಲಕ್ಷ್ಮಿ ಅವರ ತಂದೆ ತೀರಿಕೊಂಡ ಮೇಲೆ ವಿಜಯಲಕ್ಷ್ಮಿ ಆರ್ಥಿಕ ಪರಿಸ್ಥಿತಿ ಹಾಗೂ ಬದುಕು ಅಸ್ತವ್ಯಸ್ತವಾಗಿತ್ತು ಜೊತೆಗೆ ಅಕ್ಕ ಉಷಾಗೆ ಕಿಡ್ನಿ ಸಮಸ್ಯೆ ಕೂಡ ಕಾಡಿತ್ತು ,ಸದ್ಯಕ್ಕೆ ಸಿನಿಮಾ ಅಥವಾ ಸೀರಿಯಲ್ ನಲ್ಲಿ ಯಾವುದೇ ಅವಕಾಶವಿಲ್ಲದೆ ವಿಜಯಲಕ್ಷ್ಮಿ ಪರಿಪರಿಯಾಗಿ ನೊಂದಿದ್ದಾರೆ ,ಆಕೆ ಸಹಾಯಕ್ಕಾಗಿ ನಿರೀಕ್ಷಿಸುತ್ತಿದ್ದಾರೆ ವಿಜಯಲಕ್ಷ್ಮಿ ಅವರ ಅಕ್ಕ ಉಷಾ ಅವರಿಗೆ ಕಿಡ್ನಿ ಸಮಸ್ಯೆಯಿಂದ ಡಯಾಲಿಸಿಸ್ ಮಾಡಬೇಕಾದ ಅವಶ್ಯಕತೆ ಇದೆ .

 

 

ಆಪರೇಷನ್ ಮಾಡಿಸಬೇಕೆಂದು ಆಪರೇಷನ್ ಥೇಟರ್ ವರೆಗೂ ಕರೆದುಕೊಂಡು ಹೋಗಿ ವಾಪಸ್ ಕಳುಹಿಸಿದರು, ಆಪರೇಷನ್ ಮಾಡಿಸಲು ಸಹ ವಿಜಯಲಕ್ಷ್ಮಿ ಅವರ ಬಳಿ ಹಣವಿಲ್ಲ, ಆಪರೇಷನ್ ಮಾಡಿ ನಿಮ್ಮ ಸಾಲವನ್ನು ತೀರಿಸುತ್ತೇನೆ ಎಂದು ಪರಿಪರಿಯಾಗಿ ಬೇಡಿಕೊಂಡರೂ ಯಾರೂ ಸಹಾಯ ಮಾಡಲಿಲ್ಲ ಅಕ್ಕನ ಜೀವನದಲ್ಲಿ ನೋಡಿದಷ್ಟು ಕಷ್ಟಗಳನ್ನು ನಾನು ಎಲ್ಲೂ ನೋಡಿಲ್ಲ ಹೀಗಿರುವಾಗ ನಾನು ಮದುವೆಯಾಗಿ ಹೇಗೆ ಸಂತೋಷವಾಗಿ ಇರಲಿ ಎಂದು ಪ್ರಶ್ನೆ ಮಾಡುತ್ತಾರೆ ವಿಜಯ ಲಕ್ಷ್ಮಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top