fbpx
ಸಿನಿಮಾ

ಸೂರ್ಯವಂಶದ ಮುದ್ದು ಸೇವಂತಿ ವಿಜಯಲಕ್ಷ್ಮಿ ‘ಚಪ್ಪಲಿ ವಿಜಿ’ ಆಗಿದ್ದು ಹೇಗೆ ಗೊತ್ತಾ

ಮಾಡರ್ನ್ ಹುಡುಗಿಯಾದ್ರು ಸೈ ,ಹಳ್ಳಿ ಹುಡುಗಿಯಾದರೂ ಸೈ ಯಾವುದೇ ಪಾತ್ರವಾದರೂ ಅಚ್ಚುಕಟ್ಟಾಗಿ ಜೀವ ತುಂಬುತ್ತಿದ್ದ ನಟಿ ಜಯಲಕ್ಷ್ಮಿ, ಒಂದು ಕಾಲದಲ್ಲಿ ಸ್ಟಾರ್ ನಟರಾದ ವಿಷ್ಣುವರ್ಧನ್ ,ರಮೇಶ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಖ್ಯಾತ ನಟ ಸಂಸದ ಬಿ.ಸಿ ಪಾಟೀಲ್ ರಾಮ್ ಕುಮಾರ್ ಹಾಗೂ ಜಗ್ಗೇಶ್ ಅಂತಹ ಮೇರು ನಟರೊಂದಿಗೆ ನಟಿಸಿ, ಆನಂತರ ಕಿರುತೆರೆ ಕಾರ್ಯಕ್ರಮ ‘ಬಂಗಾರದ ಬೇಟೆ’ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದ ಸ್ಯಾಂಡಲ್ವುಡ್ನ ಚೆಂದುಳ್ಳಿ ಚೆಲುವೆ ವಿಜಯಲಕ್ಷ್ಮಿ .

ವಿಷ್ಣುವರ್ಧನ್ ಅವರೊಂದಿಗೆ ಡುಯೆಟ್ ಹಾಡಿದ ‘ಸೇವಂತಿಯೆ.. ಸೇವಂತಿಯೆ..’ ಹಾಡನ್ನು ಕನ್ನಡ ಪ್ರೇಕ್ಷಕನು ಹೇಗೆ ಮರೆಯಲು ಸಾಧ್ಯ, ಹಾಗೆಯೇ ನಾಗಮಂಡಲದಲ್ಲಿ ಹಳ್ಳಿಯ ಮುಗ್ಧ ಚೆಲುವೆಯಾಗಿ ನೈಜ ಅಭಿನಯವನ್ನು ತೋರಿದ್ದ ವಿಜಯಲಕ್ಷ್ಮಿ ಅವರು ಈಗಲೂ ಸಹ ಸ್ಯಾಂಡಲ್ವುಡ್ ಪ್ರೇಕ್ಷಕರ ಕಣ್ಣಲ್ಲಿ ಹಾಗೆಯೇ ಮುದ್ದು ಚೆಂದುಳ್ಳಿ ಚೆಲುವೆಯಂತೆ ಇದ್ದಾರೆ .

 

 

ಅಂದಿನ ಕಾಲಕ್ಕೆ ಕ್ಲಾಸಿ ಹಿಟ್ ನಾಗಮಂಡಲದಲ್ಲಿ ನಟಿಸಿದ ವಿಜಯಲಕ್ಷ್ಮಿಗೆ ಬಹಳ ಖ್ಯಾತಿಯ ಜೊತೆಗೆ ಅನೇಕ ಚಿತ್ರಗಳಿಂದ ಆಫರ್ ಗಳು ಸಹ ಬರಲು ಶುರುವಾಗಿತ್ತು, ದಿಗ್ಗಜರಾದ ವಿಷ್ಣುವರ್ಧನ್ ಅವರೊಂದಿಗೆ ಸಹ ಹೆಜ್ಜೆ ಹಾಕಿದರು ನಟಿ ವಿಜಯಲಕ್ಷ್ಮಿ ಹೀಗಿರುವಾಗ ಅನೇಕ ಕ್ಲಾಸಿ ಹಾಗೂ ಮಾಡರ್ನ್ ಲುಕ್ ನಿಂದ ಪ್ರೇಕ್ಷಕರನ್ನು ಸೂರೆಗೊಂಡ ವಿಜಯಲಕ್ಷ್ಮಿ ಅವರಿಗೆ ವಿವಾದವೊಂದು ಬೆಂಬಿಡದಂತೆ ಕಾಡಿತ್ತು.

ಸುವರ್ಣ ನ್ಯೂಸ್ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ ತಮ್ಮ ನೋವನ್ನು ತಮ್ಮ ವೃತ್ತಿ ಜೀವನ ಹಾಗೂ ಖಾಸಗಿ ಜೀವನದ ಅನೇಕ ತೊಂದರೆಗಳನ್ನು ಪರಿಪರಿಯಾಗಿ ಹೇಳಿಕೊಂಡಿದ್ದಾರೆ , ನಟಿ ವಿಜಯಲಕ್ಷ್ಮಿ ,’ನಾಗಮಂಡಲ’ ಚಿತ್ರದಲ್ಲಿ ಅಭಿನಯಿಸಲು ಶುರು ಮಾಡಿದಾಗ ವಿಜಯಲಕ್ಷ್ಮಿ ಅವರಿಗೆ ಕೇವಲ ಹದಿನೈದು ವರ್ಷ ಆಗಾಗಲೇ ಆಫರ್ ಗಳು ಆಕೆಯನ್ನು ಹುಡುಕಿಕೊಂಡು ಬಂದಿದ್ದವು.

ಅಷ್ಟು ದಿನ ಗೌರವದಿಂದ ವಿಜಯಲಕ್ಷ್ಮಿ ಹಾಗೂ ವಿಜಿ ಎಂದು ಕರೆಯುತ್ತಿದ್ದ ಅನೇಕರು ಆಕೆಯನ್ನು ಚಪ್ಪಲಿ ವಿಜಯಲಕ್ಷ್ಮಿ ಎಂದು ಕರೆಯಲು ಶುರು ಮಾಡಿದರು ,ವಿಜಯಲಕ್ಷ್ಮಿ ಖ್ಯಾತ ನಟರೊಬ್ಬರಿಗೆ ಚಪ್ಪಲಿಯಲ್ಲಿ ಹೊಡೆದು ಅವಮಾನ ಮಾಡಿದ್ದಾರೆ ಎಂದು ಆ ಕಾಲದ ಪತ್ರಿಕೆಗಳು ಹೆಡ್ ಲೈನ್ ಮಾಡಿ ನ್ಯೂಸ್ ಅನ್ನು ಹರಿಯಬಿಟ್ಟಿದ್ದು ಈ ವಾರ್ತೆಯನ್ನು ಕೇಳಿದ ವಿಜಯಲಕ್ಷ್ಮಿ ಕಂಗಾಲಾಗಿ ಹೋಗಿದ್ದರು ಅದೊಂದು ಸುಳ್ಳು ಸುದ್ದಿಯಾಗಿತ್ತು ಆದರೆ ಈ ವಿವಾದ ಚಿತ್ರರಂಗದ ತುಂಬೆಲ್ಲ ತುಂಬಿ ವಿಜಯಲಕ್ಷ್ಮಿ ಅವರ ಹೆಸರನ್ನು ಹಾಳು ಮಾಡಿತ್ತು .

 

 

ಈ ಒಂದು ವಿವಾದ ಸಾಕಾಗಿತ್ತು ಆಕೆ ಕನ್ನಡ ಇಂಡಸ್ಟ್ರಿಯನ್ನು ಬಿಟ್ಟು ತಮಿಳು ಇಂಡಸ್ಟ್ರಿಯನ್ನು ಸೇರಿಬಿಟ್ಟಿದ್ದರು ಆಕೆಯ ಕೆರಿಯರ್ ಸಂಪೂರ್ಣವಾಗಿ ನಾಶವಾಗಿತ್ತು ಕನ್ನಡದಲ್ಲಿ ಆಕೆಗೆ ಅವಕಾಶಗಳು ಸಿಗಲಿಲ್ಲ, ಈ ಒಂದು ವಿವಾದ ಆಕೆಯನ್ನು ಕನ್ನಡ ಚಿತ್ರರಂಗದಿಂದ ದೂರ ಮಾಡಿಬಿಟ್ಟಿತು .

ದೊಡ್ಡ ನಟರಿಗೆ ಚಪ್ಪಲಿಯಲ್ಲಿ ಹೊಡೆದೆ ಎಂಬ ವಿಷಯ ಹೇಗೆ ಹರಡಿತ್ತು ಗೊತ್ತಿಲ್ಲ ಆದರೆ ನಾನು ಜಗ್ಗೇಶ್ ಅವರೊಂದಿಗೆ ‘ಮಾತಿನ ಮಲ್ಲ’ ಹಾಗೂ ‘ರಂಗಣ್ಣ’ ಸಿನಿಮಾದಲ್ಲಿ ನಟಿಸಿ ಅವರ ಆಶೀರ್ವಾದವನ್ನು ಪಡೆದುಕೊಂಡು ಬಂದಿದ್ದೇ ಆದರೆ ಬೆಳಗ್ಗೆದ್ದು ನೋಡಿದರೆ ನ್ಯೂಸ್ ಪೇಪರ್ ತುಂಬೆಲ್ಲಾ ಇದೇ ವಿವಾದ ಬಂದಿತ್ತು ನನಗೆ ಬಹಳ ಭಯವಾಗಿತ್ತು ಯಾರೊಂದಿಗೆ ಮಾತನಾಡಬೇಕು ಬೇಡ ಎಂಬ ವಿಶ್ವಾಸವನ್ನು ನಾನು ಕಳೆದುಕೊಂಡು ಬಿಟ್ಟಿದ್ದೆ .

 

 

ಈ ಒಂದು ವಿವಾದ ನನ್ನ ಮನಸ್ಸಿಗೆ ಭಾರಿ ಘಾಸಿಯನ್ನು ಉಂಟು ಮಾಡಿತ್ತು ಆಗಿನ ಕಾಲದಲ್ಲಿ ಈಗಿನ ರೀತಿಯ ಹಾಗೆ ಪ್ರೆಸ್ ಹಾಗೂ ಮೀಡಿಯಾಗಳು ಅಷ್ಟಾಗಿ ಇರಲಿಲ್ಲ ಅನೇಕರು ಈ ವಿಷಯದ ಬಗ್ಗೆ ಮಾತಾಡಬೇಡ ಸುಮ್ಮನೆ ದೂರ ಇದ್ದುಬಿಡಿ ಎಂದು ನನಗೆ ಸಲಹೆ ಸಹ ಕೊಟ್ಟಿದ್ದರು, ಆಗ ನಾನು ಮಾತನಾಡಿದ್ದರೆ ಇಂದು ನನ್ನ ಕುಟುಂಬಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಕನ್ನಡದಲ್ಲಿ ಆಫರ್ ಗಳು ಇಲ್ಲದ ಕಾರಣವೇ ನಾನು ತಮಿಳು ಚಿತ್ರರಂಗಕ್ಕೆ ಕಾಲಿಟ್ಟೆ ಇದೇ ವಿಷಯವಾಗಿ ನಾನು ಅನೇಕ ವರ್ಷಗಳು ಅತ್ತಿದ್ದೇನೆ ಇನ್ನು ನನಗೆ ಇದನ್ನು ಭರಿಸುವ ಶಕ್ತಿ ಇಲ್ಲ .

ಇಂದು ಡಾ ರಾಜಕುಮಾರ್ ಹಾಗೂ ಪಾರ್ವತಮ್ಮನವರು ಇದ್ದಿದ್ದರೆ ನನಗೆ ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ, ಅನೇಕ ಖ್ಯಾತ ನಟರೊಂದಿಗೆ ನಾನು ನಟಿಸಿರುವುದೇ ನನ್ನ ಪುಣ್ಯ ,ಹಿರಿಯ ನಟರಾದ ಜಗ್ಗೇಶ್, ಶಿವಣ್ಣ ,ರಾಘಣ್ಣ, ಪುನೀತ್ ರಾಜ್ ಕುಮಾರ್ ಇವರೆಲ್ಲರನ್ನು ನಾನು ಬೇಡಿಕೊಳ್ಳುತ್ತೇನೆ ನನ್ನನ್ನು ದೂರ ತಳ್ಳಬೇಡಿ, ನನಗೆ ಭರಿಸುವ ಶಕ್ತಿ ಇಲ್ಲ , ನನ್ನನ್ನು ನಿಮ್ಮಲ್ಲಿ ಒಬ್ಬಳಾಗಿ ಸ್ವೀಕರಿಸಿ ಎಂದು ವಿಜಯಲಕ್ಷ್ಮಿ ಚಾನೆಲ್ ಮುಂದೆ ಗೋಳಾಡಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top