fbpx
ಮನೋರಂಜನೆ

ಸಾಹಸಸಿಂಹನ ಅಳಿಯ ಅನಿರುದ್ದ್ ಈಗ ನಿರೂಪಕ.

ಸಾಹಸಸಿಂಹ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಇದೀಗ ಟಿವಿ ಕಾರ್ಯಕ್ರಮವೊಂದರ ನಿರೂಪಕರಾಗುತ್ತಿದ್ದಾರೆ. ಕಳೆದ ವರ್ಷ ತೆರೆ ಕಂಡಿದ್ದ ರಾಜಾಸಿಂಹ ಚಿತ್ರದ ಹೀನಾಯ ಸೋಲಿನ ಬಳಿಕ ಚಿತ್ರರಂಗದಲ್ಲಿ ಅವಕಾಶಗಳು ಸಿಗುತ್ತಿಲ್ಲವಾ? ಎಂದು ಭಾವಿಸಬೇಡಿ. ಏಕೆಂದರೆ ಅನಿರುದ್ದ್ ನಿರೂಪಕರಾಗುತ್ತಿರುವುದು ನಿಜಜೀವನದಲ್ಲಿ ಅಲ್ಲ ಬದಲಾಗಿ ಸಿನಿಮಾವೊಂದರಲ್ಲಿ.

 

 

ಅನಿರುದ್ಧ್ ಈಗ ‘ಅಭಯಹಸ್ತ’ ಎಂಬ ಸಿನಿಮಾದಲ್ಲಿ ಮುಖ್ಯ ಪಾತ್ರವನ್ನು ಮಾಡುತ್ತಿದ್ದು ಇದರಲ್ಲಿ ಅವರು ನ್ಯೂಸ್ ಚಾನೆಲ್ ಒಂದರ ಸುದ್ದಿವಾಚಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈಗಾಗಲೆ ಈ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದ್ದು ಶೀಘ್ರದಲ್ಲೇ ಚಿತ್ರ ತೆರೆಕಾಣಲಿದೆ. ನವೀನ್ ಪಿ.ಬಿ ನಿರ್ದೇಶನದ ಈ ಚಿತ್ರ ತನ್ನ ವಿಭಿನ್ನ ಪೋಸ್ಟರ್ ಮೂಲಕವೇ ಗಮನ ಸೆಳೆದಿದ್ದು ಪ್ರೇಕ್ಷಕರಲ್ಲಿ ಒಂದು ರೀತಿಯ ಕುತೂಹಲ ಹೂತುಹಾಕಿದೆ.

ರಾಜೇಂದ್ರಸೂರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಾ||ಪಿ.ಸತೀಶ್‍ಕುಮಾರ್ ಮೆಹ್ತ ಹಾಗೂ ನವೀನ್ ಪಿ.ಬಿ ಅವರು ನಿರ್ಮಿಸುತ್ತಿದ್ದು ನಾಯಕರಾಗಿ `ಪಾರು ಐ ಲವ್ ಯು` ಖ್ಯಾತಿಯ ರಂಜನ್ ನಟಿಸಿದ್ದಾರೆ.ಈ ಚಿತ್ರದ ಹಾಡುಗಳನ್ನು ಸೆಂಚುರಿ ಸ್ಟಾರ್ ಶಿವರಾಜಕುಮಾರ್, ನವೀನ್‌ಕೃಷ್ಣ ಹಾಗೂ ಮನೋಜವಂ ಹಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top