ಸಿನಿಮಾ

ಫ್ಯಾನ್ ಒಬ್ಬರು ಮಾಡಿಸಿರೋ ಮದುವೆ ಕಾರ್ಡ್ ನೋಡಿ ಖುಷಿಯಾದ ಪವರ್ ಸ್ಟಾರ್ ಪುನೀತ್

ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅಭಿಮಾನಿಗಳೇನು ಕಡಿಮೆ ಇಲ್ಲ ಈ ಅಭಿಮಾನವನ್ನು ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಪುನೀತ್ ಅವರಿಗೆ ತೋರಿಸುತ್ತಲೇ ಬಂದಿದ್ದಾರೆ, ಹೀಗೆ ಅಭಿಮಾನಿಯೊಬ್ಬರು ವಿಶೇಷ ರೀತಿಯಲ್ಲಿ ಅಪ್ಪು ಅವರ ಮೇಲಿನ ಅಭಿಮಾನವನ್ನು ತೋರಿಸಲು ಮುಂದಾಗಿದ್ದಾರೆ.

ಮೂಲತಃ ಮಾಗಡಿ ಅವರಾದ ನವೀನ್ ತಮ್ಮ ಮದುವೆ ಆಮಂತ್ರಣ ಪತ್ರವನ್ನು ವಿಶೇಷ ರೀತಿಯಲ್ಲಿ ಡಿಸೈನ್ ಮಾಡಿಸಿದ್ದಾರೆ ಸದ್ಯಕ್ಕೆ ಈ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ .

ಪುನೀತ್ ರಾಜ್ ಕುಮಾರ್ ಅವರ ಚಿತ್ರದ ಟೈಟಲ್ ಗಳನ್ನು ಈ ಆಮಂತ್ರಣ ಪತ್ರಿಕೆಯಲ್ಲಿ ಬಳಸಿಕೊಳ್ಳಲಾಗಿದೆ ಇದರ ಒಕ್ಕಣೆ ಹೀಗಿದೆ.

 

 

.‘ಆಕಾಶ್’ ವೇ ಚಪ್ಪರ, ‘ಪೃಥ್ವಿ’ ಯೇ ಹಸೆಮಣೆ, ಮದುವೆಯೇ ‘ಮಿಲನ’, ಈ ನವೀನ ‘ಮೈತ್ರಿ’ ಬದುಕಿಗೆ ‘ಹೊಸ ಬೆಳಕು’ ಪ್ರೀತಿ. ‘ಪರಮಾತ್ಮ’ನ ಸ್ಮರಿಸುತ್ತಾ, ನಮ್ಮೆಲ್ಲರ ‘ಅಭಿ’ಮಾನದ ಆಶೀರ್ವಾದ ಬಯಸುತ್ತಿರುವ ‘ಎರಡು ನಕ್ಷತ್ರಗಳು’ ನವೀನ್ ಕುಮಾರ್, ರಶ್ಮಿ ‘ಬಿಂದಾಸ್’ ಆಗಿ ಬನ್ನಿ. ಆರತಕ್ಷತೆಯ ‘ಅಪ್ಪು’ಗೆ ಮೂಹೂರ್ತದ ‘ಪವರ್’

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಈ ಆಮಂತ್ರಣ ಪತ್ರವನ್ನು ಕಂಡು ಪುನೀತ್ ರಾಜಕುಮಾರ್ ಅವರು ಹದಿನೆಂಟನೇ ತಾರೀಖು ನಡೆಯಲಿರುವ ನವೀನ್ ಹಾಗೂ ರಶ್ಮಿ ಅವರ ಮದುವೆಗೆ ಶುಭ ಹಾರೈಸಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top