ಮನೋರಂಜನೆ

ದರ್ಶನ್ ತೂಗುದೀಪ್ ಹೆಸರಲ್ಲಿ ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್.

ಸೋಷಿಯಲ್ ಮೀಡಿಯಾ, ಇಂಟರ್ ನೆಟ್ ಎನ್ನುವುದು ಈವತ್ತಿಗೆ ಎಲ್ಲೇ ಮೀರಿ ಬೆಳೆದುಕೊಂಡಿದೆ. ಅದರಿಂದ ಅದೇನೇನು ಒಳ್ಳೆಯದ್ದಾಗುತ್ತಿದೆಯೋ… ಆದರೆ ಕೆಟ್ಟದ್ದರ ಪ್ರಮಾಣವೇ ಹೆಚ್ಚು.. ಏಕಮುಖವಾಗಿ ಆಲೋಚನೆ ಮಾಡುವ ಕೆಲಸಿಲ್ಲದ ಕೆಲವು ಕಿಡಿಗೇಡಿಗಳು ತಮಗೆ ಹಿಡಿಸದ ರಾಜಕೀಯ ವ್ಯಕ್ತಿಗಳನ್ನು ಒಳಗೊಂಡಂತೆ ನಾನಾ ಖ್ಯಾತನಾಮರ ವಿರುದ್ಧ ಸೊಂಟದ ಕೆಳಗಿನ ಭಾಷೆಯಲ್ಲಿ ಕೊಳಕು ಕಾರುತ್ತಾ ವಿಕೃತಾನಂದ ಪಡುವುದನ್ನೇ ಕಸುಬಾಗಿಸಿಕೊಂಡಿದ್ದಾರೆ.. ಇಂಥ ಕೆಲ ಕ್ರಿಮಿಗಳು ತಮಗಾಗದವರ ಮಾನ ಕಳೆಯಲು ದುರುಪಯೋಗಪಡಿಸಿಕೊಳ್ಳುವುದು ಸೆಲೆಬ್ರೆಟಿಗಳ ಹೆಸರು. ಖ್ಯಾತ ಸೆಲೆಬ್ರೆಟಿಗಳ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ತಮ್ಮ ತೀಟೆ ತೀರಿಸಿಕೊಳ್ಳಲು ಮುಂದಾಗುವ ಇಂತಹ ನೀಚರು ಎಬ್ಬಿಸುವ ರಾದ್ಧಾಂತಗಳು ಒಂದೊಂದಲ್ಲ.

 

 

ಇದೀಗ ಅಂತುಹುದೇ ಮತ್ತೊಂದು ರಾದ್ದಂತ ಹುಟ್ಟುಕೊಂಡಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಅವಹೇಳನಕಾರಿ ಮಾಡುವ ಪೋಸ್ಟ್ ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿದೆ. ಸಿಎಂ ಅವರನ್ನು ಅವಹೇಳನ ಮಾಡಲು ಕನ್ನಡ ಚಿತ್ರರಂಗದ ಯಶಸ್ವೀ ನಟ ದರ್ಶನ್ ಅವರ ಹೆಸರನ್ನು ಬಳಸಿಕೊಳ್ಳಲಾಗಿದ್ದು ‘ದರ್ಶನ್ ತೂಗುದೀಪ’ ಹೆಸರಿನ ಫೇಕ್ ಅಕೌಂಟ್’ನಿಂದ ಸಿಎಂ ವಿರುದ್ಧ ಕೆಟ್ಟ ಪೋಸ್ಟ್ ಪ್ರಕಟಿಸಲಾಗಿದೆ.
ಈ ಸಲ ಕಪ್ಪು ನಮ್ದೇ ಕಪ್ಪು ನಮ್ದೇ ಅಂತಿದ್ರಲ್ಲೋ
ಆ ಕಪ್ಪು ಇದೇ ಅಂತ ಹೇಳಕ್ಕೆ ಏನಾಗಿತ್ತೋ ” ಎಂದು ಬರೆದು ಕಪ್ಪು ಬಣ್ಣಕ್ಕೆ ಫೋಟೋಷಾಪ್ ಮಾಡಿರುವ ಕುಮಾರಸ್ವಾಮಿ ಅವರ ಫೋಟೋವನ್ನು ಅಪ್ಲೋಡ್ ಮಾಡಿ ಅಣಕಿಸಲಾಗಿದೆ.

 

 

ದರ್ಶನ್ ಅವರ ಹೆಸರನ್ನು ಬಳಿಸಿಕೊಂಡು ಮುಖ್ಯಮಂತ್ರಿಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿರುವುದರ ವಿರುದ್ಧ ಆಕ್ರೋಶಗೊಂಡಿರುವ ಅಖಿಲ ಕರ್ನಾಟಕ ಹೆಚ್ಡಿಕೆ ಅಭಿಮಾನಿಗಳ ಸೇವಾ ಸಂಘ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರಿಗೆ ದೂರು ನೀಡಿದೆ. ದೂರನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ತನಿಖೆ ಶುರುವಿಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top