ಹೆಚ್ಚಿನ

ಯಾರಾದ್ರೂ ನಿಮ್ ಹತ್ರ ತುಂಬಾ ಸುಳ್ಳು ಹೇಳ್ತಾ ಇದ್ರೆ ಅದನ್ನ ಕಂಡು ಹಿಡಿಬೇಕು ಅಂದ್ರೆ ಈ 6 ಮಾರ್ಗಗಳನ್ನು ಅನುಸರಿಸಿ ಸಾಕು, ಅವರು ಸಿಕ್ಕಿ ಹಾಕಿಕೊಳ್ಳುವುದು ಗ್ಯಾರಂಟಿ.

ಯಾರಾದ್ರೂ ನಿಮ್ ಹತ್ರ ತುಂಬಾ ಸುಳ್ಳು ಹೇಳ್ತಾ ಇದ್ರೆ ಅದನ್ನ ಕಂಡು ಹಿಡಿಬೇಕು ಅಂದ್ರೆ ಈ 6 ಮಾರ್ಗಗಳನ್ನು ಅನುಸರಿಸಿ ಸಾಕು, ಅವರು ಸಿಕ್ಕಿ ಹಾಕಿಕೊಳ್ಳುವುದು ಗ್ಯಾರಂಟಿ.

ಯಾರಾದರೂ ನಿಮಗೆ ತುಂಬಾ ಸುಳ್ಳು ಹೇಳುತ್ತಿರುವುದನ್ನು ಕಂಡು ಹಿಡಿಯುವುದು ತುಂಬಾ ಕಷ್ಟದ ಸಂಗತಿ. ಹೆಚ್ಚಿನ ಸಂದರ್ಭಗಳಲ್ಲಿ ನೀವು ಇನ್ನೊಬ್ಬರ ಪ್ರಾಮಾಣಿಕತೆಯನ್ನು ಅನುಭವಿಸಿದಾಗ ಸಾವಿರಾರು ಯೋಚನೆಗಳು ನಮ್ಮ ಮನಸ್ಸಿನಲ್ಲಿ ಬರುತ್ತಾ ಇರುತ್ತವೆ. ಅದೃಷ್ಟ ವಶಾಥ ನಾವು ಸುಳ್ಳನ್ನು ಸುಳ್ಳುಗಾರರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿರುವಾಗ ಅನೇಕ ಚಿಹ್ನೆಗಳು ಕಾಣಿಸುತ್ತವೆ . ಅತ್ಯಂತ ಅನುಭವಿ ಮತ್ತು ಕುತಂತ್ರ ಸುಳ್ಳುಗಾರರನ್ನು ಸಹ ಬಹಿರಂಗಪಡಿಸುವ ಹತ್ತು ಅಂಶಗಳನ್ನು ಇಲ್ಲಿ ನಾವು ಈಗ ಹೇಳುತ್ತಿದ್ದೇವೆ. ಬನ್ನಿ ಅವು ಯಾವುವು ಎಂದು ತಿಳಿದುಕೊಳ್ಳೊಣ.

 

 

ಯಾರಾದರೂ ನಿಮಗೆ ಸುಳ್ಳು ಹೇಳುತ್ತಿದ್ದಾರೆ ಅನ್ನಿಸಿದರೆ ಅಥವಾ ಸುಳ್ಳು ಹೇಳುತ್ತಿದ್ದಾರೆ ಎಂಬ ಅನುಮಾನವಿದ್ದರೆ ಸುಳ್ಳುಗಾರರು ತಮ್ಮ ಕೈಗಳನ್ನು ಮರೆ ಮಾಡುತ್ತಾರೆ. ತಮ್ಮ ಕೈಗಳನ್ನು ಒಟ್ಟಿಗೆ ಹಿಡಿದುಕೊಂಡಿರುತ್ತಾರೆ ಅಥವಾ ಕೈಗಳನ್ನು ಜೇಬಿನಲ್ಲಿ ಇಟ್ಟುಕೊಂಡಿರುತ್ತಾರೆ .

ಸುಳ್ಳನ್ನು ಹೇಳಿದಾಗ ನೇರವಾಗಿ ಕುಳಿತುಕೊಳ್ಳಲು ಇಷ್ಟ ಪಡುತ್ತಾರೆ ಮತ್ತು ಹೆಚ್ಚಾಗಿ ತಮ್ಮ ಪಾದ ಭಯದಿಂದ ನಡುಗುತ್ತಾ ಇರುತ್ತದೆ.

ನೀವು ಪ್ರಶ್ನೆಗಳನ್ನು ಕೇಳುತ್ತಿರುವಾಗ ಅವರ ತುಟಿ ಒಣಗುತ್ತಾ ಇರುತ್ತದೆ. ಈ ಎಲ್ಲಾ ಲಕ್ಷಣಗಳು ನಿಮಗೆ ಸತ್ಯವನ್ನು ಹೇಳುತ್ತಿಲ್ಲ ಎಂದು ಸೂಚಿಸುತ್ತವೆ.

ಇನ್ನೂ ಯಾರಾದರೂ ಸುಳ್ಳು ಹೇಳುವಾಗ ಹೆಚ್ಚು ಉಸಿರಾಡುತ್ತಾರೆ ಮತ್ತು ಅವರ ಧ್ವನಿಯೂ ಕಡಿಮೆಯಾಗಿರುತ್ತದೆ. ಯಾಕೆಂದರೆ ಅವರ ಹೃದಯ ಜೋರಾಗಿ ಬಡಿದುಕೊಳ್ಳುತ್ತ ಇರುತ್ತದೆ.

 

 

ಸುಳ್ಳುಗಳನ್ನು ಹೇಳುವ ಅತ್ಯಂತ ಅನುಭವಿ ಸುಳ್ಳುಗಾರರು ಸಹ ವಿಪರೀತ ಬೆವರುತ್ತಾ ಇರುತ್ತಾರೆ.ನಾವು ಸುಳ್ಳು ಹೇಳುವಾಗ ಬೆವರು ನೈಸರ್ಗಿಕ ಒತ್ತಡ ಪ್ರತಿಕ್ರಿಯೆ ಆದ್ದರಿಂದ ಸುಳ್ಳನ್ನು ಪತ್ತೆ ಹಚ್ಚಲು ಇದು ಬಹಳ ಸುಲಭ ವಿಧಾನವಾಗಿದೆ.

ಕಣ ಸನ್ನೆಯನ್ನು ನೋಡಬೇಕು- ಸುಳ್ಳುಗಾರರನ್ನು ನಿಮ್ಮನ್ನು ನೋಡುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾನೆ. ನೀವು ಕಣ್ಣಿನ ಸಂಪರ್ಕವನ್ನು ಮಾಡಿದರೂ ಸಹ ಸುಳ್ಳುಗಾರರು ನಿಮ್ಮ ಕಣ್ಣಿನ ಸಂಪರ್ಕವನ್ನು ಮಾಡುವುದಿಲ್ಲ.

ವೇಗವಾದ ಧ್ವನಿ- ಯಾರಾದರೂ ಸುಳ್ಳು ಹೇಳುವಾಗ ಅವರು ಹೇಳುವುದನ್ನು ಸ್ಪಷ್ಟತೆ ಇಲ್ಲದೆ ವೇಗವಾದ ಧ್ವನಿಯಲ್ಲಿ ಮಾತನಾಡುತ್ತಾರೆ.

ವಿಷಯ ಬದಲಾಯಿಸುತ್ತಾರೆ -ಸುಳ್ಳನ್ನು ಹೇಳುವಾಗ ಪ್ರತಿಯೊಬ್ಬರೂ ದುರ್ಬಲ ಮತ್ತು ಅನಾನುಕೂಲತೆಯನ್ನು ಎದುರಿಸುತ್ತಾರೆ. ಒಬ್ಬ ವ್ಯಕ್ತಿಯು ಅನುಭವಿ ಸುಳ್ಳುಗಾರನಾಗಿದ್ದರೂ ಅವರು ಒಳಗೊಳಗೆ ಭಯವನ್ನು ಪಡುತ್ತಿರುತ್ತಾರೆ. ವಿಷಯವನ್ನು ಬದಲಿಸಲು ಪ್ರಯತ್ನಿಸುತ್ತಾರೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top