ಸಮಾಚಾರ

ಜಾಕ್ವೇಲಿನ್ ವರ್ಕೌಟ್ ವಿಡಿಯೋ ನೋಡಿ ನಿಬ್ಬೆರಗಾದ ಅಭಿಮಾನಿಗಳು

ಇತ್ತೀಚಿಗೆ ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡಿಸ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಡಾನ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ .ಡಾನ್ಸ್ ನಲ್ಲಿ ಅಷ್ಟೇ ಅಲ್ಲ ವ್ಯಾಯಾಮದಲ್ಲೂ ಜಾಕ್ವೇಲಿನ್ ಹಿಂದೆ ಬಿದ್ದಿಲ್ಲ. ಜಾಕ್ವೇಲಿನ್ ತಮ್ಮ ಇನ್ಸ್ಟ್ರಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

 

ಈ ವಿಡಿಯೋ ಪೋಸ್ಟ್ ಮಾಡಿ ಇಷ್ಟು ಚೆನ್ನಾಗಿ ಲೆಗ್ ಸ್ಪ್ಲಿಟ್ ಮಾಡ್ತೇನೆಂಬುದು ನನಗೆ ಗೊತ್ತಿರಲಿಲ್ಲ ಎಂದು ಜಾಕ್ವೇಲಿನ್ ಬರೆದಿದ್ದಾರೆ ಎಂದು ತಿಳಿದು ಬಂದಿದೆ. ಗುರು, ಶಿಕ್ಷಕ, ಮಾರ್ಗದರ್ಶಕರಿಂದ ನಮ್ಮ ಪ್ರತಿಭೆ ಹೊರ ಬರಲು ಸಾಧ್ಯ ಆಗುತ್ತದೆ . ನಮ್ಮ ಮಿತಿಗಿಂತ ಮುಂದೆ ಹೋಗಲು ಗುರುಗಳು ನಮ್ಮನ್ನು ಪ್ರೋತ್ಸಾಹ ನೀಡುತ್ತಾರೆ. ಅವರಿಗೆ ನಮ್ಮ ಸಾಮರ್ಥ್ಯ ತಿಳಿದಿರುತ್ತದೆ ಎಂದು ಜಾಕ್ವೇಲಿನ್ ಹೇಳಿದ್ದಾರೆ.

 

Seriously had no idea I could split like that!! Here’s to great teachers, gurus, mentors who bring out the best in you and push you that extra bit harder only cuz they believe in you! @kuldeepshashi @lanaroxy @shaziasamji ❤️❤️ #actiontraining #race3 #5daystogo😍

A post shared by Jacqueline Fernandez (@jacquelinef143) on


ಇಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ 50 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಜಾಕ್ವೇಲಿನ್ ವಿಡಿಯೋ ನೋಡಿದ ಅಪಾರ ಅಭಿಮಾನಿಗಳು ಅಮೇಜಿಂಗ್ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನೀವು ನಮ್ಮ ಪ್ರೇರಣೆ ಎಂದಿದ್ದಾರೆ. ಜಾಕ್ವೇಲಿನ್ ಸಿನಿಮಾ ಜೊತೆ ವರ್ಕ್ ಔಟ್ ನಿಂದಲೂ ಸುದ್ದಿ ಮಾಡ್ತಿದ್ದಾಳೆ. ಇತ್ತೀಚಿಗೆ ಪೋಲ್ ಡಾನ್ಸ್ ಮಾಡುವ ಮೂಲಕ ಸದ್ದು ಮಾಡಿದ್ದಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top