ಅರೋಗ್ಯ

ಹೆಣ್ಮಕ್ಳಗೆ ಉಗುರು ಬಣ್ಣ ಅಂದ್ರೆ ಪಂಚ ಪ್ರಾಣ ,ದಿನಕ್ಕೊಂದು ಉಗುರು ಬಣ್ಣ ಬದಲಾಯಿಸೋ ಹೆಣ್ಣುಮಕ್ಳು ಉಗುರು ಬಣ್ಣ ತಗೋಳೋವಾಗ ಈ ವಿಷಯ ನೆನಪಲ್ಲಿ ಇಟ್ಟ್ಕೊಳ್ಳಿ ಇಲ್ಲ ಅಂದ್ರೆ ಅದೇ ನಿಮ್ಮ ಜೀವಕ್ಕೆ ಆಪತ್ತು

ದಿನಕ್ಕೊಂದು ಉಗುರು ಬಣ್ಣ ಬದಲಾಯಿಸೋ ಹೆಣ್ಣುಮಕ್ಳು , ಉಗುರು ಬಣ್ಣ ತಗೋಳೋವಾಗ

ಈ ವಿಷಯ ನೆನಪಲ್ಲಿ ಇಟ್ಕೊಳ್ಳಿಲ್ಲ ಅಂದ್ರೆ ಜೀವಕ್ಕೆ ಆಪತ್ತು

 

ಉಗುರು ಬಣ್ಣ(ನೈಲ್ ಪೋಲಿಷ್) ಹಾಕಿದ 10 ಗಂಟೆಗಳ ನಂತರ ನಿಮ್ಮ ದೇಹಕ್ಕೆ ಏನಾಗುತ್ತದೆ .

 

 

ನಾವೆಲ್ಲರೂ ತಿಳಿದಿರುವಂತೆ, ನೀವು ಆಗಾಗ್ಗೆ ಹೆಚ್ಚಾಗೇ ಉಗುರು ಬಣ್ಣವನ್ನು ಬಳಸಬಾರದು, ಬಳಸಿದರೆ ನಿಮ್ಮ ಉಗುರುಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ ಅದು ನಮ್ಮ ಅರೋಗ್ಯಕ್ಕೆ ಒಳ್ಳೆಯದಲ್ಲ, ಈ ರೀತಿಯ ಕಾಸ್ಮೆಟಿಕ್ ನಮ್ಮ ಆರೋಗ್ಯಕ್ಕೆ ಹೆಚ್ಚು ಗಂಭೀರವಾದ ಹಾನಿ ಉಂಟಾಮಾಡುತ್ತದೆ .

ಉಗುರು ಬಣ್ಣವನ್ನು ಸಂಪೂರ್ಣವಾಗಿ ತ್ಯಜಿಸಲು ನಾವು ನಿಮ್ಮನ್ನು ಒತ್ತಾಯಿಸುವುದಿಲ್ಲ. ಬದಲಾಗಿ,ಅದರಿಂದ ನಿಮ್ಮ ದೇಹಕ್ಕೆ ಆಗುವ ಕೆಟ್ಟ ಪರಿಣಾಮಗಳನ್ನು ನಿಮಗೆ ಹೇಳಲು ಬಯಸುತ್ತೇವೆ.

 

ನಿಮ್ಮ ಆರೋಗ್ಯಕ್ಕೆ ಆಗುವ ಮುಖ್ಯವಾದ ಅಪಾಯ ಏನು ಗೊತ್ತಾ ?

ಉಗುರು ಬಣ್ಣದಲ್ಲಿರುವ ವಿಷ ಅಪಾಯ ಉಂಟುಮಾಡುತ್ತದೆ. ಕೆಲವು ಆಧುನಿಕ ಸೌಂದರ್ಯವರ್ಧಕಗಳು ನಿಮ್ಮ ಆರೋಗ್ಯವನ್ನು ಗಂಭೀರವಾಗಿ ಹಾನಿಗೊಳಿಸುವಲ್ಲಿ ಸಮರ್ಥವಾಗಿರುವ ಕೆಳಗಿನ ಘಟಕಗಳನ್ನು ಹೊಂದಿರುತ್ತವೆ:

-ಟೋಲ್ಯುನ್ :

 

 

ಇದು ದ್ರವ ರೂಪದಲ್ಲಿದ್ದು ನಿಮ್ಮ ಉಗುರನ್ನು ಮೆದುವುಗೊಳಿಸಿ,ಉಗುರು ಬಣ್ಣ ಮಾಸದಂತೆ ಸಂರಕ್ಷಿಸುತ್ತದೆ. ಆದರೆ ಟೋಲ್ಯುನ್ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ,ಸಂತಾನೋತ್ಪತ್ತಿ ಅಸ್ವಸ್ಥತೆಗಳನ್ನು ಉಂಟುಮಾಡುತ್ತವೆ ಮತ್ತು ತಲೆನೋವು, ದೌರ್ಬಲ್ಯ, ಮೂರ್ಛೆ, ಮತ್ತು ವಾಕರಿಕೆ ಇನ್ನೂ ಹಲವು ಅರೋಗ್ಯ ಸಮಸ್ಯೆ ಕಾರಣವಾಗುತ್ತದೆ.

-ಫಾರ್ಮಾಲ್ಡಿಹೈಡ್ –

ಒಂದು ಬಣ್ಣವಿಲ್ಲದ ಅನಿಲ ಇದು ಉಗುರು ಬಣ್ಣದ ಶೇಖರಣಾ ಜೀವನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಅಸ್ವಸ್ಥತೆ ಮತ್ತು ಕ್ಯಾನ್ಸರ್ ಗೆ ಕಾರಣವಾಗುತ್ತದೆ .

 

 

-ಡಿಬುಟೈಲ್ ರುಥಲೇಟ್

ಡಿಬುಟೈಲ್ ರುಥಲೇಟ್ ಸುಗಂಧವಾಗಿ ಬಳಸಲಾಗುತ್ತದೆ. ಈ ಅಪಾಯಕಾರಿ ಅಂಶ ಎಂಡೋಕ್ರೈನ್ ಅಸ್ವಸ್ಥತೆ ಮತ್ತು ಉಸಿರಾಟದ ರೋಗಗಳಿಗೆ ಕಾರಣವಾಗುತ್ತದೆ.

ವಿಜ್ಞಾನಿಗಳು 24 ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಿ,ಉಗುರು ಬಣ್ಣ ಹಾಕಿದ 6 ಗಂಟೆಗಳ ನಂತರ ಅಧ್ಯಯನ ನಡೆಸಿದರು, ಹೆಚ್ಚಿನ ಮಂದಿಯಲ್ಲಿ ಡಿಫೀನೈಲ್ ಫಾಸ್ಫೇಟ್ನ ಮಟ್ಟವು ದೇಹದಲ್ಲಿ ಹೆಚ್ಚಾಗಿತ್ತು ,ಪ್ರಯೋಗದ ಆರಂಭದ 10 ಗಂಟೆಗಳ ನಂತರ, ಎಲ್ಲಾ ಭಾಗಿಗಳ ದೇಹದಲ್ಲಿ ಡಿಫೀನಿಲ್ ಫಾಸ್ಫೇಟ್ ಮಟ್ಟವು ಸಾಮಾನ್ಯಕ್ಕಿಂತ 7 ಪಟ್ಟು ಹೆಚ್ಚಾಗಿತ್ತು. ಈ ಫಲಿತಾಂಶಗಳು ನಿಜವಾಗಿಯೂ ಗಾಬರಿ ಗೊಳಿಸಿತ್ತು.

 

 

ಉಗುರು ಬಣ್ಣವನ್ನು ನಿಮ್ಮ ಆರೋಗ್ಯಕ್ಕೆ ಹಾನಿಯಾಗದಂತೆ ಆರಿಸುವುದು ಹೇಗೆ?

ಕೆಲವು ಉಗುರು ಬಣ್ಣ ಪ್ಯಾಕೇಜುಗಳು ಮತ್ತು ಬಾಟಲಿಗಳು ವಿಶೇಷ ಗುರುತುಗಳನ್ನು ಹೊಂದಿರುತ್ತದೆ:

“5-ಫ್ರೀ” ಅಂದರೆ ಉತ್ಪನ್ನವು ಫಾರ್ಮಾಲ್ಡಿಹೈಡ್, ಅದರ ಉತ್ಪನ್ನದ ರಾಳಗಳು (ಫಾರ್ಮಾಲ್ಡಿಹೈಡ್ ರೆಸಿನ್ಸ್), ಟಲ್ಯುನೆ, ಡಿಬುಟೈಲ್ ಥಾಥಲೇಟ್ಸ್, ಅಥವಾ ಕರ್ಪೋರ್ ಅನ್ನು ಒಳಗೊಂಡಿಲ್ಲ ಎಂದರ್ಥ.

“3-ಫ್ರೀ” ಎಂದರೆ ಉಗುರು ಬಣ್ಣ ಕೇವಲ ಹಾನಿಕಾರಕ ಅಂಶಗಳ ಪೈಕಿ ಕೇವಲ ಮೂರು ಅಂಶ ಫಾರ್ಮಾಲ್ಡಿಹೈಡ್, ಡಿಬುಟೈಲ್ ಥಾಥಲೇಟ್ ಮತ್ತು ಟಲ್ಯುನೆನ್ ಗಳನ್ನು ಒಳಗೊಂಡಿಲ್ಲ ಎಂದರ್ಥ .

 

 

ಉಗುರು ಬಣ್ಣವನ್ನು ಖರೀದಿಸುವ ಮುನ್ನ ಗಮನ ಕೊಡಿ, ಮತ್ತು ನಿಮ್ಮ ಆರೋಗ್ಯವು ನಿಮ್ಮ ಕೈಯಲ್ಲಿದೆ! ಮರೆಯದಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top