fbpx
ಸಮಾಚಾರ

5 ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡ ಬಹುಭಾಷಾ ನಟ ಪ್ರಕಾಶ್ ರೈ.

ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದುಕೊಂಡಿರೋ ಪ್ರಕಾಶ್ ರೈ ಇತ್ತೀಚಿನ ದಿನಗಳಲ್ಲಿ ಒಂದು ಪಂಥದವರನ್ನು ಗುರಿಯಾಗಿಟ್ಟುಕೊಂಡು ನೇರಾನೇರಾ ವಾದ ಮಂಡಿಸುತ್ತಾ ಚರ್ಚೆ ಹುಟ್ಟು ಹಾಕಿ ವಿವಾದಕ್ಕೂ ಕಾರಣವಾಗಿದ್ದರು.ಸಮಾಜದ ಆಗು ಹೋಗುಗಳ ಬಗ್ಗೆ ನಿರ್ಬಿಢೆಯಿಂದ ಧ್ವನಿಯೆತ್ತುತ್ತಾ ಒಂದು ಪಂಥದವರ ವಿರೋಧವನ್ನೂ ಕಟ್ಟಿಕೊಂಡಿರುವ ನಟ ಪ್ರಕಾಶ್ ರೈ, ಧರ್ಮಾಧಾರಿತ ರಾಜಕಾರಣ ಮತ್ತು ಆ ಭೂಮಿಕೆಯಲ್ಲಿ ಬಿಜೆಪಿ ಮತ್ತು ಸಂಘಪರಿವಾರಗಳ ಅಜೆಂಡಾಗಳನ್ನು, ವಿರೋಧಿಸುತ್ತಾ ಕೋಮು ಸೌಹಾರ್ದ ಕದಡುವವರನ್ನು ಗುರಿಯಾಗಿಟ್ಟುಕೊಂಡು ಪ್ರಶ್ನಿಸುವುದರಲ್ಲೇ ಕಾಲ ಕಳೆಯುತ್ತಿದ್ದರು. ಆದರೆ ಅವರೀಗ ಇಡೀ ನಾಗರೀಕ ಸಮಾಜವೇ ಮೆಚ್ಚಿಕೊಳ್ಳುವಂತಹ ಒಂದೊಳ್ಳೆ ಕೆಲಸಕ್ಕೆ ಕೈ ಹಾಕಿದ್ದಾರೆ.

 

 

ಪ್ರಕಾಶ್ ರೈ ಹೆಸರು ಕೇಳಿದಾಕ್ಷಣ ಸುಖಾ ಸುಮ್ಮನೆ ವಿರೋಧಿಸುವವರ ವಿರೋಧಗಳಿಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳದ ಪ್ರಕಾಶ್ ರೈ ಟೀಕಿಸುವವರ ಬಾಯಿಗೆ ಬೀಗ ಜಡಿದಿದ್ದಾರೆ. ಪ್ರಕಾಶ್ ರೈ ಅವರು ಈ ಹಿಂದೆ ತೆಲಂಗಾಣದ ಒಂದು ಮತ್ತು ಕರ್ನಾಟಕದ ಚಿತ್ರದುರ್ಗ ಬಳಿಯ ಎರಡು ಕುಗ್ರಾಮಗಳನ್ನೂ ದತ್ತು ತೆಗೆದುಕೊಂಡು ಆ ಗ್ರಾಮಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಮೂಲ ಸೌಕರ್ಯಗಳನ್ನು ಪೂರೈಸಿದ್ದರು. ಮಂಡ್ಯ ಜಿಲ್ಲೆಯ 5 ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದು ಮೆಚ್ಚುಗೆಗೆ ಕಾರಣವಾಗಿದ್ದಾರೆ.

ಮಂಡ್ಯ ಜಿಲ್ಲೆಯ ಮೆಣಸಗೆರೆ ಸರಕಾರಿ ಶಾಲೆ, ಕೆ.ಆರ್ ಪೇಟೆಯ ಶತಮಾನದ ಶಾಲೆ, ಪಾಂಡವಪುರದ ಫ್ರೆಂಚ್ ರಾಕ್ಸ್ ಸರ್ಕಾರಿ ಮಾದರಿ ಶಾಲೆ ಸೇರಿದಂತೆ ಐದು ಶಾಲೆಗಳನ್ನು ಪ್ರಕಾಶ್ ರೈ ದತ್ತು ತೆಗೆದುಕೊಂಡಿದ್ದು ಸರ್ಕಾರೀ ಶಾಲೆಗಳ ಬಲವರ್ಧನೆಗೆ ಮುಂದಾಗಿದ್ದಾರೆ. ಸೋಮವಾರ ಆ ಶಾಲೆಗಳಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಪ್ರಕಾಶ್ ರೈ ತಾವು ದತ್ತು ತೆಗೆದುಕೊಂಡಿರುವ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಬೇಕಾದ ಸೌಕರ್ಯ ಮಾಡಿಕೊಡಲು ವಾಗ್ದಾನ ನೀಡಿದ್ದು ಊರಿನ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.

 

 

ಭಯವನ್ನು ಉಪಯೋಗಿಸಿಕೊಂಡು ಶಿಕ್ಷ ಣವನ್ನು ವ್ಯಾಪಾರವನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಎಲ್ಲಾ ಖಾಸಗಿ ಶಿಕ್ಷ ಣ ಸಂಸ್ಥೆಗಳೂ ಇದರಲ್ಲಿ ಭಾಗಿಯಾಗಿವೆ. ಶೇ.70ರಷ್ಟು ಗ್ರಾಮೀಣ ಪ್ರದೇಶಗಳಿರುವ ನಮ್ಮ ದೇಶದಲ್ಲಿ ನಮಗೆ ಭಾರವಾಗದೆ, ಅಂಜಿಕೆಯಿಲ್ಲದೆ ಓದಬೇಕೆಂದರೆ ಅದು ಸರಕಾರಿ ಶಾಲೆಗಳಲ್ಲಿ ಮಾತ್ರ ಸಾಧ್ಯ. ಸರ್ಕಾರೀ ಶಾಲೆಗಳ ವೆಚ್ಚವೆಲ್ಲ ನಾವು ತೆರಿಗೆಯೇ ಆಗಿದೆ. ಆದರೆ, ನಮಗೆಲ್ಲಾ ಸರ್ಕಾರಿ ಶಾಲೆಗಳೆಂದರೆ ನಿಲ್ಯಕ್ಷವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top