ಸಮಾಚಾರ

ಅಂತೂ ಇಂತೂ ನಿಕ್ ಜೊತೆಗಿನ ಪ್ರಿಯಾಂಕಾ ಸಂಬಂಧಕ್ಕೆ ಅಧಿಕೃತ ಮುದ್ರೆ ಬಿತ್ತು

ನಟಿ ಪ್ರಿಯಾಂಕ ಚೋಪ್ರಾ ಬಾಲಿವುಡ್ ನಿಂದ ಹಾಲಿವುಡ್ ಗೆ ಕಾಲಿಟ್ಟ ಬಳಿಕ ಅಲ್ಲಿಯೇ ಬ್ಯುಸಿ ಆಗಿದ್ದಾರೆ. ಪ್ರಿಯಾಂಕಳ ಹೋಂ ಪ್ರೊಡಕ್ಷನ್ ನಲ್ಲಿ ಕೆಲ ಪ್ರಾದೇಶಿಕ ಸಿನಿಮಾಗಳು ನಿರ್ಮಿಸಲಾಗಿದೆಯಾದರೂ ಪ್ರಿಯಾಂಕ ಮಾತ್ರ ಬಾಲಿವುಡ್ ಚಿತ್ರಗಳಲ್ಲಿ ನಟಿಸುವ ಮನಸ್ಸು ಮಾಡಿಲ್ಲ. ಹಾಲಿವುಡ್ ನಲ್ಲೆ ಪ್ರಿಯಾಂಕಾ ಚೋಪ್ರಾ ನೆಲೆಯೂರುವುದು ಬಹುತೇಕ ಖಚಿತವಾಗಿದ್ದು, ಇದರ ಮಧ್ಯೆ ಪ್ರಿಯಾಂಕಾಳ ಕುರಿತು ಗಾಸಿಪ್ ಒಂದು ಚಿತ್ರರಂಗದಲ್ಲಿ ಹರಿದಾಡುತ್ತಿದ್ದವು.

 

 

ಈಗ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ಅವರ ಆಪ್ತರ ಮದುವೆಯಲ್ಲಿ ಆದರ್ಶ ದಂಪತಿಗಳಂತೆ ಜೋನಾಸ್ ಕೈ ಹಿಡಿದುಕೊಂಡು ಭಾಗವಹಿಸುವ ಮುಖೇನ ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದ್ದಾರೆ ಎನ್ನಲಾಗುತ್ತಿದೆ.

ಪ್ರಿಯಾಂಕಾ ಅವರು ಈ ಮದುವೆಯಲ್ಲಿ ನಿಕ್ ಜೋನಾಸ್ ಅವರ ಸಂಬಂಧಿಗಳನ್ನೂ ಭೇಟಿಯಾಗಿ ಮಾತುಕತೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಮೊದಲು ಪ್ರಿಯಾಂಕಾ ಮತ್ತು ಜೋನಾಸ್ ಸಂಬಂಧದ ಕುರಿತು ಸ್ಪಷ್ಟನೆ ನೀಡಿದ್ದ ಪ್ರಿಯಾಂಕಾ ಸ್ನೇಹಿತೆಯೊಬ್ಬರು ಅದನ್ನು ತಳ್ಳಿ ಹಾಕಿದ್ದರು. ಆದರೆ ಇದೀಗ ಇಬ್ಬರ ಸಂಬಂಧ ಅಧಿಕೃತಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಹಾಲಿವುಡ್ ನಟ ಜೆರಾರ್ಡ್ ಜೊತೆ ಪ್ರಿಯಾಂಕಾ ಹೆಸರು ಕೇಳಿ ಬರುತ್ತಿತ್ತು. ಜೆರಾರ್ಡ್ ರವರು ಪ್ರಿಯಾಂಕಾಗೆ ಮದುವೆ ಪ್ರಪೋಸ್ ಕೂಡ ಮಾಡಿದ್ದರು. ಆದರೆ ಜೆರಾರ್ಡ್ ರವರ ಮದುವೆ ಪ್ರಪೋಸ್ ನ್ನು ಪ್ರಿಯಾಂಕಾ ನಯವಾಗಿ ತಿರಸ್ಕಾರ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top