ಸಮಾಚಾರ

ಟಾಲಿವುಡ್​ಗೆ ಹಾರಿದ ಪವರ್ ​ಸ್ಟಾರ್​ ಪುನೀತ್

ಕನ್ನಡದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರಿಗೆ ಟಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳು​ ಇದ್ದಾರೆ.ಕರ್ನಾಟಕದಲ್ಲಿ ಅಲ್ಲದೇ ಟಾಲಿವುಡ್​ನಲ್ಲಿ ಪವರ್​ ಹವಾ ಕಾಣಿಸಿಕೊಳ್ಳೋದಿಕ್ಕೆ ಆರಂಭವಾಗ್ತಿದೆ. ಸ್ವಲ್ಪ ತಡೀರಿ, ಕನ್ನಡಾಭಿಮಾನಿ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​, ಟಾಲಿವುಡ್​ಗೆ ಎಂಟ್ರಿ ಕೊಡುತ್ತಿರುವುದು ಇದಕ್ಕಾಗಿ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣ ಸಂಸ್ಥೆಯಲ್ಲಿ ಈಗಾಗಲೇ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ. ಒಂದು ಚಿತ್ರದಲ್ಲಿ ಹೊಸಬರಿಗೆ ಅವಕಾಶ ಕೊಟ್ಟರೆ ಮತ್ತೊಂದು ಚಿತ್ರದಲ್ಲಿ ಪ್ರತಿಭಾನ್ವಿತರಿಗೆ ನಿರ್ದೇಶನಕ್ಕೆ ಚಾನ್ಸ್ ಕೊಟ್ಟಿದ್ದಾರೆ ಪುನೀತ್ ರಾಜ್ ಕುಮಾರ್. ಈಗ ಪುನೀತ್ ರಾಜ್ ಕುಮಾರ್ ಆಡಿಯೋ ಕಂಪನಿ ಪಿ ಆರ್​ ಕೆ ಆಡಿಯೋ ಎಂಎಂಸಿಹೆಚ್​ ಸಿನಿಮಾದ ಹಾಡುಗಳ ಮೂಲಕ ಟಾಲಿವುಡ್​ ಆಡಿಯೋ ಮಾರ್ಕೆಟಿಂಗ್​ ಎಂಟ್ರಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

 

ನಿರ್ದೇಶಕ ಮುಸ್ಸಂಜೆ ಮಹೇಶ್​ ನಿರ್ದೇಶನ ಮಾಡಿರುವ ಎಂಎಂಸಿಎಚ್​ ತೆಲುಗಿನಲ್ಲಿ ರಿಯಲ್​ ದಂಡುಪಾಳ್ಯಂ ಹೆಸರಿನಲ್ಲಿ ಡಬ್​ ಆಗಿ ರಿಲೀಸ್​ ಆಗ್ತಾ ಇದೆ. ಈ ಸಿನಿಮಾ ಡಬ್​ ಹಾಡುಗಳು ಹಾಗೂ ಟ್ರೈಲರ್​ನಲ್ಲೂ ಕೂಡ ಪುನೀತ್​ ರಾಜ್​ಕುಮಾರ್ ​ಅವರ ಪಿಆರ್​ಕೆ ಆಡಿಯೋ ಕಂಪನಿ ರಿಲೀಸ್​ ಮಾಡುತ್ತಿದೆ. ಸದ್ಯ ಆಡಿಯೋ ಕಂಪನಿ ಟಾಲಿವುಡ್​ಗೆ ಎಂಟ್ರಿ ಕೊಡ್ತಾ ಇರೋದು ಪುನೀತ್ ರಾಜ್ ಕುಮಾರ್​ ಅವರ ಹೆಗ್ಗಳಿಕೆ.

 

ರಿಯಲ್​ ದಂಡುಪಾಳ್ಯಂ ನೈಜ ಘಟನೆ ಆಧರಿಸಿದ ಚಿತ್ರವಾಗಿದ್ದು, 1980ರಲ್ಲಿ ಮೈಸೂರು ಭಾಗದಲ್ಲಿ ನಡೆದ ನೈಜ ಘಟನೆಯನ್ನು ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಕಾಲೇಜು ಹುಡುಗಿಯರ ಫ್ರೆಂಡ್‌ಶಿಪ್‌ ಸ್ಟೋರಿ ಜತೆಗೆ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಅಂಶಗಳು ಸಿನಿಮಾದಲ್ಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top