fbpx
ಹೆಚ್ಚಿನ

ಯಾವ ನಕ್ಷತ್ರದವರಿಗೆ ಜಾಸ್ತಿ ಸರ್ಪದೋಷ ಕಾಡುತ್ತೆ ಹಾಗೂ ಇದರ ಪರಿಹಾರಕ್ಕೆ ಯಾವ ಹೆಸರಿನ ನಾಗದೇವರನ್ನು ಪೂಜಿಸಬೇಕು ಅಂತ ತಿಳ್ಕೊಳ್ಳಿ .

ಯಾವ ನಕ್ಷತ್ರದವರಿಗೆ ಜಾಸ್ತಿ ಸರ್ಪದೋಷ ಕಾಡುತ್ತೆ ಹಾಗೂ ಇದರ ಪರಿಹಾರಕ್ಕೆ ಯಾವ ಹೆಸರಿನ ನಾಗದೇವರನ್ನು ಪೂಜಿಸಬೇಕು ಅಂತ ತಿಳ್ಕೊಳ್ಳಿ .

ಹಿಂದಿನ ಜನ್ಮದಲ್ಲಿ ಅಥವಾ ಈ ಜನ್ಮದಲ್ಲಿ ನೀವು ಸರ್ಪಗಳಿಗೆ ಹೊಡೆದಿದ್ದರೆ, ಸಾಯಿಸಿದ್ದರೆ, ಅನಾಚಾರ, ಅಪಚಾರ ಮಾಡಿದ್ದರೆ, ಅವರು ತೀವ್ರವಾದ ಕಾಳಸರ್ಪ ದೋಷಕ್ಕೆ ಒಳಗಾಗುತ್ತಾರೆ. ಅಂಥವರ ಜಾತಕ ಅಥವಾ ಜನ್ಮ ಕುಂಡಲಿಯಲ್ಲಿ ಕಾಳಸರ್ಪ ದೋಷವನ್ನು ಕಾಣಬಹುದಾಗಿದೆ. ಅವರು ಜೀವನದಲ್ಲಿ ಅನೇಕ ರೀತಿಯ ಕಷ್ಟಗಳನ್ನು ಏರಿಳಿತಗಳನ್ನು ಕಾಣುತ್ತಾರೆ ಎಂದು ಹೇಳಲಾಗುತ್ತದೆ.

 

ಕಾಳ ಸರ್ಪ ದೋಷ ಎಂದರೆ ನವ ಗ್ರಹಗಳು ರಾಹು ಮತ್ತು ಕೇತುವಿನ ಮಧ್ಯದಲ್ಲಿ ಬಂಧಿಯಾಗಿರುವುದು.ರಾಹು ಎಂದರೆ ಹಾವಿನ ತಲೆಯ ಭಾಗ ಕೇತು ಎಂದರೆ ಹಾವಿನ ಬಾಲದ ಕೊನೆಯ ತುದಿಯ ಭಾಗ.
ಸರ್ಪವು ಅಧಿಪತಿಯಾಗಿರುವ ಆಶ್ಲೇಷ ನಕ್ಷತ್ರದಲ್ಲಿ ಮತ್ತು ಕೇತುವು ಅಧಿಪತಿಯಾಗಿರುವ ಮೂಲಾ ನಕ್ಷತ್ರದಲ್ಲಿ ಜನಿಸಿದವರಿಗೆ ಇಂತಹ ಸರ್ಪದೋಷದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ, ಅವರು ಕಾಳಸರ್ಪ ದೋಷವನ್ನು ಪರಿಹಾರ ಮಾಡಿಕೊಂಡರೆ ಅವರು ಸಮಸ್ಯೆಯಿಂದ ಹೊರಗಡೆ ಬರಬಹುದು.

ಯಾವ ನಕ್ಷತ್ರದವರು ಯಾವ ಹೆಸರಿನ ನಾಗ ದೇವತೆಯನ್ನು ಪೂಜೆ ಮಾಡಿದರೆ ಒಳ್ಳೆಯದು ಎಂದು ಈಗ ನಾವು ತಿಳಿದುಕೊಳ್ಳೋಣ ಬನ್ನಿ .

ಅಶ್ವಿನಿ ಮತ್ತು ಚಿತ್ತಾ ನಕ್ಷತ್ರದಲ್ಲಿ ಜನಿಸಿದವರು “ಕಂಬಂ” ಎಂಬ ನಾಗರಾಜನನ್ನು ಪೂಜೆ ಮಾಡಬೇಕು.

ರೋಹಿಣಿ ನಕ್ಷತ್ರದಲ್ಲಿ ಜನಿಸಿದವರು “ವಾಸುಕಿ” ಎಂಬ ಸರ್ಪವನ್ನು ಪೂಜೆ ಮಾಡಬೇಕು .

ಅನುರಾಧ ನಕ್ಷತ್ರದಲ್ಲಿ ಜನಿಸಿದವರು “ತಕ್ಷಕ” ಎಂಬ ಸರ್ಪವನ್ನು ಪೂಜೆ ಮಾಡಿ ಆರಾಧಿಸಬೇಕು.

ಕೃತಿಕಾ ಮತ್ತು ಭರಣಿ ನಕ್ಷತ್ರದಲ್ಲಿ ಜನಿಸಿದವರು “ಶಂಖಪಾಲ” ಎಂಬ ಸರ್ಪವನ್ನು ಪೂಜೆ ಮಾಡಬೇಕು.

ಪೂರ್ವಾಷಾಢ ನಕ್ಷತ್ರದಲ್ಲಿ ಜನಿಸಿದವರು “ಐರಾವತ” ಎಂಬ ನಾಗರಾಜನನ್ನು ಪೂಜೆ ಮಾಡಬೇಕು.

ಸ್ವಾತಿ ನಕ್ಷತ್ರದಲ್ಲಿ ಜನಿಸಿದವರು “ಶಂಖಪಾಲ” ಎಂಬ ಸರ್ಪವನ್ನು ಪೂಜೆ ಮಾಡಬೇಕು .

ಪೂರ್ವಫಾಲ್ಗುಣಿ ನಕ್ಷತ್ರದಲ್ಲಿ ಜನಿಸಿದವರು “ಕಾರ್ಕೋಟಕ”ಎಂಬ ಸರ್ಪವನ್ನು ಪೂಜೆ ಮಾಡಬೇಕು.

ಶ್ರವಣ ನಕ್ಷತ್ರದಲ್ಲಿ ಜನಿಸಿದವರು “ಅಶ್ವ ಧಾರ” ಎಂಬ ನಾಗದೇವತೆಯನ್ನು ಪೂಜೆ ಮಾಡಬೇಕು .

ನಕ್ಷತ್ರಗಳಲ್ಲಿ ಒಟ್ಟಾರೆ 27 ನಕ್ಷತ್ರಗಳಿದ್ದು, ಈ ಕೆಲವು ನಕ್ಷತ್ರದಲ್ಲಿ ಜನಿಸಿದವರಿಗೆ ಮಾತ್ರವೇ ಸಾಮಾನ್ಯವಾಗಿ ಕಾಳಸರ್ಪ ದೋಷಗಳು ಅಧಿಕವಾಗಿ ಕಂಡುಬರುತ್ತವೆ.ಆದ್ದರಿಂದ ಈ ನಕ್ಷತ್ರಗಳಲ್ಲಿ ಜನಿಸಿದವರು ಖಂಡಿತವಾಗಿಯೂ ಸರ್ಪ ದೇವತೆಗಳನ್ನು ಮತ್ತು ಸರ್ಪಗಳನ್ನು ಪೂಜೆ ಮಾಡಬೇಕು, ಆರಾಧಿಸಬೇಕು. ಆಗಲೇ ಸರ್ಪದೋಷದ ಪ್ರಮಾಣವೂ ಕಡಿಮೆಯಾಗುವುದು.

ಸರ್ಪ ಗಾಯತ್ರಿ ಮಂತ್ರ .
ಈ ಮಂತ್ರವನ್ನು ಜಪಿಸಿದರೆ ಒಳ್ಳೆಯದು
“ಓಂ ನಾಗರಾಜಾಯ ವಿದ್ಮಹೇ,
ಛಕ್ಯೂಶಸ್ರವನಾಯ ಧೀಮಹಿ ,
ತನ್ನೋ ಸರ್ಪ ಪ್ರಚೋದಯಾತ್”

 

 

ಸರ್ಪ ಮಂತ್ರ.
ಈ ಮಂತ್ರದಲ್ಲಿ 9 ನಾಗದೇವರ ಹೆಸರುಗಳಿದ್ದು,ಈ ಮಂತ್ರವನ್ನು ಪ್ರತಿನಿತ್ಯ 48 ಬಾರಿ ಬೆಳಗ್ಗೆ ಮತ್ತು ಸಂಜೆ ಜಪಿಸಿದರೂ ಉತ್ತಮ.
“ಓಂ ಅನಂತೋ, ವಾಸುಕಿ, ಶೇಷಾಹ, ಪದ್ಮನಾಬ್ಶ್ಚ,ಕಂಬಲಹ, ಶಂಖಪಾಲೋ, ಧೃತರಾಷ್ಟ್ರಹ, ತಕ್ಷಕ, ಕಾಳಿಯಶ್ಚತ್ ಇತಾನಿ ನವನಾಮಾನಿ ನಾಗಾನಾಂಚ್ ಪಟೇ ನಿತ್ಯಂ ಪ್ರಾತಃ ಕಾಲೇ ಸಂಧ್ಯಾಕಾಲೇ”

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top