fbpx
ಮನೋರಂಜನೆ

ಕಿರುಚಿತ್ರದ ಮೂಲಕ ಕಾಸ್ಟಿಂಗ್ ಕೌಚ್ ಕಥೆ ಹೇಳಲು ಮುಂದಾದ ಶ್ರುತಿ ಹರಿಹರನ್

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಟ್ಟು ನಟಿಯರನ್ನು ಮಂಚಕ್ಕೆ ಕರೆಯುವ ವ್ಯಾಧಿಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿರೋ ವಿಚಾರ ಎಲ್ಲರಿಗೂ ಗೊತ್ತಿದೆ. ಇಂಥ ಕಾಸ್ಟ್ ಕೌಚಿಂಗ್‌ನ ಸರಣಿ ಇದೀಗ ಎಲ್ಲೆಲ್ಲಿಯೋ ಬಿಚ್ಚಿಕೊಳ್ಳುತ್ತಿವೆ. ಬಾಲಿವುಡ್ ಮೂಲದ ನಟಿ ಶ್ರೀ ರೆಡ್ಡಿ ತೆಲುಗು ಚಿತ್ರರಂಗದಲ್ಲಿ ಮಂಚಕ್ಕೆ ಕರೆಯುವವರ ವಿರುದ್ಧ ಸಮರ ಸಾರಿದೇಟಿಗೆ ಎಲ್ಲ ಭಾಷೆಗಳ ನಟಿಯರಿಗೂ ಧೈರ್ಯ ಬಂದಂತಿದೆ. ಅನೇಕರು ತಾವೇ ಕಂಡುಂಡ ಕಷ್ಟಗಳನ್ನು ನೇರವಾಗಿ ಹೇಳಿಕೊಳ್ಳಲಾರಂಭಿಸಿದ್ದಾರೆ. ಹಾಗೆ ನೋಡಿದರೆ ಕಾಸ್ಟಿಂಗ್ ಕೌಚ್ ವಿರುದ್ಧ ಶ್ರೀ ರೆಡ್ಡಿಗೂ ಮುನ್ನ ಧ್ವನಿ ಎತ್ತಿದ್ದವಳು ಕನ್ನಡ ನಟಿ ಶ್ರುತಿ ಹರಿಹರನ್. ಇತ್ತೀಚಿಗೆ ನಡೆದಿದ್ದ ಇಂಡಿಯಾ ಟುಡೇ ಸಂವಾದ ಕಾರ್ಯಕ್ರಮದಲ್ಲಿ “ತಾನು ಕನ್ನಡ ಚಿತ್ರರಂಗದಲ್ಲಿ ಅವಕಾಶಕ್ಕೆ ಹುಡುಕಾಡುತ್ತಿದ್ದ ಸಂದರ್ಭದಲ್ಲಿ ನಿರ್ಮಾಪಕನೊಬ್ಬ ಮಂಚಕ್ಕೆ ಕರೆದಿದ್ದ. ನಾನು ಉಗಿದು ವಾಪಾಸು ಬಂದಿದ್ದೆ” ಎಂಬರ್ಥದಲ್ಲಿ ಮಾತಾಡಿ ಕಾಮುಕರ ವಿರುದ್ಧ ಧ್ವನಿ ಎತ್ತಿದ್ದರು.

 

 

ಇದೀಗ ಮತ್ತೊಮ್ಮೆ ಕಾಸ್ಟಿಂಗ್ ಕೌಚ್ ಕಥೆಯನ್ನು ಹೇಳಲು ಶ್ರುತಿ ಹರಿಹರನ್ ಮುಂದಾಗಿದು ಇದಕ್ಕಾಗಿ ಕಿರುಚಿತ್ರದ ರೂಟ್ ಹಿಡಿದುಕೊಂಡಿದ್ದಾರೆ. ಅಂದಹಾಗೇ ಕಿರುಚಿತ್ರವು “ಹೀರೋಯಿನ್​ ಆಗಬೇಕೆಂಬ ಕನಸು ಕಟ್ಟಿಕೊಂಡು ಬರುವ ಯುವತಿಯೊಬ್ಬಳ ಕರಾಳ ನೋವುಗಳು, ಸಿನಿಮಾ ಹಿಂದಿನ ಭಯಾನಕ ಸತ್ಯ. ನಟಿಯಾಗಬೇಕು ಎಂದು ಬರುವವಳನ್ನು ಅವಕಾಶ ಕೊಡೋದಾಗಿ ನಿರ್ದೇಶಕ, ನಿರ್ಮಾಪಕರು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ, ಅವರನ್ನು ಮಂಚಕ್ಕೆ ಕರೆಯುವ ಅನಿಷ್ಟ ಪಿಡುಗನ್ನು ಕುರಿತು ಇರಲಿದೆಯಂತೆ.. ಶೃತಿಹರಿಹರನ್ ಅವರ ಜೀವನದಲ್ಲಿ ಆದ ರಿಯಲ್​ ಕಾಸ್ಟಿಂಗ್ ಕೌಚ್​ ಅನುಭವವನ್ನೇ ತೆರೆ ಮೇಲೆ ತರಿಸಲಾಗಿದೆ ಎಂಬ ಗುಮಾನಿ ಎಲ್ಲರಲ್ಲೂ ಎದ್ದಿದೆ.

 

 

ಈ ಕಿರುಚಿತ್ರವನ್ನು ರಚನ್ ರಾಮಚಂದ್ರನ್ ನಿರ್ದೇಶನ ಮಾಡುತ್ತಿದ್ದು ನಟರಾದ ಅಭಿನವ್ ರಾಜ್, ಶ್ರೇಯ ಅಂಚನ್ ಮತ್ತು ನಟಿ ರೂಪಾ ನಟರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳನ್ ಸಂಗೀತ ಸಂಯೋಜಿಸಿದ್ದು ಕಾರ್ತಿಕ್ ಬಿ ಮಾಲೂರು ಅವರು ತಮ್ಮ ಕ್ಯಾಮರಾ ಕೈಚಳಕ ತೋರಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್’ನಲ್ಲಿ ಪಾತ್ರಗಳು, ಡೈಲಾಗ್​ಗಳು ಸಿನಿಮಾ ನಟಿಯೊಬ್ಬಳ ಹಿಂದಿರೋ ಕರಾಳ ಕಥೆಯನ್ನ ಹೇಳೋಕೆ ಹೊರಟಿದ್ದಾರೆ ಅನ್ನೋ ಹಿಂಟ್​ ನೀಡುತ್ತಿದೆ. ಈ ತಿಂಗಳ ಅಂತ್ಯದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಶೃತಿ ಯೋಚಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top