fbpx
ಮನೋರಂಜನೆ

ಅಫ್ಘಾನ್ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಮಾಡಿ ಗಮನಸೆಳೆದ ವಿಕಲಚೇತನ.

ಜೂನ್ 14ರಿಂದ ಪ್ರಾರಂಭವಾಗಲಿರುವ ಭಾರತದ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಆಫ್ಘಾನಿಸ್ತಾನ ಬಿರುಸಿನ ಸಿದ್ಧತೆ ನಡೆಸುತ್ತಿದ್ದು ನೆಟ್ಸ್ ನಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ನಿಂದ ಮಾನ್ಯತೆ ಪಡೆದ ನಂತರ ಕ್ರಿಕೆಟ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಆಟಗಾರರಿಗೆ ಅಪರೂಪದ ಅಥಿತಿಯ ಪರಿಚಯವಾಗಿದೆ.

 

 

ಶಂಕರ್ ಸಜ್ಜನ್ ಎನ್ನುವ 18ವರ್ಷ ವಯಸ್ಸಿನ ಅಂಗವಿಕಲ ಯುವಕ ಆಫ್ಗನ್ ಆಟಗಾರರು ಅಭ್ಯಾಸ ನಡೆಸುತ್ತಿದ್ದ ನೆಟ್ಸ್ ಗೆ ಆಗಮಿಸಿ ತನ್ನ ಕೈಚಳಕದಿಂದ ಅವರನ್ನು ಆಶ್ಚರ್ಯಚಕಿತಗೊಳಿಸಿದ್ದಾನೆ.. ಮೂಲತಃ ಕರ್ನಾಟಕದ ಬಿಜಾಪುರದವರಾದ ಶಂಕರ್ ಎರಡೂ ಕೈಗಳು ಸರಿಯಾದ ರೀತಿಯಲ್ಲಿ ಇಲ್ಲದಿದ್ದರೂ ಲೆಗ್ ಸ್ಪಿನ್ ಮಾಡುವುದರಲ್ಲಿ ನಿಸ್ಸೀಮನಾಗಿದ್ದಾರೆ. ಚಿಕ್ಕಂದಿನಿಂದಲೂ ಕ್ರಿಕೆಟ್ ಆಟವನ್ನು ಹುಚ್ಚಿಡಿಸಿಕೊಂಡಿರುವ ಈತ ಬೆಂಗಳೂರಿನಲ್ಲಿ ಆಫ್ಗನ್ ಬ್ಯಾಟ್ಸ್ಮನ್ ಗಳು ಅಭ್ಯಾಸ ಮಾಡುತ್ತಿದ್ದ ವೇಳೆ ಅವರಿಗೆ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಶಂಕರ್ ಸಜ್ಜನ್ ಆಫ್ಗನ್ ಆಟಗಾರರ ಜೊತೆ ಅಭ್ಯಾಸ ನಡೆಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆ ಅಪರೂಪದ ಪ್ರತಿಭೆ ವಿಕಲಚೇತನನೀಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೈಕಾಲು ನೆಟ್ಟಗಿದ್ದರೂ ಏನಾದರೊಂದು ಕುಂಟು ನೆಪವೊಡ್ಡಿ, ಸೋಮಾರಿಗಳಾಗಿ ಮೂಲೆ ಸೇರುವ ಇಂದಿನ ಪೀಳಿಗೆ ಎಷ್ಟು ಯುವಕರಿಗೆ ಶಂಕರ್ ಸ್ಪೂರ್ತಿಯಾಗುತ್ತಾರೆ ಎಂದರೆ ತಪ್ಪಾಗೊದಿಲ್ಲ.


ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಟೆಸ್ಟ್ ಪಂದ್ಯ ಜೂನ್ 14ರಿಂದ 18ರ ವರೆಗೆ ನಡೆಯಲಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದಾಗಿ ಪಂದ್ಯಕ್ಕೆ ಅಲಭ್ಯರಾಗಿರುವುದರಿಂದ ಅವರ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಇತ್ತೀಚ್ಚಿಗೆ ಬಾಗ್ಲಾದೇಶದ ವಿರುದ್ಧ ನಡೆದ ಟಿ-ಟ್ವೆಂಟಿ ಸರಣಿಯಲ್ಲಿ ಆಫ್ಘಾನಿಸ್ತಾನ ತಂಡವು ೩-೦ ಅಂತರದಲ್ಲಿ ಜಯಸಾದಿಸಿದ್ದಲ್ಲದೇ ವೈಟ್ ವಾಷ್ ಮಾಡಿರುವುದರಿಂದ ಭಾರತದ ವಿರುದ್ಧ ತನ್ನ ಫಾರ್ಮ್ ಮುಂದುವರೆಸಲಿದೆಯೇ ಕಾದುನೋಡಬೇಕಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top