ಸಮಾಚಾರ

ಹಿಗ್ಗಾ ಮುಗ್ಗ ಟ್ರೊಲ್ ಆಯ್ತು ಶಾರುಕ್ ಮಗಳ ಡ್ರೆಸ್

ಬಾಲಿವುಡ್ ನಟ ನಟಿಯರು ಒಂದಲ್ಲ ಒಂದು ವಿಷಯಕ್ಕೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಟ್ರೊಲ್ ಗೆ ಗುರಿಯಾಗುತ್ತಾರೆ. ಈಗ ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಹಾಗೂ ಗೌರಿ ಖಾನ್ ಮಗಳು ಸುಹಾನ ಅವರ ಸರದಿ. ಸುಹಾನ ಬಾಲಿವುಡ್ ನಿಂದ ದೂರವಿದ್ದರು ಕೂಡ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಲೇ ಇರುತ್ತಾಳೆ.

ಇತ್ತೀಚಿಗೆ ತಾಯಿ ಗೌರಿ ಖಾನ್ ಮತ್ತು ಸುಹಾನಾ ಖಾನ್ ಪಾರ್ಟಿವೊಂದರಲ್ಲಿ ಭಾಗವಹಿಸಿದ್ದರು. ಅದರ ಚಿತ್ರಗಳು ಈಗ ಗೌರಿ ಖಾನ್ ಇನ್ಸ್ಟ್ರಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಗೌರಿ ಖಾನ್ ಹಾಗೂ ಸುಹಾನಾ ಜೊತೆಗಿರುವ ಚಿತ್ರ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ಕಮೆಂಟ್ ಶುರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

Partying ….enjoying the final year of Ardingly – – Makeup: @beautybyg_thelook Outfit: @monishajaising. Photocredit leilabarbaro

A post shared by Gauri Khan (@gaurikhan) on

 

ಪಾರ್ಟಿಯಲ್ಲಿ ಸುಹಾನಾ ಸಿಲ್ವರ್ ಬಣ್ಣದ ಚಿಕ್ಕ ಡ್ರೆಸ್ ತೊಟ್ಟಿದ್ದರು ಇದು ಟ್ರೋಲರ್ ಬಾಯಿಗೆ ಆಹಾರವಾಗಿದ್ದಾಳೆ. ಗೌರಿ ಜೀನ್ಸ್ ಹಾಗೂ ಜಾಕೆಟ್ ನಲ್ಲಿ ಮಿಂಚಿದ್ದಾರೆ. ಸುಹಾನಾ ಗೆ ಸರಿಯಾದ ಡ್ರೆಸ್ ಹಾಕುವಂತೆ ಟ್ರೋಲರ್ ಗಳು ಗೌರಿಗೆ ಸಲಹೆ ನೀಡಿದ್ದಾರೆ. ಗೌರಿ ಹಾಗೂ ಸುಹಾನಾ ಡ್ರೆಸ್ ಮನೀಶ್ ಜಯಸಿಂಹ ವಿನ್ಯಾಸ ಮಾಡಿದ್ದಾರೆ. ಇಂತೆಹಾ ಅನೇಕ ಟ್ರೊಲ್ ಗಳನ್ನೂ ನೋಡಿರುವ ಸುಹಾನಾ ಇದ್ಯಾವುದಕ್ಕೆ ಖ್ಯಾರೇ ಎನ್ನುತಿಲ್ಲ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಟ್ರೊಲ್ ಮಾಡುವುದು ಸಾಮಾನ್ಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top