ಅರೋಗ್ಯ

ನೀರಿನಲ್ಲಿ ಜೀರಿಗೆ ಹಾಕಿ ಕುಡಿಯೋದ್ರಿಂದ ಗರ್ಭಿಣಿಯರು ಈ ಪ್ರಯೋಜನಗಳನ್ನ ಪಡ್ಕೋಬೋದು.

 

ಸಾಮಾನ್ಯವಾಗಿ ಜೀರಿಗೆಯನ್ನುಊಟದ ರುಚಿಯನ್ನು ಹೆಚ್ಚಿಸಲು ಬಳಕೆ ಮಾಡಲಾಗುತ್ತದೆ. ಇದೇ ಜೀರಿಗೆಯಿಂದ ಗರ್ಭಿಣಿಯಾರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ? ಗರ್ಭವಾಸ್ಥೆಯಲ್ಲಿ ಜೀರಿಗೆ ನೀರನ್ನು ಸೇವಿಸುವುದರಿಂದ ಗರ್ಭಿಣಿ ಮತ್ತು ಮಗು ಉತ್ತಮ ಅರೋಗ್ಯವನ್ನು ಪಡೆದುಕೊಳ್ಳಬಹುದು.ಈ ಜೀರಿಗೆ ನೀರನ್ನು ಸೇವಿಸೋದ್ರಿಂದ ಯಾವ್ಯಾವ ಲಾಭಗಳನ್ನು ಪಡ್ಕೋಬೋದು ಅನ್ನೋದನ್ನು ನಾವುಹೇಳ್ತೀವಿ ಕೇಳಿ.

 

 

ಜೀರಿಗೆ ನೀರನ್ನು ಮಾಡೋದು ಹೇಗೆ:

1 ಲೀಟರ್‌ ನೀರನ್ನು ಚನ್ನಾಗಿ ಕಾಯಿಸಿ, ಅದಕ್ಕೆ ಒಂದು ಚಮಚದಷ್ಟು ಜೀರಿಗೆಯನ್ನು ಹಾಕಿ ಮಿಕ್ಸ್‌ ಮಾಡಿ. ಆಮೇಲೆ ಆ ನೀರು ತಣ್ಣಗಾದ ಮೇಲೆ ಕುಡಿಯಿರಿ.

ಜೆರಿಗೆ ನೀರನ್ನು ಕುಡಿಯೋದ್ರಿಂದಾಗೋ ಉಪಯೋಗಗಳು:

1.ರಕ್ತಹೀನತೆಯನ್ನು ಹೋಗಲಾಡಿಸುತ್ತದೆ:

ಜೀರಿಗೆಯಲ್ಲಿ ಐರನ್‌ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಜೀರಿಗೆ ನೀರನ್ನು ಸೇವಿಸುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್‌ ಪ್ರಮಾಣ ಹೆಚ್ಚಿಸಲು ಸಹಾಯ ಮಾಡುತ್ತದೆ.

2.ರಕ್ತದೊತ್ತಡವನ್ನು ನಿವಾರಿಸುತ್ತದೆ:

ಜೀರಿಗೆ ನೀರನ್ನು ಸೇವಿಸುದರಿಂದ ರಕ್ತದೊತ್ತಡ ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಜೀರಿಗೆಯಲ್ಲಿ ಪೊಟ್ಯಾಶಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.

3.ಶಕ್ತಿಯನ್ನು ಹೆಚ್ಚಿಸುತ್ತದೆ:

 

 

ಜೀರಿಗೆಯಲ್ಲಿ ಐರನ್‌ ಹೆಚ್ಚಿರುತ್ತದೆ ಅಲ್ಲದೆ ಇದರಲ್ಲಿ ವಿಟಾಮಿನ್‌ ಎ, ಸಿ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳರುತ್ತವೆ . ಹಾಗಾಗಿ ನೀರಿನಲ್ಲಿ ಜೀರಿಗೆ ಹಾಕಿ ಕುಡಿಯೋದ್ರಿಂದ ಗರ್ಭಿಣಿಯರಿಗೆ ಶರೀರದಲ್ಲಿ ಶಕ್ತಿ ಹೆಚ್ಚಾಗುತ್ತದೆ.

4. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ:

ಗರ್ಭಾವಸ್ಥೆಯಲ್ಲಿ ಗರ್ಭಿಣಿಯರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಗರ್ಭವಾಸ್ಥೆಯಲ್ಲಿ ಸಮಯದಲ್ಲಿ ಗರ್ಭಿಣಿಯರು ಜೀರಿಗೆ ಸೇವನೆ ಮಾಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ. ಇದರಿಂದ ತಾಯಿ ಮಗು ಆರೋಗ್ಯದಿಂದಿರಲು ಸಹಾಯವಾಗುತ್ತದೆ.

5. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜನ್ಮದೋಷವಾಗದಂತೆ ಮಾಡುತ್ತದೆ:

ಜೀರಿಗೆ ನೀರನ್ನು ಸೇವಿಸೋದ್ರಿಂದ ಹುಟ್ಟುವ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜನ್ಮ ದೋಷಗಳಿಂದ ದೂರಮಾಡಿ ಆರೋಗ್ಯವಂತ ಮಕ್ಕಳು ಜನಿಸುವಂತೆ ಮಾಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top