ಮನೋರಂಜನೆ

ಪಾಕ್​ ಬೆಂಬಲಿಸಿದ್ದ ಪಿಗ್ಗಿಗೆ ತಿರುಗೇಟು ನೀಡಿದ ವಿದೇಶಿ ಮಹಿಳೆ : ಹಿಂದುಸ್ತಾನಕ್ಕೆ ಜೈ ಅಂದಳು ಅಮೆರಿಕನ್​ ಲೇಖಕಿ.

ಬಾಲಿವುಡ್‌ನಲ್ಲಿ ತನ್ನ ನಟನೆಯ ಖದರಿನಿಂದಲೇ ಅವಕಾಶಗಳನ್ನು ಗಿಟ್ಟಿಸಿಕೊಂಡು ಇದೀಗ ವಿಶ್ವಾದ್ಯಂತ ಮಿಂಚುತ್ತಿರೋ ಪ್ರಿಯಾಂಕಾ ಚೋಪ್ರಾ ವಿನಾಕಾರಣ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾಳೆ. ಅಮೇರಿಕಾದ ಕ್ವಾಂಟಿಕೋ ಸಂಚಿಕೆಯಲ್ಲಿ ಭಾರತೀಯರನ್ನು ಹಿಂದೂ ಉಗ್ರಗಾಮಿಗಳೆಂದು ಬಿಂಬಿಸಿ ಭಾರತೀಯ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದ್ದಳು. ನಿರ್ದೇಶಕನು ಹೇಳಿಕೊಟ್ಟಿದ್ದನ್ನು ನೀಟಾಗಿ ನಟಿಸಿ ತನಗೆ ತಿಳಿದೆಯೇ ಮಾಡಿಕೊಂಡಿರುವ ಎಡವಟ್ಟಿಗೆ ಪ್ರಿಯಾಂಕಾ ಚೋಪ್ರಾ ಇದೀಗ ಎಲ್ಲರಲ್ಲೂ ವಿನಮ್ರವಾಗಿ ಕ್ಷಮೆಯಾಚಿಸಿಯೂ ಆಗಿದೆ.

 

 

ಪ್ರಿಯಾಂಕಾ ಚೋಪ್ರಾರ ಈ ನಡೆಯ ವಿರುದ್ಧ ಕಳೆದೆರಡು ದಿನಗಳಿಂದ ಭಾರತದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅದು ಸದ್ಯ ಒಂದು ಮಟ್ಟಕ್ಕೆ ತಣ್ಣಗಾಗಿವು ಮೊದಲೇ ಪಿಗ್ಗಿ ವಿರುದ್ಧ ಅಮೇರಿಕನ್ ಮಹಿಳೆಯೊಬ್ಬಳು ತಿರುಗಿಬಿದ್ದಿದ್ದಾಳೆ. ರೇನಿ ಲೈನ್ ಎಂಬ ಅಮೇರಿಕನ್ ಬರಹಗಾರ್ತಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಗುಡುಗಿದ್ದು ಭಾರತೀಯರ ಪರವಾಗಿ ಮಾತನಾಡಿದ್ದಾಳೆ. “ನಾನು ಭಾರತವನ್ನು ಅಮೆರಿಕದಂತೆಯೇ ಪ್ರೀತಿಸುತ್ತೇನೆ, ನಿಮ್ಮ ಇತ್ತೀಚಿನ ಟಿವಿ ಷೋ ಬಗ್ಗೆ ನನ್ನ ಆಕ್ಷೇಪವಿದೆ, ಭಾರತ ಗೌರವ ಪಡೆದುಕೊಂಡಿರುವ ದೇಶ ಅದೇ ರೀತಿ ಪಾಕಿಸ್ತಾನದಲ್ಲಿ ಎಷ್ಟು ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡಲಾಗಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಹೀಗಿರಿಯುವಾಗ ನೀವು ಭಾರತೀಯರು ಪಾಕಿಸ್ತಾನಕ್ಕೆ ಉಗ್ರವಾದಿ ಪಟ್ಟ ಕಟ್ಟಲು ಯತ್ನಿಸುತ್ತಾರೆ ಎಂದಿರುವುದು ಸರಿಯಲ್ಲ. ನಿಮ್ಮಂತವರು ಯಾಕೆ ಈ ರೀತಿ ರಾಷ್ಟ್ರ ವಿರೋಧಿಯಾಗಿ ನಿಲ್ಲುತ್ತಿದ್ದೀರಿ. ಭಾರತದಲ್ಲಿ ಅನೇಕ ಹಿಂದೂಗಳ ಹತ್ಯೆಯಾಗುತ್ತಿದೆ ಅದರ ವಿರುದ್ಧ ಧ್ವನಿಯೆತ್ತಿ.. ನಾನು ನನ್ನ ಮುಂದಿನ ಪ್ರಾಜೆಕ್ಟ್ ಅನ್ನು ಭಾರತೀಯ ಹಿಂದೂಗಳ ಪರವಾಗಿ ಧ್ವನಿಯೆತ್ತಿದ್ದೇನೆ ಅದಕ್ಕಾದರೂ ಸಹಾಯ ಮಾಡಿ.. ಹಿಂದೂಸ್ತಾನ್ ಜಿಂದಾಬಾದ್” ಎಂದು ಪ್ರಿಯಾಂಕಾ ಚೋಪ್ರಾ ಬಳಿ ಮನವಿ ಮಾಡಿಕೊಂಡಿದ್ದಾರೆ.

 


ಏನಿದು ವಿವಾದ :
ಪ್ರಿಯಾಂಕಾ ಛೋಪ್ರ ನಟಿಸಿದ್ದ ಅಮೆರಿಕನ್ ಟಿವಿ ಕಾರ್ಯಕ್ರಮ ಸರಣಿ ಕ್ವಾಂಟಿಕೊ ದಲ್ಲಿ ಆಲೆಕ್ಸ್ ಪ್ಯಾರಿಸ್ ಎಂಬ ಎಫ್‍ಬಿಐ ಏಜೆಂಟ್ ಅಧಿಕಾರಿ ಪಾತ್ರ ಮಾಡಿರುವ ಪಿಗ್ಗಿ ಮ್ಯಾನ್‍ಹಟನ್‍ನಲ್ಲಿ ಪಾಕಿಸ್ತಾನದಲ್ಲಿ ಪರಮಾಣು ದಾಳಿ ಮಾಡಲು ಸಿದ್ಧತೆ ನಡೆಸುತ್ತಿದ್ದ ಶಂಕಿತ ಆರೋಪಿಯನ್ನು ಬಂಧಿಸಿರುತ್ತಾಳೆ. ಆತ ಕೊರಳಲ್ಲಿ ರುದ್ರಾಕ್ಷಿ ಧರಿಸಿರುತ್ತಾನೆ. ರುದ್ರಾಕ್ಷಿ ಧರಿಸಿದ ಹಿನ್ನೆಲೆಯಲ್ಲಿ ಆತನನ್ನು ಹಿಂದೂ ಉಗ್ರಗಾಮಿ ಎಂಬಂತೆ ಸಂಚಿಕೆಯಲ್ಲಿ ತೋರಿಸಲಾಗಿದೆ ಎಂದು ಹಿಂದೂಪರ ಸಂಘಟನೆಗಳು ಪಿಗ್ಗಿ ಮತ್ತು ಕ್ವಾಂಟಿಕೊ ಎಪಿಸೋಡ್ ವಿರುದ್ಧ ಕೆರಳಿದ್ದವು. ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನಿಯರನ್ನು ಸಿಲುಕಿಸಲು ಭಾರತೀಯರು ಯತ್ನಿಸುತ್ತಿದ್ದಾರೆ’ ಎಂದು ಅನೇಕರು ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top