ಸಮಾಚಾರ

ಚಾರ್ಮಾಡಿ ಘಾಟ್ ಮಣ್ಣು ಕುಸಿತವನ್ನು ಕೆಲವೇ ಘಂಟೆಯಲ್ಲಿ ತೆರವು ಮಾಡಿಸಿದ ರಿಯಲ್ ಸಿಂಗಂ ಅಣ್ಣಾಮಲೈ

ಚಾರ್ಮುಡಿ ಘಾಟ್ ರಸ್ತೆಯಲ್ಲಿ ಮಣ್ಣು ಕುಸಿತ ಸಂಭವಿಸಿದ ಸಂದರ್ಭದಲ್ಲಿ ಸಾಮಾನ್ಯ ರಂತೆ ಆಗಮಿಸಿ ಕಾರ್ಯಾಚರಣೆಯಲ್ಲಿ ಮಾಡಿ ಚಿಕ್ಕಮಗಳೂರು ಎಸ್ ಪಿ ಅಣ್ಣಾ ಮಲೈ ಯವರು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಈಗ ಅಭಿನಂದನೆಯ ಮಹಾಪೂರ ಹರಿದು ಬರುತ್ತಿದೆ.

ಜೋರಾಗಿರುವ ಮುಂಗಾರು ಅಬ್ಬರಕ್ಕೆ ಚಾರ್ಮಾಡಿ ಘಾಟ್​ ರಸ್ತೆಯಲ್ಲಿ ಗುಡ್ಡ ಕುಸಿತವಾದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಘಾಟ್​​ನ ರಸ್ತೆಯ 2ನೇ ಮತ್ತು 3ನೇ ತಿರುವಿನಲ್ಲಿ ಮಂಗಳವಾರ ಗುಡ್ಡಕುಸಿತವಾಗಿತ್ತು, ಬೆಂಗಳೂರು ಕಡೆ ಸಂಚರಿಸುವ ಬಸ್ಸು ಸೇರಿದಂತೆ ಅನೇಕ ವಾಹನಗಳು ಇಂದು ನಸುಕಿನಿಂದ ಮುಂದಕ್ಕೆ ಸಂಚರಿಸಲಾಗದೆ ನಿಂತಿದ್ದವು. ಬಸ್ಸಿನಲ್ಲಿರುವ ಪ್ರಯಾಣಿಕರು ಪರದಾಡುವಂತಾಗಿದೆ. . ಮಂಗಳೂರಿನಿಂದ ಬೆಂಗಳೂರಿಗೆ ಧರ್ಮಸ್ಥಳ ಹಾಗೂ ಉಜಿರೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿತ್ತು. ಬಸ್ಸಿನಲ್ಲಿರುವ ಪ್ರಯಾಣಿಕರು ಪರದಾಡುವಂತಾಗಿತ್ತು.

 

 

ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಅಣ್ಣಾಮಲೈ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲು ಶುರು ಮಾಡಿದರು. ಕೆಲವೇ ಗಂಟೆಗಳಲ್ಲಿ ಮಣ್ಣು ಕುಸಿತ ತೆರವು ಮಾಡಿ ರಸ್ತೆ ಸಂಚಾರಕ್ಕೆ ಸುಗಮ ಮಾಡಿಕೊಟ್ಟರು. ಆಮೇಲೆ ಎಲ್ಲ ಟ್ರಾಫಿಕ್ ಕ್ಲಿಯರ್ ಆಯಿತು. ಅಣ್ಣಾಮಲೈ ಅವರ ಜನಪರ ಕಾಳಜಿಕೆ ಅಪಾರ ಪ್ರಶಂಶೆ ವ್ಯಕ್ತವಾಗಿದೆ. ಸ್ಥಳೀಯರು ಹಾಗು ಪೊಲೀಸರು ಕಾರ್ಯಾಚರಣೆ ಮಾಡಿ ರಸ್ತೆ ತೆರವು ಮಾಡಿದರು. ಜೆಸಿಬಿ ಯಂತ್ರಗಳಿಂದ ಮಣ್ಣು ತೆಗೆದರು.

ಧಾರಾಕಾರ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಇತ್ತ ಚಿಕ್ಕಮಗಳೂರಿನ 4 ತಾಲೂಕುಗಳಿಗೆ ಜಿಲ್ಲಾಡಳಿತ ರಜೆ ನೀಡಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top