ಸಮಾಚಾರ

ದೀಪಿಕಾ ಬಳಿ ಇರುವ ಈ ದುಬಾರಿ ಬ್ಯಾಗ್ ಮಾರಿದ್ರೆ ಯುರೋಪ್ ಟೂರ್ ಮಾಡಬಹುದು

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪದ್ಮಾವತ್ ಚಿತ್ರದ ಬಳಿಕ ಸದ್ಯ ಯಾವುದೇ ಸಿನಿಮಾ ಮಾಡ್ತಿಲ್ಲ. ಆಗಾಗ ರಣಬೀರ್ ಕಪೂರ್ ಜೊತೆಗೆ ಸುತ್ತಾಡಿ ಮಾಧ್ಯಮದಲ್ಲಿಯೂ ಸುದ್ದಿಯಲ್ಲಿರುತ್ತಾಳೆ. ಮಾಧ್ಯಮದವರು ಎಷ್ಟೇ ಕೇಳಿಕೊಂಡರು ದೀಪಿಕಾ ಹಾಗು ರಣಬೀರ್ ತಮ್ಮ ಪ್ರೀತಿಯ ಬಗ್ಗೆ ಎಲ್ಲಿ ಕೂಡ ಹೇಳಿಕೊಂಡಿದಿಲ್ಲ. ಇತ್ತೀಚಿಗೆ ದೀಪಿಕಾ ಮುಂಬೈ ವಿಮಾನ ನಿಲ್ದಾಣದಲ್ಲಿ ತನ್ನಿಷ್ಟದ ಬ್ಯಾಗ್ ಹಿಡಿದು ಬರ್ತಿದ್ದ ದೀಪಿಕಾ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾಳೆ.

 

 

 

ಮುಂಬೈ ವಿಮಾನ ನಿಲ್ದಾಣದಲ್ಲಿ ತನ್ನಿಷ್ಟದ ಬ್ಯಾಗ್ ಹಿಡಿದು ಓಡಾಡುತ್ತಿದ್ದಳು. ಈ ಐಷಾರಾಮಿ ದುಬಾರಿ ಬ್ಯಾಗಿನ ಬೆಲೆ ಕೇಳಿದ್ರೆ ಅಭಿಮಾನಿಗಳು ದಂಗಾಗ್ತಾರೆ. ದೀಪಿ ಬಳಿ ಇರುವ ಶನೆಲ್ ಬ್ರ್ಯಾಂಡ್ ನ Deauville tote bag ಬೆಲೆಯಲ್ಲಿ ನೀವು ಆರಾಮವಾಗಿ ಯುರೋಪ್ ಪ್ರವಾಸ ಮುಗಿಸಬಹುದು. ಹೌದು ಅಷ್ಟು ದುಬಾರಿಯಾಗಿದೆ ಈ ಬ್ಯಾಗ್.

ಈ ಐಷಾರಾಮಿ ಬ್ಯಾಗಿನ ಬೆಲೆ 2.9 ಲಕ್ಷ ರೂಪಾಯಿ. ಇಷ್ಟು ಬೆಲೆಯಲ್ಲಿ 10 ದಿನಗಳ ಕಾಲ ಯುರೋಪನ್ನು ಆರಾಮವಾಗಿ ಸುತ್ತಬಹುದಾಗಿದೆ. 3 ಸ್ಟಾರ್ ಹೊಟೇಲ್ ನಲ್ಲಿ ಉಳಿಯುವ ಜೊತೆಗೆ ಮೂರ್ನಾಲ್ಕು ನಗರಗಳನ್ನು ಸುತ್ತಬಹುದು. ದೀಪಿಕಾ ಬ್ಯಾಗ್ ಬೆಲೆ ಕೇಳಿದ ಅಭಿಮಾನಿಗಳು ಹುಬ್ಬಿರಿಸುವಂತೆ ಆಗಿದೆ.

ಇನ್ನು ನವೆಂಬರ್ ನಲ್ಲಿ ದೀಪಿಕಾ ಮಾಡುವೆ ಆಗಲಿದೆ ಎಂಬ ಸುದ್ದಿ ಕೂಡ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ. ವಿರುಷ್ಕಾ ರೀತಿ ಇಟಲಿಯಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top