ಮನೋರಂಜನೆ

ದೀಪಿಕಾ ಪಡುಕೋಣೆ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಗಢ- ಪದ್ಮಾವತಿ ಸೇಫ್

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರ ಫ್ಲ್ಯಾಟ್‌ ಇರುವ ಬಿವುಮಾಂಡೆ ಟವರ್ ಬಹುಮಹಡಿ ಅಪಾರ್ಟ್‌ಮೆಂಟ್‌ ಕಟ್ಟಡದಲ್ಲಿ ಇಂದು ಮಧ್ಯಾಹ್ನ ಇದ್ದಕ್ಕಿದ್ದ ಹಾಗೆ ಬೆಂಕಿ ಅವಘಡ ಸಂಭವಿಸಿದೆ. ಸಡನ್ನಾಗಿ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ

 

 

ಬರೋಬ್ಬರಿ ಮೂವತ್ಮೂರು ಮಹಡಿಗಳನ್ನು ಹೊಂದಿರುವ ಬಿವುಮಾಂಡೆ ಕಟ್ಟಡದ ಬಿ ವಿಭಾಗದ ಕೊನೆಯ ಎರಡು ಅಂತಸ್ತಿಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆ ಆಕಾಶಕ್ಕೆ ಚಿಮ್ಮುತ್ತಿದೆ. ಇದೇ ಕಟ್ಟಡದ 26ನೇ ಅಂತಸ್ತಿನಲ್ಲಿ ದೀಪಿಕಾ ಪಡುಕೋಣೆ ವಾಸಿಸುತ್ತಿರುವುದರಿಂದ ಅಭಿಮಾನಿಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಬೆಂಕಿ ಅವಘಡ ಸಂಭವಿಸಿದ್ದ ವೇಳೆ ದೀಪಿಕಾ ಅವರು ಪ್ಲಾಟ್ ನಲ್ಲಿ ಇರಲಿಲ್ಲ ಅವರು ಖಾಸಗಿ ಬ್ರಾಂಡ್ ವೊಂದರ ಚಿತ್ರೀಕರಣಕ್ಕಾಗಿ ಹೊರಹೋಗಿದ್ದರು ಎಂದು ಮೂಲಗಳು ತಿಳಿಸಿವೆ. ದೀಪಿಕಾ ಅವರ ಮನೆಗಾಗಲೀ ಕಚೇರಿಗಾಗಿ ಬೆಂಕಿ ತಾಗಿಲ್ಲ; ಬೆಂಕಿ ಕಂಡುಬಂದಿರುವುದು 32ನೇ ಅಂತಸ್ತಿನಲ್ಲಿ. ಈಗಾಗಲೇ ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿ ಶಾಮಕ ಸಿಬ್ಬಂದಿ ತೊಡಗಿದ್ದು ಬೆಂಕಿ ಅವಘಡದಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅಗ್ನಿ ಶಾಮಕ ದಳದ ಮೂಲಗಳು ತಿಳಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top