ಮನೋರಂಜನೆ

“ಸಲ್ಮಾನ್ ಖಾನ್ ನನ್ನ ಅಣ್ಣಾ” ಕತ್ರಿನಾ ಕೈಫ್ ಅಚ್ಚರಿಯ ಹೇಳಿಕೆ.

ಕತ್ರಿನಾ ಮತ್ತು ಸಲ್ಮಾನ್ ನಡುವಿನ ಗೆಳೆತನ ಇಂದು ನಿನ್ನೆಯದ್ದಲ್ಲ. ಆರಂಭದ ದಿನಗಳಲ್ಲಿ ಕತ್ರಿನಾ ಕಷ್ಟದಲ್ಲಿದ್ದಾಗ ಹೆಗಲಾಗಿದ್ದಾತ ಸಲ್ಮಾನ್‌ಖಾನ್. ಆ ಕಾಲದಲ್ಲಿ ಕೈ ಕೈ ಹಿಡಿದು ಓಡಾಡುತ್ತಿದ್ದ ಇವರಿಬ್ಬರ ಸುತ್ತಾ ನಾನಾ ರೂಮರುಗಳು ಹರಿದಾಡಿದ್ದವು. ಅದರಂತೆಯೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ ಬ್ರೇಕಪ್ಪೂ ನಡೆದಿತ್ತು ಎಂದು ಬಾಲಿವುಡ್ ನಲ್ಲಿ ದಂತಕತೆಗಳೇ ಹುಟ್ಟಿಕೊಂಡಿವೆ. ಹೀಗಿರುವಾಗ ಕತ್ರಿನಾ ಕೈಫ್ ಸಲ್ಮಾನ್ ಖಾನ್ ನನ್ನು ಅಣ್ಣಾ ಎಂದು ಕರೆದು ಎಲ್ಲರನ್ನು ಬೆಚ್ಚಿಬೀಳಿಸಿದ್ದಾಳೆ.

 

 

ಬಾಲಿವುಡ್ ತುಂಬಾ ಬ್ಯಾಡ್‌ಬಾಯ್ ಅಂತಲೇ ಕರೆಸಿಕೊಳ್ಳುವ ಸಲ್ಮಾನ್‌ಖಾನ್ ಸೆಲೆಬ್ರಿಟಿ ಬ್ಯಾಚುಲರ್. ಒಂದು ವಿವಾದದ ಬಗ್ಗೆ ನೇರಾ ನೇರ ಪ್ರಶ್ನೆ ಕೇಳಿದಾಗಲೂ ಬಿಂದಾಸಾಗಿಯೇ ಉತ್ತರಿಸುವ ಸಲ್ಲು ಜೊತೆ ಸೀರಿಯಸ್ಸಾಗಿ ಲವ್ವಲ್ಲಿ ಬಿದ್ದಿದ್ದವಳು ಹಾಟ್ ಬ್ಯೂಟಿ ಕತ್ರಿನಾ ಕೈಫ್. ಆದರೆ ಯಾವ ಕಾರಣಕ್ಕೆ ಈ ಇಬ್ಬರ ಪ್ರೀತಿಗೆ ಎಳ್ಳು ನೀರು ಬಿದ್ದಿತ್ತು ಎಂಬ ವಿಚಾರ ಇಂದಿಗೂ ನಿಗೂಢವಾಗಿಯೇ ಉಳಿದಿದೆ.

ಸದ್ಯ ಜಬ್‌‌ ಥಕ್‌ ಹೈ ಜಾನ್‌ ಚಿತ್ರದ ಪ್ರಮೋಷನ್‌‌ನಲ್ಲಿ ಬ್ಯುಸಿಯಾಗಿರುವ ಕತ್ರಿನಾ ಶಾರುಖ್‌ ಜತೆ ಕೋಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದಳು. ಈ ವೇಳೆ ಮಾದ್ಯಮದವರು ಸಲ್ಮಾನ್ ಕುರಿತು ಪ್ರಶ್ನಿಸಿದಾಗ ‘ಸಲ್ಮಾನ್ ನನ್ನ ಹಿರಿಯ ಅಣ್ಣನಂತೆ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕತ್ರಿನಾ ಈ ರೀತಿ ಹೇಳಿರುವುದು ಬಾಲಿವುಡ್ ಅಂಗಳದಲ್ಲಿ ತರಹೇವಾರಿಯಾಗಿ ಚರ್ಚೆಯಾಗುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top