fbpx
ಮನೋರಂಜನೆ

ಕೊಹ್ಲಿ ನೀಡಿದ್ದ ಸವಾಲು ಪೂರ್ಣಗೊಳಿಸಿ ಕುಮಾರಸ್ವಾಮಿಗೆ ಚಾಲೆಂಜ್ ಮಾಡಿದ ಪ್ರಧಾನಿ ಮೋದಿ.

ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರು ‘ನಾನು ಫಿಟ್ ಆದ್ರೆ ಭಾರತ ಫಿಟ್ (#HumFitTohIndiaFit )’ ಎಂಬ ಅಭಿಯಾನದ ಅಡಿಯಲ್ಲಿ ಎಲ್ಲ ಭಾರತೀಯರು ತಮ್ಮ ಫಿಟ್‌ನೆಸ್‌ ಮಂತ್ರದ ಬಗ್ಗೆ ವಿಡಿಯೊ ಮಾಡಿ ಹಂಚಿಕೊಳ್ಳಲು ಟ್ವಿಟರ್‌ನಲ್ಲಿ ಕರೆ ನೀಡಿದ್ದರು. ಈ ಫಿಟ್ನೆಸ್ ಅಭಿಯಾನ ಇದೀಗ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮೇ 22 ರಂದು ಟ್ವಿಟರ್​ನಲ್ಲಿ ಆರಂಭವಾಗಿದ್ದ ಈ #FitnessChallengeನ್ನು ಪ್ರಥಮವಾಗಿ ಸ್ವೀಕರಿಸಿದ್ದ ​ ವಿರಾಟ್​ ಕೊಹ್ಲಿ, ಮೇ 24 ರಂದು ಪ್ರಧಾನಿ ಮೋದಿಗೆ ಫಾರ್ವರ್ಡ್ ಮಾಡಿದ್ದರು ಅದನ್ನು ಸ್ವೀಕರಿಸಿದ್ದ ಮೋದಿ ಇದೀಗ ಕೊಹ್ಲಿಯ ಸವಾಲನ್ನು ಕಂಪ್ಲೀಟ್ ಮಾಡಿದ್ದು ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿಗೆ ರವಾನಿಸಿದ್ದಾರೆ.

 

 

ಮೋದಿ ತಮ್ಮ ಫಿಟ್ನೆಸ್ ವಿಡಿಯೋ ಒಂದನ್ನು ಟ್ವಿಟರ್ ನಲ್ಲಿ ಪೋಸ್ಟ್​ ಮಾಡಿದ್ದಾರೆ. ಇದರೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತಕ್ಕೆ ಅತಿ ಹೆಚ್ಚು ಪದಕ ತಂದುಕೊಟ್ಟ ಮಾಣಿಕಾ ಭಟ್ರ ಸೇರಿದಂತೆ 40 ವರ್ಷಕ್ಕೂ ಮೇಲ್ಪಟ್ಟ IPS ಅಧಿಕಾರಿಗಳಿಗೆ #FitnessChallenge ನ್ನು ಪಾಸ್​ ಮಾಡಿದ್ದಾರೆ.

ಮೋದಿ ಅಪ್ಲೋಡ್ ಮಾಡಿರುವ ಸುಮಾರು 2 ನಿಮಿಷದ ಈ ವಿಡಿಯೋದಲ್ಲಿ ಮೋದಿ  ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶ ಎಂಬ ಪಂಚತತ್ವದಿಂದ ಅಥವಾ ಪ್ರಕೃತಿಯ ಪಂಚಭೂತಗಳಿಂದ ಪ್ರೇರಣೆ ಪಡೆದಿದ್ದೇನೆ. ಯೋಗದಿಂದ ಉಲ್ಲಾಸಭರಿತನಾಗುತ್ತೇನೆ. ನಾನು ಪ್ರಾಣಯಾಮವನ್ನು ಅಭ್ಯಸಿಸುತ್ತೇನೆ. ಯೋಗಾಭ್ಯಾಸ ಮಾತ್ರವಲ್ಲದೇ ನಾನು ಪ್ರತಿನಿತ್ಯ ಒಂದಷ್ಟು ಸಮಯ ವಾಕ್ ಮಾಡುತ್ತೇನೆ. ಇದು ನನ್ನನ್ನು ದಿನಪೂರ್ತಿ ಲವಲವಿಕೆಯಿಂದ ಇರುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ. ಮೋದಿ ನೀಡಿರುವ ಚಾಲೆಂಜನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಗೆ ಕಂಪ್ಲೀಟ್ ಮಾಡ್ತಾರೆ ಎಂದು ಕಾದುನೋಡಬೇಕಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top