fbpx
ಮನೋರಂಜನೆ

ಶ್ರೀರೆಡ್ಡಿ- ನಾನಿ ಕಾಸ್ಟಿಂಗ್ ಕೌಚ್ ಕಿತ್ತಾಟ- ಅಖಾಡಕ್ಕಿಳಿದ ನಟ ನಾನಿ ಪತ್ನಿ.

ತೆಲುಗು ಚಿತ್ರರಂಗದಲ್ಲಿ ಬೇರೂರಿರುವ ಪಾತ್ರಕ್ಕಾಗಿ ಮಂಚಕ್ಕೆ ಕರೆಯುವವ ಕಾಮುಕರ ವಿರುದ್ಧ ನಿರ್ಣಾಯಕ ಸಮರ ಸಾರಿರುವ ಬಾಲಿವುಡ್ ಮೂಲದ ನಟಿ ಶ್ರೀರೆಡ್ಡಿಯ ವಿವಾದಗಳು ಯಾವುದೇ ಅಡೆತಡೆಯಿಲ್ಲದೆ ಭರ್ಜರಿಯಾಗಿ ಮುಂದುವರೆದಿವೆ. ಮಹೇಶ್ ಬಾಬು, ಪವನ್ ಕಲ್ಯಾಣ್‌ರಂಥಾ ಅತ್ಯಂತ ಪ್ರಭಾವಿ ಸ್ಟಾರ್ ನಟರನ್ನೂ ಬಿಡದೆ ತಡವಿಕೊಂಡಿರುವ ಈಕೆ ಒಂದು ಕಡೆಯಿಂದ ಎಲ್ಲರನ್ನೂ ಟಾರ್ಗೆಟ್ ಮಾಡುತ್ತಾ ಪ್ರತಿಯೊಬ್ಬರ ಮಾನ ಮರ್ಯಾದೆಗಳನ್ನು ಮೂರ್ಕಾಸಿಗೆ ಹರಾಜಿಡುತ್ತಿದ್ದಾಳೆ. ತೆಲುಗಿನ ಖ್ಯಾತ ನಟ ನ್ಯಾಚುರಲ್ ಸ್ಟಾರ್ ನಾನಿಯನ್ನು ಕಾಮುಕ, ಅವನಿಗೆ ಹುಡುಗಿಯರ ಶೋಕಿ ಎಂದೆಲ್ಲಾ ಎಂದು ಕರೆದು ಅಖಾಡಕ್ಕಿಳಿದಿದ್ದ ಶ್ರೀರೆಡ್ಡಿ ಇದೀಗ ಆತನ ವಿರುದ್ಧ ಮತ್ತೊಂದು ಸುತ್ತಿನ ಸಮರ ಸರಿದ್ದಾಳೆ.

 

 

ಶ್ರೀರೆಡ್ಡಿಗೆ ನಾನಿ ಪತ್ನಿ ಟಾಂಗ್:
ಇದೀಗ ಈಕೆ ಮತ್ತು ನಾನಿ ನಡುವಿನ ಕಿತ್ತಾಟಕ್ಕೆ ಸ್ವತಃ ನಾನಿ ಅವರ ಧರ್ಮಪತ್ನಿ ಅಂಜಲಿ ಅವರೇ ಎಂಟ್ರಿ ಕೊಟ್ಟಿದ್ದು ಬೆತ್ತಲೆ ಸ್ಟಾರ್ ಶ್ರೀರೆಡ್ಡಿಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಂಜಲಿ “ಈ ಚಿತ್ರರಂಗ ಹೆಚ್ಚು ಕ್ಷಮಾಗುಣವನ್ನ ಹೊಂದಿದೆ. ಆದ್ರೆ, ಪಬ್ಲಿಸಿಟಿಗಾಗಿ ಬೇರೆಯವರ ಜೀವನವನ್ನ ಹಾಳುಮಾಡುವಂತವರು ಸಿನಿರಂಗಕ್ಕೆ ಬರುವುದು ನನಗೆ ತುಂಬಾ ನೋವುಂಟು ಮಾಡುತ್ತಿದೆ. ಅಂತವರು ಕೊಡುತ್ತಿರುವ ಹೇಳಿಕೆಗಳಿಂದಲೇ ಗೊತ್ತಾಗುತ್ತಿದೆ ಯಾರೂ ಸಭ್ಯರು? ಯಾರು ಅಸಭ್ಯರು ಎಂದು. ತಮ್ಮ ಪ್ರಚಾರಕ್ಕಾಗಿ ಇಷ್ಟು ಕೀಳುಮಟ್ಟಕ್ಕೆ ಇಳಿದಿರುವುದು ದೊಡ್ಡ ದುರಂತ” ಎಂದು ಟ್ವೀಟ್ ಮಾಡಿದ್ದಾರೆ.

 

 

ಶ್ರೀರೆಡ್ಡಿ ಮಾಡಿದ್ದ ಪೋಸ್ಟ್ ಏನು?
ನಾನಿಗೂ ನನಗೆ ದೈಹಿಕ ಸಂಭಂದವಿತ್ತು ಎಂದು ಹೇಳಿ ನ್ಯೂಕ್ಲಿಯರ್ ಬಾಂಬ್ ಸಿಡಿಸಿರುವ ಶ್ರೀರೆಡ್ಡಿ ತನ್ನ ಫೇಸ್ಬುಕ್ ಪೇಜ್ ನಲ್ಲಿ “Nani + Sri reddy = Dirty picture…. When ?? Coming Soon .. On the Way” ಎಂದು ಬರೆದುಕೊಂಡಿದ್ದಾಳೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ತೆಪ್ಪಗಿದ್ದ ಈಕೆ ಫಾರ್ಮ್’ಗೆ ಮರಳಿದ್ದು “ನಾನಿ ಮತ್ತು ನನ್ನದು ಲವ್ ಸ್ಟೋರಿ ಅಲ್ಲ, ಅದು ಕಾಮ ಸ್ಟೋರಿ ಅದನ್ನು ಆದಷ್ಟು ಬೇಗ ಬಯಲು ಮಾಡ್ತೀನಿ, ಆತ ತನ್ನ ಜತೆ ದೈಹಿಕ ಸಂಪರ್ಕ ನಡೆಸಿರುವುದಾಗಿ ಆರೋಪಿಸಿದ್ದಾರೆ” ಎಂದು ಕುತೂಹಲ ಮೂಡಿಸಿದ್ದಳು.

 

 

ತಿರುಗೇಟು ನೀಡಿದ್ದ ನಾನಿ:
ಕಳೆದ ಸಾಕಷ್ಟು ದಿನಗಳಿಂದ ಯಾವುದೇ ಆಧಾರವಿಲ್ಲದ ತಮ್ಮ ಮಾನವನ್ನು ನಡುಬೀದಿಯಲ್ಲಿ ಮೂರು ಕಾಸಿಗೆ ಹರಾಜು ಹಾಕುತ್ತಿರುವ ಶ್ರೀರೆಡ್ಡಿ ವಿರುದ್ಧ ಇಷ್ಟು ದಿನ ಅವುಡುಗಚ್ಚಿ ಕುಳಿತಿದ್ದ ನಟ ನಾನಿ ಇದೀಗ ನೇರಾವಾಗಿ ಅಖಾಡಕ್ಕಿಳಿದಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ತಮ್ಮ ಹೆಸರನ್ನು ಹಾಳುಮಾಡಲು ಯತ್ನಿಸಿದವರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದರು.

“ನನ್ನ ವಿರುದ್ಧ ಇಷ್ಟಬಂದ ಹಾಗೆ, ಮಾತಾಡಿ ವಿನಾಕಾರಣ ಟಾರ್ಗೆಟ್ ಮಾಡುವುದು ಬೇಸರದ ವಿಚಾರ. ನನ್ನ ಚಾರಿತ್ರ್ಯವದೆ ಮಾಡಲು ಪ್ರಯತ್ನ ಪಡುತ್ತಿರುವವರ ವಿರುದ್ಧ ವಾಗ್ದಾಳಿ ಮಾಡಲು ನನಗೆ ಇಷ್ಟವಿಲ್ಲ., ನನ್ನ ವಿರುದ್ಧ ಮಾಡುತ್ತಿರುವ ಸುಳ್ಳು ಆರೋಪಗಳ ಕುರಿತು ನಾನು ತಲೆಕೆಡಿಸಿಕೊಳ್ಳುವುದಿಲ್ಲ.. ಆದರೆ ಸಮಾಜದ ಬಗ್ಗೆ ನನಗೆ ಭಯವಾಗುತ್ತಿದೆ. ಪ್ರಚಾರಕ್ಕಾಗಿ ಹೇಗೆಲ್ಲಾ ವರ್ತಿಸುತ್ತಿದ್ದಾರೆ, ಇದು ಜನರಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದೇ ನನ್ನ ಯೋಚನೆ. ಪ್ರತಿಯೊಬ್ಬರಿಗೂ ಫ್ಯಾಮಿಲಿಗಳು ಇರುತ್ತೆ ಅಲ್ಲವೇ? ಇಂತಹವರ ವಿರುದ್ಧ ನಾನು ಕಾನೂನು ಕ್ರಮ ತೆಗೆದುಕೊಳ್ಳುವೆ” ಎಂದು ಬರೆದುಕೊಳ್ಳುವ ಮೂಲಕ ಶ್ರೀರೆಡ್ಡಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದರು.

 

&nbs

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top