ಸಮಾಚಾರ

ರಜನಿಕಾಂತ್ ನಟಿಸೋದನ್ನು ನಿಲ್ಲಿಸಲಿ ಎಂದು ಹೇಳಿದ ಮಹಿಳೆ ಯಾರು ಗೊತ್ತೇ

ಚಿತ್ರರಸಿಕರಿಂದ ‘ತಲೈವಾ’ ಎಂದೇ ಕರೆಸಿಕೊಳ್ಳುವ ರಜನಿ ಕಾಂತ್ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ. ರಜನಿ ಚಿತ್ರ ಬಿಡುಗಡೆ ದಿನ ಅಭಿಮಾನಿಗಳ ಪಾಲಿಗೆ ಹಬ್ಬವಿದ್ದಂತೆ. ರಜನಿಕಾಂತ್‌ ಇಡೀ ದೇಶ ಕಂಡ ಅತ್ಯುತ್ತಮ ನಟರಾಗಿದ್ದಾರೆ. ಯಾವ ಪಾತ್ರ ನೀಡಿದರು ಕೂಡ ಅದಕ್ಕೆ ಜೀವ ತುಂಬುವ ತಾಕತ್ತು ಅವರಿಗೆ ಇದೆ. ಅದರಲ್ಲೂ ಮಾಸ್‌ ಸಿನೆಮಾದಲ್ಲಂತೂ ರಜನಿಯ ಸ್ಟೈಲೇ ಬೇರೆಯಾಗಿರುತ್ತೆ.

 

 

 

ಇತ್ತೀಚಿಗೆ ರಜನಿಂಕಾಂತ್ ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡಿ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 234 ಕ್ಷೇತ್ರಗಳಲ್ಲಿ ಸ್ಪರ್ದಿಸುವ ವಾಗ್ದಾನವನ್ನೂ ಮಾಡಿದ್ದಾರೆ.

ಇಂದಿಗೂ ಸಹಿತ ರಜನಿ ಚಿತ್ರಗಳು ಬಿಡುಗಡೆಗೆ ಕಾತುರದಿಂದ ಅಭಿಮಾನಿಗಳು ಕಾಯುತ್ತಾರೆ. ಆದರೆ ಸದ್ಯ ರಜನಿ ಸಿನಿಮಾದಲ್ಲಿ ನಟಿಸೋದನ್ನು ನಿಲ್ಲಿಸಲಿ ಎನ್ನುವ ಕೂಗು ಕೇಳಿ ಬಂದಿದೆ. ಹೀಗೆ ಅಂದಿದ್ದು ಬೇರಾರು ಅಲ್ಲ ಅವರ ಸ್ವಂತ ಮಗಳು ಐಶ್ವರ್ಯ. ಹಾಗಂತ ಅವರೇನು ತಮ್ಮ ತಂದೆ ಸಂಪೂರ್ಣವಾಗಿ ಸಿನಿಮಾ ರಂಗ ತೊರೆಯಲಿ ಎಂದು ಹೇಳಿಲ್ಲ. ಬದಲಾಗಿ ಪೋಷಕ ಪಾತ್ರಗಳಲ್ಲಿ ಅಭಿನಯ ಮಾಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಲ್ಲಿಯವರೆಗೂ ನಮ್ಮ ತಂದೆ ಸಿನೆಮಾಗಳಿಗಾಗಿಯೇ ಹೆಚ್ಚು ಸಮಯ ಕಳೆದಿದ್ದಾರೆ. ಇನ್ನಾದರೂ ತಮ್ಮ ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯಲಿ ಎನ್ನುವುದು ರಜನಿ ಮಗಳ ಬಯಕೆ ಆಗಿದೆ. ಆದರೆ ರಜನಿ ಈಗ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದು ಎರಡು ದೋಣಿಗಳ ಮೇಲೆ ಹೇಗೆ ಸಾಗುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top