ಅರೋಗ್ಯ

ಅಡುಗೆ ಮಾಡಿ ಉಳಿದ ಎಣ್ಣೆನ್ನ ಮತ್ತೆ ಬಳಸುವುದಕ್ಕೂ ಮುಂಚೆ ಒಂದ್ಸಲ ಇದನ್ನ ಓದಿ ಆಮೇಲೆ ನೀವೇ ಯೋಚನೆ ಮಾಡ್ತೀರಾ ಇದು ತಪ್ಪ ಅಥವಾ ಸರಿನ ಅಂತ

ಅಡುಗೆಯೇ ಮಾಡಿ ಉಳಿದ ಎಣ್ಣೆ ಬಳಸೋಕೂ ಮುಂಚೆ ಸ್ವಲ್ಪ ಯೋಚನೆ ಮಾಡಿ ಯಾಕೆ ಅಂತ ಓದಿ

ಸಾಮಾನ್ಯವಾಗಿ ಅಡುಗೆ ಮಾಡಿ ಉಳಿದ ಎಣ್ಣೆನಾ ಶೇಖರಣೆ ಮಾಡಿ ಇಟ್ಕೊಳ್ಳುತ್ತೇವೆ ಎಷ್ಟೋ ಜನಕ್ಕೆ ಇದು ಒಳ್ಳೇದು ಅಂತ ಅನ್ನಿಸಿದ್ರೂ ಸಹ ಒಳ್ಳೆಯದಲ್ಲ ಯಾಕೆ ಗೊತ್ತಾ ?

 

 

ಕೊಬ್ಬಿನಲ್ಲಿ saturated ಹಾಗು unsaturated ಎಂಬ ಎರಡು ವಿಧಗಳಿವೆ ಇದನ್ನು ನಾವು ಒಳ್ಳೆಯ ಹಾಗು ಕೆಟ್ಟ ಕೊಬ್ಬು ಅಂತ ಸಹ ಕರೆಯಬಹುದು ,ಬಜ್ಜಿ ಅಥವಾ ಪೂರಿ ಮಾಡಿ ಉಳಿದ ಎಣ್ಣೆ ಮಾಡಬಾರದು ಅಂತ ಹೇಳ್ತಾರೆ ಇದಕ್ಕೆ ಪೂರಕ ಕಾರಣಗಳಿವೆ .

 

 

ಎಣ್ಣೆ ಮತ್ತೆ ಮತ್ತೆ ಕಾದಾಗ ಟ್ರಾನ್ಸ್ ಫ್ಯಾಟಿ ಆಸಿಡ್ ಹೆಚ್ಚಾಗುತ್ತದೆ ಇದಕ್ಕೆ ಕಾರಣ ಎಣ್ಣೆ ಬಜ್ಜಿ ಹಿಟ್ಟು ಅಥವಾ ಪೂರಿ ಹಿಟ್ಟಿನಲ್ಲಿರುವ ನೀರಿನ ಅಂಶವನ್ನು ತೆಗೆದು ಹೊರಗೆ ಹಾಕುತ್ತದೆ .

ಅಷ್ಟೇ ಅಲ್ಲದೆ ತಳದಲ್ಲಿ ಕರಕಲಾದ ಜಿಡ್ಡು ,ಸುಟ್ಟ ವಸ್ತುಗಳು ಉಳಿದುಕೊಳ್ಳುತ್ತದೆ ಆದ್ದರಿಂದ ಮರು ಬಳಕೆ ಮಾಡುವಾಗ ಹೆಚ್ಚಿನ ಕೊಬ್ಬು ಶೇಖರವಾಗುವ ಅಪಾಯ ಹೆಚ್ಚು .
ಬಳಕೆ ಮಾಡಲೇ ಬೇಕಾದ ಸಂಧರ್ಭದಲ್ಲಿ ಎಣ್ಣೆಯನ್ನು ಬಳಕೆ ಮಾಡಲೇ ಬೇಕಾದ ಸಂಧರ್ಭ ಬಂದರೆ ಎಣ್ಣೆಯನ್ನು ಚೆನ್ನಾಗಿ ಸೋಸಿ ಮರು ಬಳಕೆ ಮಾಡಿ
ಇದು ಅಪಾಯವನ್ನು ಕೊಂಚ ಮಟ್ಟಿಗೆ ತಪ್ಪಿಸುತ್ತದೆ .

ಮರು ಬಳಕೆ ಮಾಡುವ ಎಣ್ಣೆ ರಕ್ತ ನಾಳಗಳಲ್ಲಿ ಕೊಬ್ಬನ್ನು ಶೇಖರಿಸುವುದು ಮತ್ತು ಹೃದಯದ ಅಪಘಾತದ ಸಮಸ್ಯೆಯನ್ನು ಹೆಚ್ಚಿಸುವುದು ಆದ್ದರಿಂದ ಆದಷ್ಟು ಎಣ್ಣೆಯನ್ನು ಮತ್ತೆ ಬಳಸುವುದನ್ನು ತಪ್ಪಿಸಿ ,ಒಂದು ಸಾರಿಗೆ ಎಷ್ಟು ಬೇಕು ಅಷ್ಟೇ ಎಣ್ಣೆ ಬಳಸಿ ಅಪಾಯ ತಪ್ಪಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top