ಸಮಾಚಾರ

ಅಭಿಮಾನಿಗಳ ಕೋಪಕ್ಕೆ ಕಾರಣರಾಗಿ ಟ್ರೊಲ್ ಆದ ಶಾರುಖ್ ಖಾನ್

ಅಪಾರ ಅಭಿಮಾನಿಗಳ ನೆಚ್ಚಿನ ನಟರಾದ ಬಾಲಿವುಡ್ ನಟ ಶಾರುಖ್ ಖಾನ್ ಅವರು ಈಗ ಒಂದು ವಿಚಾರಕ್ಕೆ ಅಭಿಮಾನಿಗಳ ಕೋಪಕ್ಕೆ ಕಾರಣರಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.

 

 

ಜುಲೈ 25ರಂದು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ನಟ ಶಾರೂಖ್​ ಖಾನ್​​ ಸಹೋದರಿ ನೂರ್​​ ಜಹಾನ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಶಾರುಖ ಅಭಿಮಾನಿಗಳು ಮುನಿಸಿಕೊಂಡು ಶಾರೂಖ್​ ಖಾನ್​​ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದಾರೆ, ಅಲ್ಲೇ ಹೋಗಿ ಸೆಟಲ್​ ಆಗಲಿ ಬಿಡಿ. ಹಣ ಭಾರತದ್ದು, ಅಧಿಕಾರ ಪಾಕಿಸ್ತಾನದ್ದು. ಶಾರೂಖ್​ ಖಾನ್ ​ ಪಾಕಿಸ್ತಾನಕ್ಕೆ ಸಲಾಮ್ ಹೊಡೆದು ತಾವು ಅಭಿನಯಿಸಿದ ಚಿತ್ರಗಳನ್ನು ನೋಡಲು ಹೇಳ್ತಾರೆ. ಪಾಕಿಸ್ತಾನಕ್ಕೆ ಹಣವನ್ನು ದೇಣಿಗೆ ಕೊಡುತ್ತಾರೆ. ದಾಳಿ ನಡೆದ ಬೆನ್ನಲ್ಲೇ ಪಾಕಿಸ್ತಾನಿ ನಟಿಯನ್ನ ಬಾಲಿವುಡ್ ಗೆ ಪರಿಚಯಿಸಿದರು. ಹಫೀಜ್​ ಸಯೀದ್​​ ಜೊತೆ ಶಾರೂಖ್​ ​ಗೆ ನಂಟಿದೆ. ಐಪಿಎಲ್ ​ನಲ್ಲಿ ಯಾವಾಗಲು ಪಾಕಿಸ್ತಾನಿ ಆಟಗಾರರು ಇರಬೇಕು ಅಂತಾರೆ, ಅವರಿಗೆ ಬೆಂಬಲ ನೀಡ್ತಾರೆ. ಆದ್ರೂ ಭಾರತ ಅಸಹಿಷ್ಣುತೆಯ ದೇಶ ಅಂತಾರೆ ಎಂದು ಸೋಶಿಯಲ್ ಮೀಡಿಯಾ ದಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top